Saturday, April 19, 2025
Google search engine

Homeರಾಜ್ಯಬಾಬು ಜಗಜೀವನ್ ರಾಮ್ ಅವರು ದಕ್ಷ ಆಡಳಿತಗಾರರು: ಸಿಎಂ ಸಿದ್ದರಾಮಯ್ಯ

ಬಾಬು ಜಗಜೀವನ್ ರಾಮ್ ಅವರು ದಕ್ಷ ಆಡಳಿತಗಾರರು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಾಬು ಜಗಜೀವನ್ ರಾಮ್ ಅವರು, ದಕ್ಷ ಆಡಳಿತಗಾರರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಸಿರು ಕ್ರಾಂತಿಯ ಹರಿಹಾರ, ರಾಷ್ಟ್ರನಾಯಕ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್‍ ರಾಮ್ ರವರ 37 ನೇ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದ ಪಶ್ಚಿಮದ್ವಾರ ಬಳಿ  ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಸ್ವಾತಂತ್ರ್ಯ ಭಾರತದಲ್ಲಿ ನೆಹರು ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದ, ದೇಶದ ಮೊದಲ ಉಪ ಪ್ರಧಾನಿಯಾಗಿದ್ದ ಬಾಬು ಜಗಜೀವನ್ ರಾಮ್ ಅವರ ಸಮಾಜಮುಖಿ ಕೆಲಸಗಳು ಚಿರಸ್ಥಾಯಿಯಾಗಿವೆ. ಅವರು ಹಸಿರು ಕ್ರಾಂತಿಯ ಮೂಲಕ ದೇಶದಲ್ಲಿ ಆಹಾರ ಸ್ವಾಲಂಬಲನೆಯಾಗಲು ಕಾರಣಕರ್ತರು ಎಂದರು.

ಯಾವುದೇ ಇಲಾಖೆಯಲ್ಲಿದ್ದರೂ ತಳಸಮುದಾಯದ ಜನರಿಗೆ ಸಂವಿಧಾನಬದ್ಧ ನ್ಯಾಯ ದೊರಕಿಸಲು ಹೋರಾಡಿದರು.  ಅವರ ಬದುಕು ನಮಗೆ ಪ್ರೇರಣೆಯಾಗಬೇಕು ಎಂದರು. 

ಅಂಥ ಮಹಾನುಭಾವರ ಪುಣ್ಯಸ್ಮರಣೆ ಮಾಡಿದ್ದು, ಅವರು ನಮಗೆಲ್ಲರಿಗೂ ಮಾರ್ಗದರ್ಶಕರು.  ಅವರ ಮಾರ್ಗದಲ್ಲಿ ನಡೆಯುವ ಪ್ರಯತ್ನವೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದರು.

RELATED ARTICLES
- Advertisment -
Google search engine

Most Popular