ಬಾಗಲಕೋಟೆ : ಶಿವಾಜಿ ಮೂರ್ತಿ ತೆರವು ಖಂಡಿಸಿ ಇಂದು ಬಾಗಲಕೋಟೆ ಸ್ವಯಂ ಘೋಷಿತ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ನಗರದಾದ್ಯಂತ ವ್ಯಾಪಾರ ವಹಿವಾಟು ಸ್ಥಗಿತ್ತಗೊಂಡಿರುವ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿರೋ ಮಾರುಕಟ್ಟೆ. ಪೋಲಿಸ ಭದ್ರತೆಯೊಂದಿಗೆ ಎಂದಿನಂತೆ ಖಾಸಗಿ ವಾಹನಗಳು ಓಡಾಡುತ್ತಿರುವುದು ಕಂಡುಬಂದಿದೆ.
ಜಿಲ್ಲಾ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಕರೆ ನೀಡಿರುವ ಬಾಗಲಕೋಟೆ ಬಂದ್ ಬೆಳಿಗ್ಗೆ ೧೦:೩೦ಕ್ಕೆ ನಗರದಾದ್ಯಂತ ನಡೆಯಲಿರೋ ಬೃಹತ್ ಮೌನ ಪ್ರತಿಭಟನಾ ಮೆರವಣಿಗೆ ಬಳಿಕ ಬಸವೇಶ್ವರ ವೃತ್ತದ ಬಳಿ ನಡೆಯಲಿರೋ ಪ್ರತಿಭಟನಾತ್ಮಕ ಸಭೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಮತ್ತು ಮಾಜಿ ಶಾಸಕ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು. ಡಿಸಿಗೆ ಜಿಲ್ಲೆಯ ೯ತಾಲೂಕು ಕೇಂದ್ರಗಳಲ್ಲೂ ತಹಶೀಲ್ದಾರಗೆ ಮನವಿ ಸಲ್ಲಿಸಲಾಗುವುದು.