ಪಿರಿಯಾಪಟ್ಟಣ: ಕೋಮಲಾಪುರ ಪಿಎಸಿಸಿಎಸ್ ನೂತನ ಅಧ್ಯಕ್ಷರಾಗಿ ಬಿ.ಬಿ ರಮೇಶ್ ಅವಿರೋಧ ಆಯ್ಕೆಯಾದರು.
ಆಂತರಿಕ ಒಪ್ಪಂದದಂತೆ ಈ ಹಿಂದೆ ಅಧ್ಯಕ್ಷರಾಗಿದ್ದ ಚಲುವೆಗೌಡ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ.ಬಿ ರಮೇಶ್ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿ ಸಿಡಿಓ ಹಿತೇಂದ್ರ ಅವಿರೋಧ ಆಯ್ಕೆ ಎಂದು ಘೋಷಿಸಿದರು.

ಬಳಿಕ ಬೆಂಬಲಿಗರು ಸಿಹಿ ಹಂಚಿ ಪಟಾಕಿ ಸಿಡಿಸಿ ಪಕ್ಷದ ವರಿಷ್ಠರ ಪರ ಜೈಕಾರ ಕೂಗಿ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಈ ವೇಳೆ ನೂತನ ಅಧ್ಯಕ್ಷ ಬಿ.ಬಿ ರಮೇಶ್ ಅವರು ಮಾತನಾಡಿ, ಶೇರುದಾರ ಸದಸ್ಯರ ಹಿತ ಕಾಪಾಡಿ ಸಚಿವರಾದ ಕೆ.ವೆಂಕಟೇಶ್ ಅವರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಸಂಘಕ್ಕೆ ದೊರೆಯುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸಿ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿ ಅಧ್ಯಕ್ಷರಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.
ಈ ಸಂದರ್ಭ ಉಪಾಧ್ಯಕ್ಷ ನಾಗನಾಯಕ, ಮಾಜಿ ಅಧ್ಯಕ್ಷರಾದ ಚಲುವೇಗೌಡ, ಚಂದ್ರೇಶ್, ನಿರ್ದೇಶಕರಾದ ನರಸಿಂಹೇಗೌಡ, ಚಂದ್ರಶೇಖರ್, ಪಾರ್ವತಮ್ಮ, ಶಾಂತಮ್ಮ, ಚಲುವಶೆಟ್ಟಿ, ವೆಂಕಟರಾಮು, ಸಿಇಓ ಪ್ರದೀಪ್, ಸಿಬ್ಬಂದಿ ಬಿ.ಟಿ ಕೃಷ್ಣ, ರಾಜೇಗೌಡ ಮತ್ತಿತರಿದ್ದರು.