Tuesday, April 15, 2025
Google search engine

Homeರಾಜ್ಯಸುದ್ದಿಜಾಲಬಾಗಲಕೋಟೆ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ

ಬಾಗಲಕೋಟೆ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ

ಬಾಗಲಕೋಟೆ: ಬಾಗಲಕೋಟೆ ತಾಲೂಕಿನ ಗಾಣಿಗ ಸಮಾಜ ಹಾಗೂ ಜ್ಯೋತಿ ಕೋ-ಆಪ್ ಕ್ರೆಡಿಟ್ ಸೊಸೈಟಿ ಸಹಯೋಗದೊಂದಿಗೆ ೨೦೨೨-೨೩ ನೇ ಸಾಲಿನ ಗಾಣಿಗ ಸಮಾಜದ ಎಸ್‌ಎಸ್ ಎಲ್‌ಸಿ, ಪಿಯುಸಿ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತಿ ನೌಕರರಿಗೆ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ನೂತನ ಶಾಸಕರಿಗೆ, ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗಾಣಿಗ ಸಮಾಜದ ತಾಲೂಕಾಧ್ಯಕ್ಷ ದುಂಡಪ್ಪ ಏಳಮ್ಮಿ ಹೇಳಿದರು.
ನವನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ದಿ.೧೩ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಚರಂತಿಮಠ ಶಿವಾನುಭವವ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಜಯಪುರದ ವನಶ್ರಿ ಮಠದ ಪ.ಪೂ.ಡಾ.ಜಯ ಬಸವಕುಮಾರ ಸ್ವಾಮೀಜಿಗಳು, ಬೇಲೂರ ಗುರುಬಸವೇಶ್ವರ ಮಠದ ಮ.ನಿ.ಪ್ರ.ಡಾ.ಮಹಾಂತ ಬಸವ ಲಿಂಗ ಸ್ವಾಮಿಗಳು ವಹಿಸುವರು.

ಗಾಣಿಗ ಸಮಾಜದ ತಾಲೂಕಾಧ್ಯಕ್ಷ ದುಂಡಪ್ಪ ಏಳಮ್ಮಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ, ಅಥಣಿ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆಂದರು.
ಬಾಗಲಕೋಟೆಯ ಶಾಸಕ ಎಚ್.ವೈ.ಮೇಟಿ, ಬೀಳಗಿ ಶಾಸಕ ಜೆ.ಟಿ.ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ ಅವರನ್ನು ಸನ್ಮಾನಿಸಲಾಗುತ್ತಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಪಿ.ಸಿ. ಗದ್ದಿ ಗೌಡರ, ಅಖಿಲ ಭಾರತ ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಗುರಣ್ಣ ಗೋಡಿ, ರಾಜ್ಯ ಕಾಯಾ ಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ನೌಕರರ ಘಟಕದ ರಾಜ್ಯ ಗೌರ ಧ್ಯಕ್ಷ ಆರ್.ಜಿ.ಪಾಟೀಲ, ಉಪ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಲಾಗಲೋಟಿ, ಮುಖಂ ಡರಾದ ಬಸವಪ್ರಭು ಸರನಾಡಗೌಡ, ಕುಮಾರ ಯಳ್ಳಿಗುತ್ತಿ, ಸಂತೋಷ ಹೊಕ್ರಾಣಿ, ನಿಂಗಣ್ಣ ಗೋಡಿ, ಶ್ರೀಮತಿ ಕವಿತಾ ಏಳಮ್ಮಿ, ಶೋಭಾ ಗಾಣಿಗೇರ ಆಗಮಿಸಲಿದ್ದಾರೆ ಎಂದರು.
ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಲಾಗಲೋಟಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಭಾ ಪುರಸ್ಕಾರ ಆಯೋಜಿಸಿದ್ದು ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದವರನ್ನು ಸನ್ಮಾನಿಸಲಾ ಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಿಂಗಣ್ಣ ಗೋಡಿ, ಶಿವಪುತ್ರಪ್ಪ ಕಣಗಿ, ಮಹಾಂತೇಶ ಚೊಳಚಗುಡ್ಡ ಇದ್ದರು.

RELATED ARTICLES
- Advertisment -
Google search engine

Most Popular