ಮೈಸೂರು : ಹಸಿರುಲೋಕ ವತಿಯಿಂದ ನ್ಯಾಯಾಲಯದ ಮುಂಭಾಗದ ಚಾಮರಾಜಪುರಂ ಬಡಾವಣೆಯ ಮನುವನ ಉದ್ಯಾನವನದಲ್ಲಿ ಆಯೋಜಿಸಿದ್ದ ‘ಮನೆಗೊಂದು ಗಿಡ’ ಆಯುರ್ವೇದ ಸಸಿಗಳ ವಿತರಣೆ ಅಭಿಯಾನಕ್ಕೆ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿಎಸ್. ಶ್ರೀವತ್ಸ ರವರು ಚಾಲನೆ ನೀಡಿದರು.
ಆಯುರ್ವೇದ ಗಿಡಗಳಾದ ಅಮೃತಬಳ್ಳಿ, ಮೈಸೂರು ವೀಳೆದೆಲೆ, ಅಲೋವೆರಾ, ಉತರಾನಿ, ಲಕ್ಕಿ, ಹಿಪ್ಪಳಿ, ನೀಲಬೇವು, ಆಡಸೋಗೆ, ರನಪಾಲ, ಇನ್ಸೂಲಿನ್, ಕರಿಬೇವು, ಕಾಡಶುಂಠಿ, ನಿಂಬೆ, ಪಪ್ಪಾಯಿ, ದಾಳಿಂಬೆ, ಸೀತಾಫಲ, ಟಿಂಚರ್, ದಾಸವಾಳ, ದೊಡ್ಡಿಪತ್ರೆ, ಕಾಡಕೊತ್ತಮುರಿ ಸೇರಿದಂತೆ 30ತರಹದ ವಿವಿಧ ಜಾತಿಯ ಆಯುರ್ವೇದ ಸಸಿಗಳನ್ನ ವಿತರಿಸಲಾಯಿತು.
ಇದೇ ಸಂಧರ್ಭದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ ಎಸ್. ಶ್ರೀವತ್ಸ ರವರು ಮಾತನಾಡಿ ಮೈಸೂರಿನಲ್ಲಿ ಹಸಿರಿನ ವಾತಾವರಣ ಹೆಚ್ಚಾದಷ್ಟು ಉತ್ತಮ ಆರೊಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಪರಿಸರ ಕಾಳಜಿಯುಳ್ಳ ಚಟುವಟಿಕೆಯಲ್ಲಿ ಯುವಪೀಳಿಗೆ ಪಾಲ್ಗೊಳ್ಳಲು ಗಮನವಹಿಸಬೇಕು, ನೈಸರ್ಗಿಕ ಆಯುರ್ವೇದ ಗುಣಗಳಿರುವ ಆಹಾರಗಳನ್ನ ಸೇವಿಸಿದಷ್ಟು ಮನುಷ್ಯ ಆಯುಷ್ಯವಾಗಿ ಬಾಳುತ್ತಾನೆ ಹಾಗಾಗಿ ಮನೆಗೊಂದು ಗಿಡ ಅಭಿಯಾನ ಹೆಚ್ಚು ಉಪಯುಕ್ತವಾಗಿದೆ ಎಂದರು
ನಂತರ ಹಸಿರುಲೋಕ ಅಭಿಯಾನದ ಸಂಚಾಲಕ ಅಜಯ್ ಶಾಸ್ತ್ರಿ ಮಾತನಾಡಿ ಮಧುಮೇಹ ರಕ್ತದೊತ್ತಡ ನಿಯಂತ್ರಣ ಶೀತ ವಾಯು ಜ್ವರ ಸೊಂಕು ವಿವಿಧ ರೋಗಗಳು ಬರದಹಾಗೇ ದೇಹದ ಅಂಗಾಗಳ ಆರೋಗ್ಯ ನಿರ್ವಹಣೆಯಲ್ಲಿ ಔಷಧಿಯಾಗಿ ಆಯುರ್ವೇದ ಸಸಿಗಳ ಪೋಷಣೆ ಹೆಚ್ಚು ಪರಿಣಾಮಕಾರಿಯಾಗಿ, ಕಳೆದ ಎಂಟು ವರ್ಷಗಳಿಂದಲೂ ಹಸಿರುಲೋಕ ಅಭಿಯಾನ ಆಯೋಜಿಸುತ್ತಾ ಬಂದಿದ್ದು ಈವರ್ಷ ‘ಮನೆಗೊಂದು ಗಿಡ’ ಆಯುರ್ವೇದ ಸಸಿಗಳ ವಿತರಣೆ ಮತ್ತು ಆಯುರ್ವೇದ ಸಸಿಗಳ ಮಹತ್ವ ತಿಳಿಸುವ ಯೋಜನೆ ಹಮ್ಮಿಕೊಂಡಿದ್ದು ಒಂದು ವರ್ಷ ಹಂತಹಂತವಾಗಿ 50ಸಾವಿರ ಸಸಿಗಳ ವಿತರಣೆ ಮಾಡುವ ಗುರಿಯಿದೆ ಎಂದರು
ಹಸಿರುಲೋಕ ಮನೆಗೊಂದು ಗಿಡ ಅಭಿಯಾನದಲ್ಲಿ ಶಾಸಕ ಟಿಎಸ್. ಶ್ರೀವತ್ಸ, ಮೈವಿ ರವಿಶಂಕರ್, ಮಾ.ಮೋಹನ್, ಜೋಗಿ ಮಂಜು, ನಗರಪಾಲಿಕೆ ಮಾಜಿ ಸದಸ್ಯೆ ಸೌಮ್ಯ ಉಮೇಶ್, ಕಸಾಪ ಚಂದ್ರಶೇಖರ್, ಹಸಿರುಲೋಕ ಸಂಚಾಲಕ ಅಜಯ್ ಶಾಸ್ತ್ರಿ, ಜೀವಧಾರ ಗಿರೀಶ್, ರಾಕೇಶ್ ಗೌಡ, ವಿಕ್ರಂ ಅಯ್ಯಂಗಾರ್, ಪ್ರದೀಪ್, ಪ್ರಶಾಂತ್ ಪಚ್ಚಿ, ರಾಜಣ್ಣ, ಸಂದೀಪ್.ಸಿ, ಮಹೇಶ್, ಅರುಣ್, ರಾಘವೇಂದ್ರ, ಚಕ್ರಪಾಣಿ, ಸಂತೋಷ್, ಭೈರತ್ತಿ ಲಿಂಗರಾಜು, ಸಚಿನ್, ಎಸ್.ಎನ್ ರಾಜೇಶ್ ಇನ್ನಿತರರು ಇದ್ದರು