ವರದಿ: ವಿನಯ್ ದೊಡ್ಡಕೊಪ್ಪಲು
ಕೆ ಆರ್ ನಗರ : ಭೇರ್ಯ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಬಿ.ಕೆ.ಮಂಜಪ್ಪ ಆಯ್ಕೆಯಾದರು.
ಈವರೆಗೆ ಅಧ್ಯಕ್ಷರಾಗಿದ್ದ ಜಯಲಕ್ಷ್ಮಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ(ಅ) ಮೀಸಲಾಗಿತ್ತು ಕಾಂಗ್ರೆಸ್ ಬೆಂಬಲಿತ ಬಿ.ಕೆ.ಮಂಜಪ್ಪ ಮತ್ತು ಜೆಡಿಎಸ್ ಬೆಂಬಲಿತ ರೇಖಾಮಹದೇವ್ ನಾಮ ಪತ್ರವನ್ನು ಚುನಾವಣಾ ಅಧಿಕಾರಿ ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮಂಜುನಾಥ್ ಅವರಿಗೆ ಸಲ್ಲಿಸಿದ್ದರು.
ನಡೆದ ಚುನಾವಣೆಯಲ್ಲಿ ಬಿ.ಕೆ.ಮಂಜಪ್ಪ 8 ಮತಗಳನ್ನು ಪಡೆದು ಕೊಂಡು ಅಧ್ಯಕ್ಷರಾಗಿ ಆಯ್ಕೆಯಾದರೇ ಪ್ರತಿ ಸ್ಪರ್ಧಿ ರೇಖಾಮಹದೇವ್ 7 ಮತಗಳನ್ನು ಪಡೆದು ಪರಾಭವಗೊಂಡರು ಎಂದು ಚುನಾವಣಾಧಿಕಾರಿ ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮಂಜುನಾಥ್ ಪ್ರಕಟಿಸಿದರು. ಪಿಡಿಓ ಪ್ರತಾಪ್ ಸಹಕರಿಸಿದರು.
ಚುನಾವಣಾ ಸಭೆಯಲ್ಲಿ ಉಪಾಧ್ಯಕ್ಷೆ ರೂಪಹರೀಶ್, ಸದಸ್ಯರಾದ ಬಿ.ಎಲ್.ರಾಜಶೇಖರ್, ಕೃಷ್ಣೇಗೌಡ, ಬಿ.ಪಿ.ಪ್ರಕಾಶ್, ಜಯಲಕ್ಷ್ಮಿ,ತಾಯಮ್ಮ, ಶಾಂತಮ್ಮ, ಮೊಹಸಿನ್ ತಾಜ್, ಜ್ಯೋತಿಮಹೇಶ್ ನಾಯಕ, ಹರ್ಷವರ್ಧನಿ, ಬಿ.ಕೆ.ಕುಮಾರ್, ಬಿ.ಕೆ.ಶಿವಕುಮಾರ್, ಬಿ.ಬಿ.ಶಿವಣ್ಣ ಭಾಗವಹಿಸಿದ್ದರು.
ಈ ವೇಳೆ ನೂತನ ಅಧ್ಯಕ್ಷ ಬಿ.ಕೆ.ಮಂಜಪ್ಪ ಮಾತನಾಡಿ ಭೇರ್ಯ ಗ್ರಾಮವನ್ನು ಹೋಬಳಿ ಕೇಂದ್ರ ಮಾಡಲು ನಮ್ಮ ನಾಯಕರಾದ ಶಾಸಕ ಡಿ.ರವಿಶಂಕರ್ ಜೊತೆ ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ಹಾಕಿ ಹೋಬಳಿ ಕೇಂದ್ರ ಮಾಡಲಾಗುವುದು. ಇದರಿಂದಾಗಿ ಜನರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದರಲ್ಲದೆ ಭೇರ್ಯ ಗ್ರಾಮ ವ್ಯಾಪಾರ ವಹಿವಾಟು ಕೇಂದ್ರವಾಗಿ ಬೆಳೆಯುತ್ತಿದೆ, ಅದಷ್ಟು ಸ್ವಚ್ಚತೆಗೆ ಆದ್ಯತೆ ಕೊಡ ಬೇಕಾಗಿರುವುದರಿಂದ ಕಸ ವಿಲೇವಾರಿ ಘಟಕ ಸ್ಥಾಪನೆಯಾಗ ಬೇಕು ಅಲ್ಲದೆ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ಶಾಸಕರಿಗೆ ಸದಸ್ಯರೊಡಗೂಡಿ ಮನವಿ ಸಲ್ಲಿಸಿ ಒತ್ತಡ ಹಾಕಲಾಗುವುದು, ಹಾಸನ-ಮೈಸೂರು ಹೆದ್ದಾರಿಯಲ್ಲಿ ಗ್ರಾಮ ಇರುವುದರಿಂದ ಗ್ರಾಮದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸದಸ್ಯರ ಜೊತೆಗೂಡಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ನಾಡಗೌಡ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸುದರ್ಶನ್, ಟೈಲರ್ ಸಣ್ಣಯ್ಯ, ರಾಜಯ್ಯ, ಹುಚ್ಷೇಹೌಡ, ತಿಮ್ಮಪ್ಪ, ಸಾಲಿಗ್ರಾಮ ತಾಲೂಕು ಮೀನುಗಾರರ ಸಂಘದ ಅಧ್ಯಕ್ಷ ಉದೇಶ್, ಗ್ರಾಮದ ಮುಖಂಡರಾದ ಕೃಷ್ಣ, ಸಾದೀಕ್ ಖಾನ್, ರಂಗಯ್ಯ ನೂತನ ಅಧ್ಯಕ್ಷ ಬಿ.ಕೆ.ಮಂಜಪ್ಪ ಅವರಿಗೆ ಹಾರಹಾಕಿ ಅಭಿನಂದಿಸಿದರು.