ಬಾಗಲಕೋಟ :-ಒಂದೇ ಭಾಷೆ ಮಾತನಾಡಲು ಪರದಾಡುವ ಇಂದಿನ ದಿನಗಳಲ್ಲಿ ಪುಟ್ಟ ಬಾಲಕಿಯೊಬ್ಬಳು ಹಲವು ಭಾಷೆಗಳಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾಳೆ.
ಬಾಗಲಕೋಟ ಜಿಲ್ಲೆಯ ಇಲಕಲ್ ಪಟ್ಟಣದ ಗುರುಲಿಂಗಪ್ಪ ಕಾಲನಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ತನುಶ್ರೀ ಮಾತೃಭಾಷೆ ಜತೆಗೆ ವಿವಿಧ ಭಾಷೆಗಳನ್ನು ಮಾತನಾಡುತ್ತಾಳೆ.
ಕನ್ನಡ, ಆಂಗ್ಲ, ಹಿಂದಿ, ತೆಲುಗು, ತಮಿಳು, ಮಲೆಯಾಳಿ, ಉರ್ದು,ಲಂಬಾಣಿ ಮತ್ತು ಮರಾಠಿ ಭಾಷೆಯಲ್ಲಿ ಮಾತನಾಡುತ್ತಾಳೆ.
ನಲಿ ಕಲಿ ವಿಭಾಗದಲ್ಲಿ ಶಿಕ್ಷಕ ಸಂಗಮೇಶ ಬಂಡರಗಲ್ಲ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಸಾಲನ್ನು ಬಾಲಕಿಯಿಂದ ವಿವಿಧ ಭಾಷೆಗಳಲ್ಲಿ ಕೇಳಿ ಅದನ್ನು ಫೇಸ್ ಬುಕ್ ನಲ್ಲಿ ಹರಿಬಿಟ್ಟಿದ್ದು, ನಗರದ ಸರಕಾರಿ ಕಿರಿಯ ಪ್ರಾಥಮಿಕ ಗುರುಲಿಂಗಪ್ಪ ಕಾಲೊನಿ ಶಾಲೆಯ ಮುಖ್ಯ ಗುರುಗಳಾದ S.S.ಬೇನಾಳ ಅವರು ಹಾಗೂ ಸಾರ್ವಜನಿಕರು ಈ ಬಾಲಕಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.