ರಾಮನಗರ: ದೇಶಇಂದುಆಹಾರಧಾನ್ಯ ಸ್ವಾವಲಂಬನೆ ಸಾಧಿಸಿರುವುದಕ್ಕೆ ಬಾಬು ಜಗಜೀವನ್‌ರಾಮ್ ಹಾಕಿಕೊಟ್ಟ ಮಾರ್ಗಗಳೇ ಕಾರಣಎಂದುಅಪರಜಿಲ್ಲಾಧಿಕಾರಿ ಶಿವಾನಂದ ಮೂರ್ತಿಅವರುಬಣ್ಣಿಸಿದರು.
ಅವರುಜು ೬ರ ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜಕಲ್ಯಾಣ ಇಲಾಖೆ ವತಿಯಿಂದಆಯೋಜಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಮತ್ತುದೇಶದ ಮಾಜಿಉಪ ಪ್ರಧಾನಿ ಡಾ. ಬಾಬು ಜಗಜೀವನ್‌ರಾಮ್‌ರವರ ೩೮ನೇ ಪುಣ್ಯಸ್ಮರಣೆಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ.ಬಾಬು ಜಗಜೀವನ್‌ರಾಮ್‌ಅವರುಉಪಪ್ರಧಾನಿಯಾಗಿದೇಶಕ್ಕೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ, ರಕ್ಷಣಾ ಮತ್ತು ಕೃಷಿ ಸಚಿವರಾಗಿದೇಶಕ್ಕೆಅಪಾರಕೊಡುಗೆ ನೀಡಿದ್ದಾರೆ, ಕೃಷಿ ಸಚಿವರಾಗಿದ್ದಾಗ ದೇಶದಲ್ಲಿ ಆಹಾರಧಾನ್ಯ ಕೊರತೆಯಾಗಿದ್ದ ಸಂದರ್ಭದಲ್ಲಿಅತಿದೊಡ್ಡ ಬದಲಾವಣೆತಂದು ಹಸಿರು ಕ್ರಾಂತಿ ಮಾಡಿದ್ದನ್ನುಯಾರೂ ಸಹ ಮರೆಯಲಾಗದು ಎಂದರು.
ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ಬಾಬು ಜಗಜೀವನ್‌ರಾಮ್‌ಅವರುದೇಶದ ಉಪಪ್ರಧಾನಿಗಳಾಗಿದ್ದ ಸಂದರ್ಭದಲ್ಲಿಜಾರಿಗೆತಂದ ಹಲವಾರು ಕಾರ್ಯಕ್ರಮಗಳು ಇಂದಿಗೂ ಜನಪರವಾಗಿವೆಎಂದರು.
ಡಿ.ವೈ.ಎಸ್.ಪಿ. ದಿನಕರ್ ಶೆಟ್ಟಿ, ಸಮಾಜಕಲ್ಯಾಣಇಲಾಖೆಯಜಂಟಿ ನಿರ್ದೇಶಕ ಶಿವಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರುಗಳಾದ ಚಲುವರಾಜು, ಶಿವಶಂಕರ್, ದೊಡ್ಡಯ್ಯ, ಶಿವಕುಮಾರಸ್ವಾಮಿ, ಕೃಷ್ಣಮೂರ್ತಿ, ಕನಕಪುರಶಿವಕುಮಾರ್, ಹರೀಶ್ ಬಾಬು, ಅಂಜನಪುರ ವಾಸು, ಗುರುಮೂರ್ತಿ, ಇತರರು ಉಪಸ್ಥಿತರಿದ್ದರು.