ಮಂಗಳೂರು (ದಕ್ಷಿಣ ಕನ್ನಡ): ಪ್ರಧಾನಿ ಮೋದಿಯವರು ಕೂಡಾ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡ್ತಾ ಇದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಎಲ್ಲ ನಿಗಮದ ಸಾಲವನ್ನು ಮನ್ನಾ ಮಾಡಿದೆ. ಕೃಷಿ ಪಂಪ್ ಸೆಟ್ ಉಚಿತ ಮಾಡಿದ್ದು, ಬಡವರಿಗೆ ಬೇಕಾದ ಕಾರ್ಯಕ್ರಮ ಮಾಡಿದ್ದು ಕಾಂಗ್ರೆಸ್ ಸರಕಾರ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ಬಗ್ಗೆ ಬಿಜೆಪಿಗರು ಕೆಟ್ಟ ಅಭಿಪ್ರಾಯ ಬರುವಂತೆ ಹೇಳಿಕೆ ನೀಡುತ್ತಿದ್ದಾರೆ. ಇವರ ಅಪಪ್ರಚಾರದ ಕುತಂತ್ರ ಬುದ್ದಿಯನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ. ಇನ್ನು ಸರಕಾರದಿಂದ ಕಾಮಗಾರಿಗೆ ಅನುದಾನ ಬಿಡುಗಡೆ ಆಗ್ತ ಇಲ್ಲ ಎಂಬ ಆರೋಪವಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಲ್ಲ ಎಂದು ಯಾವತ್ತು ಹೇಳಿಲ್ಲ. ಆದರೆ ಮಂಜೂರಾತಿ ಇಲ್ಲದೆ ಅಡ್ವಾನ್ಸ್ ಕೆಲಸ ಮಾಡಿದ್ದಾರೆ. ಇದರ ತನಿಖೆ ಆಗ್ತಾ ಇದೆ. ಈ ಬಗ್ಗೆ ತನಿಖೆ ಮುಗಿದ್ರೆ ಎಲ್ಲಾ ಅನುದಾನ ಕೊಡ್ತಾರೆ ಎಂದರು. ಇನ್ನು ಜಿಲ್ಲೆಯಲ್ಲಿನ ಮರಳು ಸಮಸ್ಯೆ ವಿಚಾರವಾಗಿ ಮಾತನಾಡಿದ ಅವರು, ಅಕ್ರಮ ಮರಳುಗಾರಿಕೆ ಶಾಸಕರ ಕುಮ್ಮಕ್ಕಿನಿಂದ ಆಗ್ತಾ ಇತ್ತು.ಈಗ ಆಗ್ತಾ ಇಲ್ಲ, ಸಾಕ್ಷಿ ಆಧಾರ ಸಹಿತ, ಈಗ ಜಿಲ್ಲಾಧಿಕಾರಿ ಮಾಡಬೇಕು. ಅಕ್ರಮ ಮರಳುಗಾರಿಕೆ ತಡೆದಿದ್ದೇವೆ. ನಾಲ್ಕು ವರ್ಷದ ಹಿಂದಿನಿಂದ ಪರ್ಮಿಟ್ ಪಡೆದವರು ವೇವ್ ಬ್ರಿಜ್ ಮಾಡಿಲ್ಲ. ನಾಲ್ಕು ವರ್ಷದಿಂದ ಯಾಕೆ ಮಾಡಿಲ್ಲ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.