ಬಾಗಲಕೋಟೆ: ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ನಿರೀಕ್ಷೆ ಮಾಡಿದಂತೆ ಬಿಜೆಪಿ ಜಯಭೇರಿ ಬಾರಿಸಿದ್ದು ಕಮಲದ ಭದ್ರಕೋಟೆಯಾಗಿದ್ದ ಬಾಗಲಕೋಟೆಯಲ್ಲಿ ಬಿಜೆಪಿ ಪಕ್ಷ ಉಳಿಸಿಕೊಂಡು ಹೋಗಿದೆ. ಬಿಜೆಪಿ ಪಕ್ಷ ದಿಂದ ಸಂಸದರಾಗಿದ್ದ ಪಿ ಸಿ ಗದ್ದಿಗೌಡರ ಸ್ಪರ್ಧೆ ಮಾಡಿದ್ದು,ಕಾಂಗ್ರೆಸ್ ಪಕ್ಷದಿಂದ ಸಂಯುಕ್ತಾ ಪಾಟೀಲ ಸ್ಪರ್ಧೆ ಮಾಡಿದ್ದಾರೆ.
ಮೊದಲು ಎರಡು ಸುತ್ತುಗಳಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಎರಡು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು ಬಿಟ್ಟರೆ ಉಳಿದ 17 ಸುತ್ತುಗಳಲ್ಲಿ ಬಿಜೆಪಿ ಪಕ್ಷದ ಮತಗಳಲ್ಲಿ ಏರುತ್ತಾ ಹೋಗಿ ಕೊನೆಗೆ 68,399 ಮತಗಳ ಅಂತರ ದಿಂದ ಸಂಸದ ಪಿ ಸಿ ಗದ್ದಿಗೌಡರ ಅವರಿಗೆ ವಿಜಯದ ಮಾಲೆ ದೂರಕಿತು.
ವಿಜೇತ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪಡೆದ ಒಟ್ಟು ಮತಗಳು, 6,71,039,(6,67,441 +3,598 ಅಂಚೆ ಮತಗಳು),ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪಡೆದ ಒಟ್ಟು ಮತಗಳು-6,02,640
(6,00,741+ 1,899 ಅಂಚೆ ಮತಗಳು)
ಬಿಜೆಪಿ ಪಡೆದ ಒಟ್ಟು ಲೀಡ್- 68,399 ಮತಗಳು,
ಗೆಲುವಿನ ನಗೆ ಬೀರಿದ ಸಂಸದ ಪಿ ಸಿ ಗದ್ದಿಗೌಡರ
ಗೆಲುವಿನ ನಗೆ ಬೀರಿದ ಸಂಸದ ಪಿ ಸಿ ಗದ್ದಿಗೌಡರ ಮಾತನಾಡಿ, ಪ್ರವಾಸೋದ್ಯಮ ಸೇರಿದಂತೆ ರಸ್ತೆ,ನೀರಾವರಿ ಹಾಗೂ ಇತರ ಅಭಿವೃದ್ಧಿ ಕೆಲಸ ಕಾರ್ಯವನ್ನು ಪ್ರಾಮಾಣಿಕತೆ ಕೆಲಸ ಮಾಡಿರುವುದಕ್ಕೆ ಸಂದ ಜಯವಾಗಿದೆ. ಐದನೇಯ ಭಾರಿ ಗೆಲುವು ಸಾಧಿಸಿದರು ಸಚಿವ ಸ್ಥಾನ ಆಕಾಂಕ್ಷೆ ಇಲ್ಲ,ಎಲ್ಲ ಮುಖಂಡರು ತೆಗೆದುಕೊಂಡಿರುವ ನಿರ್ಧಾರ ದಿಂದ ಜಯಗಳಿಸುವಂತಾಗಿದ್ದು,ಇನ್ನಷ್ಟು ಹೆಚ್ಚಿಗೆ ಕೆಲಸ ಕಾರ್ಯ ಮಾಡುತ್ತೇನೆ ಎಂದು ಪಿ ಸಿ ಗದ್ದಿಗೌಡರ ತಿಳಿಸಿದ್ದಾರೆ.
ಇದೇ ರೀತಿಯಾಗಿ ಪರಾಜಿತಗೊಂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ ಮಾತನಾಡಿ, ಸೋಲು ಮುಖ್ಯ ವಲ್ಲ ಲಕ್ಷಾಂತರ ಜನ ಕಾರ್ಯಕರ್ತರು ನನ್ನ ಹಿಂದೆ ಇದ್ದಾರೆ ಎಂಬುದು ತಿಳಿಯಿತು. ಮುಂದಿನ ದಿನಮಾನದಲ್ಲಿ ಕಾರ್ಯಕರ್ತರನ್ನು ಇನ್ನಷ್ಟು ಬಲಿಷ್ಠ ಗೊಳಿಸಿ, ಅಭಿವೃದ್ಧಿ ಗೆ ಒತ್ತು ಕೊಡಲಾಗುವುದು ಎಂದು ತಿಳಿಸಿದರು. ಸೋಲಿಗೆ ಕಾರಣ ಏನು ಅಂತ ಈಗಲೇ ತಿಳಿಯುವುದಿಲ್ಲ. ಮುಂದೆ ಎಲ್ಲರೊಡನೆ ಚರ್ಚೆ ಮಾಡಿ,ಆತ್ಮಾಲೋಕನ ಮಾಡಿಕೊಳ್ಳುತ್ತೇವೆ. ಗ್ಯಾರಂಟಿ ಯೋಜನೆ ಸೇರಿದಂತೆ ಇತರ ಅಭಿವೃದ್ಧಿ ವಿಷಯ ಕೈ ಬಿಟ್ಟಿಲ್ಲ,ಕಳೆದ ಭಾರಿಗಿಂತಲೂ ಹೆಚ್ಚಿನ ಕಾರ್ಯಕರ್ತರು ಬೆಂಬಲಿಸಿದ್ದಾರೆ ಎಂದರು.