ಶ್ರೀರಂಗಪಟ್ಟಣ: ಪಿತೃಪಕ್ಷ ಮಾಸಾಚಾರಣೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯಲ್ಲಿ ಆಸ್ತಿಕರ ದಂಡು ಕಂಡು ಬಂದಿದ್ದು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಆಸ್ತಿಕರು ತಿಲತರ್ಪಣ ಅರ್ಪಣೆಗೆ ಬಂದಿದ್ದಾರೆ.
ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ, ಸ್ನಾನಘಟ್ಟ, ಸಂಗಮ,ಗೋಸಾಯ್ ಘಾಟ್ ನಲ್ಲಿ ಶ್ರದ್ಧಾ ಪೂಜೆ ಕಾರ್ಯ ನಡೆಯುತ್ತಿದೆ. ತಮ್ಮ ಕುಟುಂಬದಲ್ಲಿ ಅಗಲಿದ ಪೂರ್ವಜರಿಗೆ ತಿಲ ತರ್ಪಣ ಅರ್ಪಿಸಿ ಶ್ರಾದ್ದಕಾರ್ಯ ನೆರವೇರಿಸುತ್ತಿದ್ದಾರೆ.
ಕಾವೇರಿ ನದಿ ದಂಡೆಯಲ್ಲಿ ಶ್ರಾದ್ಧ ಕಾರ್ಯ ನಡೆಸಿ ಪಿಂಡ ಪ್ರಧಾನ ಮಾಡಿ ತಿಲತರ್ಪಣ ಅರ್ಪಿಸಿದರೆ ಸದ್ಗತಿ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಪಿತೃ ಪಕ್ಷದಲ್ಲಿ ಕುಟುಂಬದವರಿಗೆ ಆಸ್ತಿಕರಿಂದ ಪಿಂಡಪ್ರದಾನ ಮಾಡಲಾಗುತ್ತದೆ. ಕಾಗೆಗೆ ಎಡೆ ತಿಂಡಿ ಇಟ್ಟು ಮೃತ ಹಿರಿಯರಿಗೆ ಪೂಜಾ ಕಾರ್ಯ ನೆರವೇರಿಸಲಾಗುತ್ತದೆ.