ಮೈಸೂರು: ಮೈಮುಲ್ ಅಧ್ಯಕ್ಷ ಪ್ರಸನ್ನ ರಾಜಿನಾಮೆಯಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ದಿನಾಂಕ: ೭-೮-೨೦೨೪ರಂದು ನಡೆಯುವ ಚುನಾವಣೆಯಲ್ಲಿ ಮೈಸೂರು ತಾಲ್ಲೂಕು ಗೋಪಾಲಪುರದ ಮೈಮುಲ್ ನಾಮನಿರ್ದೇಶನ ಸದಸ್ಯ ಬಿ. ಗುರುಸ್ವಾಮಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಬಿ. ಗುರುಸ್ವಾಮಿಯವರು ಗೋಪಾಲಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ಗೋಪಾಲಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಕೆಲಸ ಮಾಡಿದ್ದು ಈಗ ಹಾಲಿ ಗ್ರಾ.ಪಂ. ಸದಸ್ಯರು ಹಾಗೂ ಮೈಮುಲ್ ನಾಮನಿರ್ದೇಶನ ಸದಸ್ಯರಾಗಿ ಹಾಗೂ ಧನಗಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತು ಇಲವಾಲ ಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೈಮುಲ್‌ನಲ್ಲಿ ಚುನಾಯಿತ ಸದಸ್ಯರು ೧೫ ಜನರಿದ್ದು, ೪ ಜನ ಸರ್ಕಾರಿ ನಾಮನಿರ್ದೇಶನ ಸದಸ್ಯರಿದ್ದಾರೆ. ಬಿ. ಗುರುಸ್ವಾಮಿಯವರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪರವರು, ಕೆ. ವೆಂಕಟೇಶ್‌ರವರು ಹಾಗೂ ಶಾಸಕರಗಳು, ವಿಧಾನ ಪರಿಷತ್ ಸದಸ್ಯರನ್ನು ಭೇಟಿ ಮಾಡಿ ಮನವಿ ಮಾಡುವುದರ ಜೊತೆಗೆ ಮೈಮುಲ್‌ನ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.