Friday, April 18, 2025
Google search engine

Homeಅಪರಾಧದೂರು ನೀಡಿದರೂ ಕೇಸು ದಾಖಲಿಸಿಕೊಳ್ಳದ ಹಿನ್ನೆಲೆ:ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ :ಓರ್ವ...

ದೂರು ನೀಡಿದರೂ ಕೇಸು ದಾಖಲಿಸಿಕೊಳ್ಳದ ಹಿನ್ನೆಲೆ:ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ :ಓರ್ವ ಸಾವು

ತಪ್ಪಿತಸ್ಥನ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ-ಶಾಸಕ ಡಿ.ರವಿಶಂಕರ್

ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು -ಸಾ.ರಾ.ಮಹೇಶ್ ಆಗ್ರಹ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ವ್ಯಕ್ತಿಯೋರ್ವ ಯುವತಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಇದನ್ನು ತಪ್ಪಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಿದರೂ ಕೇಸು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿ ಮನನೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ ಓರ್ವ ಸಾವನ್ನಪ್ಪಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.

ತಾಲೂಕಿನ ಚಂದಗಾಲು ಗ್ರಾಮದ ನಿವಾಸಿಗಳಾದ ಮಹದೇವನಾಯಕ(೬೫), ಪತ್ನಿ ಗೌರಮ್ಮ(೫೦), ಪುತ್ರಿ ಲೀಲಾವತಿ(೩೫) ಮತ್ತು ಮೊಮ್ಮಗಳು ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದು, ಮಹದೇವನಾಯಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕೆ.ಆರ್.ನಗರ ತಾಲೂಕಿನ ಚರ‍್ನಹಳ್ಳಿ ಗ್ರಾಮದ ಲೋಕೇಶ್(೩೫) ಎಂಬಾತ ಪಕ್ಕದ ಚಂದಗಾಲು ಗ್ರಾಮದ ಯುವತಿಯನ್ನು ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಡಿ ಆಕೆಯ ಜೊತೆಗಿದ್ದ ಖಾಸಗಿ ಕ್ಷಣಗಳ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಈ ವಿಡಿಯೋವನ್ನು ಮುಂದಿಟ್ಟುಕೊoಡು ಯುವತಿ ಮೇಲೆ ಒತ್ತಡ ಹೇರಿ ನಿನ್ನ ಸ್ನೇಹಿತೆಯರನ್ನು ಕರೆಯಿಸು ಇಲ್ಲವಾದಲ್ಲಿ ನಾವಿಬ್ಬರು ಜೊತೆಯಾಗಿರುವ ಖಾಸಗಿ ಕ್ಷಣಗಳ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದ ಎನ್ನಲಾಗಿದೆ.

ಆರೋಪಿ ಲೋಕೇಶ್

ಆನಂತರ ಲೋಕೇಶ ಯುವತಿ ಮನೆ ಬಳಿಗೆ ಹೋಗಿ ಗಲಾಟೆ ಮಾಡಿದ್ದಾನೆ ಇದರಿಂದ ಬೆದರಿದ ಅವರ ಕುಟುಂಬದವರು ಕೆ.ಆರ್.ನಗರ ಠಾಣೆಗೆ ಜೂ.೧ ರಂದು ತೆರಳಿ ದೂರು ನೀಡಿದ್ದರೂ ಇದನ್ನು ನಿರ್ಲಕ್ಷಿಸಿದ ಪೊಲೀಸರು ಕೇಸು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಹಾಗಾಗಿ ಮನನೊಂದ ಮಹದೇವನಾಯಕ ತನ್ನ ಪತ್ನಿ, ಮಗಳು ಮತ್ತು ಮೊಮ್ಮಗಳನ್ನು ಮಹದೇಶ್ವರ ಬೆಟ್ಟಕ್ಕೆ ಕರೆದುಕೊಂಡು ಹೋಗಿ ದೇವರ ದರ್ಶನ ಮಾಡಿ ನಂತರ ತಾಳಬೆಟ್ಟದ ಬಳಿ ಜೂನ್ ೮ ರಂದು ಶನಿವಾರ ಬೆಳಿಗ್ಗೆ ೫.೩೦ರ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ.

ವಿಷ ಸೇವಿಸಿದ ನಂತರ ಮಹದೇವನಾಯಕ ಸ್ಥಳದಲ್ಲಿಯೇ ಸಾವನಪ್ಪಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಗೌರಮ್ಮ, ಲೀಲಾವತಿ, ಮತ್ತು ಯುವತಿಯನ್ನು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಸಂಬoಧ ಯುವತಿ ಹೇಳಿಕೆಯ ಮೇರೆಗೆ ಮಲೆ ಮಹದೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮನೆಯ ಯಜಮಾನ ಮಹದೇವನಾಯಕ ಮೃತಪಟ್ಟ ಹಿನ್ನೆಲೆಯಲ್ಲಿ ಶಾಸಕ ಡಿ.ರವಿಶಂಕರ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗ್ರಾಮಸ್ಥರು ಮತ್ತು ಕುಟುಂಬದವರೊoದಿಗೆ ಮಾತುಕತೆ ನಡೆಸಿ ನೊಂದ ಕುಟುಂಬಕ್ಕೆ ಸಮಾಧಾನ ಹೇಳಿ ೨ ಲಕ್ಷ ರೂ ಪರಿಹಾರ ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಪ್ಪಿತಸ್ಥನ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದ್ದು, ಈ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡದೆ ನೊಂದ ಕುಟುಂಬದ ಜತೆಗೆ ನಿಲ್ಲುತ್ತೇನೆ ಎಂದರು.

ಮೃತಪಟ್ಟಿರುವ ಮಹದೇವನಾಯಕನ ದೇಹವನ್ನು ತರಲು ಸಹಕಾರ ನೀಡುವುದರ ಜತೆಗೆ ಆಸ್ಪತ್ರೆಯಲ್ಲಿ ದಾಖಲಾಗಿರುವವರ ಚಿಕಿತ್ಸೆಗೂ ೨೫ ಸಾವಿರ ನೀಡಿ ನೊಂದವರಿಗೆ ಸಂಪೂರ್ಣ ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.

ತಾಲೂಕಿನ ಚಂದಗಾಲು ಗ್ರಾಮದ ಮಹದೇವನಾಯಕನ ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುವ ಚರ‍್ನಹಳ್ಳಿ ಗ್ರಾಮದ ಲೋಕೇಶನನ್ನು ಕೂಡಲೇ ಬಂಧಿಸಬೇಕೆoದು ಗ್ರಾಮಸ್ಥರು ಪಟ್ಟಣದ ಪೊಲೀಸರಿಗೆ ಮನವಿ ನೀಡಿದರು.

ಪೊಲೀಸರಿಗೆ ಮನವಿ

ಡಿವೈಎಸ್‌ಪಿ ಕರೀಂರಾವುತ್ ಅವರನ್ನು ಭೇಟಿ ಮಾಡಿದ ಗ್ರಾಮದ ರಾಘವೇಂದ್ರ, ಸುನೀಲ್, ಸಿ.ಎಸ್.ವೆಂಕಟೇಶ್, ಜವರನಾಯಕ, ಸಿ.ಎನ್.ಕುಮಾರ್, ಅಡಿಕೆರಾಜು, ಸಿ.ಎಂ.ಸoಜು, ಚಂದ್ರು, ಶಂಕರೇಗೌಡ, ಬಿ.ಮಹದೇವ ಮತ್ತು ಕೆ.ಆರ್.ನಗರ ಪಟ್ಟಣ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಅವರುಗಳು ಲಿಖಿತವಾಗಿ ದೂರಿದರು.
ಈ ಸಂದರ್ಭದಲ್ಲಿ ಮಾತನಾಡಿದ ರುದ್ರೇಶ್ ಲೋಕೇಶ್ ಎಂಬಾತ ತನ್ನ ದುವರ್ತನೆಯಿಂದ ರಿಷಿತಾಳಿಗೆ ತೊಂದರೆ ನೀಡಿ ಆಕೆಯ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದ್ದು, ಜೂನ್. ೧ ರಂದು ಮಹದೇವನಾಯಕನ ಕುಟುಂಬದವರು ದೂರು ನೀಡಲು ಬಂದರೂ ಕೆ.ಆರ್.ನಗರ ಪೊಲೀಸರು ಕೇಸು ದಾಖಲಿಸಿ ಕ್ರಮ ಕೈಗೊಂಡಿಲ್ಲ ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಆಗ್ರಹಿಸಿದರು.

ತಪ್ಪು ಮಾಡಿರುವ ಪೊಲೀಸರ ವಿರುದ್ದ ಕಠಿಣ ಕ್ರಮಕೈಗೊಳ್ಳುವುದರ ಜತೆಗೆ ಕೂಡಲೇ ಆರೋಪಿಯನ್ನು ಬಂದಿಸದಿದ್ದರೆ ಮಹದೇವನಾಯಕನ ಶವವನ್ನು ಠಾಣೆಯ ಮುಂದಿಟ್ಟು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಗ್ರಾಮಸ್ಥರ ಮನವಿಯನ್ನು ಆಲಿಸಿದ ಡಿವೈಎಸ್‌ಪಿ ಘಟನೆಯ ಸಂಬoಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮುಖ್ಯಮಂತ್ರಿಗಳ ತವರು ಜಿಲ್ಲೆಯಾಗಿರುವ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಂದಗಾಲು ಗ್ರಾಮದಲ್ಲಿ ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ ಓರ್ವ ಸಾವನ್ನಪ್ಪಿರುವ ಅಮಾನವೀಯ ಘಟನೆ ಶನಿವಾರ ನಡೆದಿದ್ದು, ಈ ಸಂಬoಧ ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಆಗ್ರಹಿಸಿದ್ದಾರೆ.

ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡದೆ ಅವರುಗಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾಗಿ ಕರ್ತವ್ಯ ಲೋಪವೇಸಗಿರುವ ಪೊಲೀಸರ ವಿರುದ್ದವೂ ತ್ವರಿತವಾಗಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಲೂಕಿನ ಚರ‍್ನಹಳ್ಳಿ ಗ್ರಾಮದ ಲೋಕೇಶ್ ಎಂಬಾತನಿಂದ ತೀವ್ರ ಅನ್ಯಾಯವಾಗಿದ್ದು ೨೪ ಗಂಟೆಯೊಳಗೆ ಆರೋಪಿಯನ್ನು ಬಂಧಿಸುವುದರ ಜತೆಗೆ ಸರ್ಕಾರ ನೊಂದ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಹೇಳಿರುವ ಅವರು ಈ ವಿಚಾರದಲ್ಲಿ ನಿರ್ಲಕ್ಷö್ಯ ವಹಿಸಿದರೆ ನಾನು ಕೆ.ಆರ್.ನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಘಟನೆ ಮಾಹಿತಿ ದೊರೆಯುತ್ತಿದ್ದಂತೆ ಹನೂರು ತಾಲೂಕು ತಹಸೀಲ್ದಾರ್ ಗುರುಪ್ರಸಾದ್ ಸೇರಿದಂತೆ ಕೊಳ್ಳೇಗಾಲ ಡಿವೈ ಎಸ್ ಪಿ ದರ್ಮೆಂದ್ರ ಅವರು ಹೋಲಿ ಕ್ರಾಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮಹದೇಶ್ವರಬೆಟ್ಟದ ಪೊಲೀಸರು ಸಹ ತಾಳುಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.

RELATED ARTICLES
- Advertisment -
Google search engine

Most Popular