Monday, April 21, 2025
Google search engine

Homeಅಪರಾಧಬಾಗಲಕೋಟೆ: ಯುವಕನಿಗೆ ಮಾರಕಾಸ್ತ್ರಗಳಿಂದ  ಹಲ್ಲೆ ಮಾಡಿ ಭೀಕರ ಕೊಲೆ

ಬಾಗಲಕೋಟೆ: ಯುವಕನಿಗೆ ಮಾರಕಾಸ್ತ್ರಗಳಿಂದ  ಹಲ್ಲೆ ಮಾಡಿ ಭೀಕರ ಕೊಲೆ

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲ್ಲೂಕಿನ ಹೆಗ್ಗೂರು ಗ್ರಾಮದಲ್ಲಿ ನಿನ್ನೆ(ಫೆ.26) ರಾತ್ರಿ ಸಿದ್ದು ಇಂಡಿ (21) ಯುವಕನನ್ನು ಮಾರಕಾಸ್ತ್ರಗಳಿಂದ ಮುಖ ಹಾಗೂ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ.

ಘಟನೆಯಲ್ಲಿ ಮಂಜು ಖೈರವಾಡಗಿ ಎಂಬಾತನಿಗೂ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇವಲ ಬೈಕ್ ಟಚ್ ಆಯಿತು ಎಂಬ ನೆಪದಲ್ಲಿ ಜೊತೆಗೆ ಹಳೆ ರಾಜಕೀಯ ದ್ವೇಷ ಉಕ್ಕಿ ಅದೇ ಊರಿನವರೇ ಆದ ಸಾಗರ ಕಿರಸ್ಯಾಳ, ಯಮನಪ್ಪ ಕಿರಸ್ಯಾಳ, ಶಾಂತಪ್ಪ, ಶಿವಾನಂದ, ಪರಶು ಸೇರಿದಂತೆ ಇತರರು ಸೇರಿ ಮಾರಾಮಾರಿ ನಡೆಸಿ ಕೊಲೆಗೈದಿದ್ದಾರೆ.

ನಿನ್ನೆ ಗ್ರಾಮದಲ್ಲಿ ಯಮನಪ್ಪ ಕಿರಸ್ಯಾಳ ಮದುವೆಯಿತ್ತು. ಅದೇ ಮುಹೂರ್ತದಲ್ಲಿ ಗಿರಿಸಾಗರ ಗ್ರಾಮದಲ್ಲಿ ಸಿದ್ದು ಇಂಡಿ ಅವರ ಆಪ್ತರ ಮದುವೆ ಕೂಡ ಇತ್ತು. ಹೀಗಾಗಿ ಆತ ಗಿರಿಸಾಗರಕ್ಕೆ ಮದುವೆಗೆ ಹೋಗಿ ವಾಪಸ್ ಬರುತ್ತಿದ್ದ. ಈ ವೇಳೆ ಮದುವೆ ಮನೆಯವರಲ್ಲಿ ಒಬ್ಬನಾದ ಪರಶು ಹಾಗೂ ಸಿದ್ದು ಬೈಕ್ ಅಪಘಾತವಾಗಿವೆ‌. ಇದರಿಂದ ಸ್ಥಳದಲ್ಲಿ ಸ್ವಲ್ಪ‌ ಜಗಳವಾಗಿದೆ. ಆಗ ಸ್ಥಳದಲ್ಲಿ ಇದ್ದವರು ಜಗಳ ಬಿಡಿಸಿ ಕಳಿಸಿದ್ದಾರೆ. ನಂತರ ಸಿದ್ದು ಮನೆ ಕಡೆ ಬಂದಿದ್ದಾನೆ, ನಂತರ ರಾತ್ರಿ 8.30 ರ ವೇಳೆಗೆ ಸಿದ್ದು ತಮ್ಮ, ಮನೆಗೆ ಹೋಗಲು ಸಾಗರ ಮನೆ ಮುಂದೆಯೇ ಹೋಗಬೇಕು. ಈ ವೇಳೆ ಸಿದ್ದು ಹಾಗೂ ಚಿಕ್ಕಪ್ಪನ ಮಗ ಮಂಜು ಮೇಲೆ‌‌ ಮನಬಂದಂತೆ ಹಲ್ಲೆ ಮಾಡಿ ಕೊಲೆ‌ ಮಾಡಿದ್ದಾರೆ.  

ಈ ಬಗ್ಗೆ ಬೀಳಗಿ ಪೊಲೀಸ್ ಠಾಣೆಯಲ್ಲಿ 25 ಜನರ ವಿರುದ್ಧ ಎಫ್ ​ಐಆರ್ ಆಗಿದೆ. ಬೀಳಗಿ ಪೊಲೀಸರು ಕ್ರೈಮ್ ಅಫ್ ಸೀನ್ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಪ್ರಮುಖ ಆರೋಪಿಗಳಾದ ಸಾಗರ, ಶಿವಾನಂದ, ಯಮನಪ್ಪ, ಶಾಂತಪ್ಪ, ಪರಶು ಸೇರಿದಂತೆ ಪ್ರಮುಖ ಐವರನ್ನು ವಶಕ್ಕೆ ಪಡೆದಿದ್ದಾರೆ.

ಸ್ಥಳದಲ್ಲಿ ಯಾವುದೇ ಗಲಾಟೆ ಆಗಬಾರದು ಎಂದು ಪೊಲೀಸ್ ಭದ್ರತೆ ಕಲ್ಪಿಸಿದ್ದು, ತನಿಖೆ ಮುಂದುವರೆದಿದೆ.

RELATED ARTICLES
- Advertisment -
Google search engine

Most Popular