ಮೈಸೂರು: ಆಷಾಢ ಮಾಸದ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮಹಿಳಾ ಸಿಬ್ಬಂದಿಗಳಿಗೆ ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ವತಿಯಿಂದ ಸೀರೆ, ಬಳೆ, ಕುಂಕುಮ, ಅರಿಶಿನ, ವಿಳ್ಳೆದೆಲೆ, ಅಡಿಕೆ, ಹೂ, ತೆಂಗಿನಕಾಯಿ ಬಾಗಿನ ಸಮರ್ಪಣೆ ನಂತರ ಮಾತನಾಡಿದ ಚಾಮುಂಡಿ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಅಷಾಢ ಮಾಸದ ಸಂಧರ್ಭದಲ್ಲಿ ಚಾಮುಂಡಿ ಬೆಟ್ಟಕ್ಕೆ ದೇಶ ವಿದೇಶದಿಂದ ಲಕ್ಷಾಂತರ ಭಕ್ತರು ಬರುತ್ತಾರೆ.
ಚಾಮುಂಡಿ ಬೆಟ್ಟದಲ್ಲಿ ಭಕ್ತರ ಅನೂಕೂಲಕ್ಕಾಗಿ ಬಸ್ ಸಾರಿಗೆ ವ್ಯವಸ್ಥೆ, ಸರದಿ ಸಾಲು, ಅನ್ನದಾಸೋಹ, ಮೂಲಭೂತ ವ್ಯವಸ್ಥೆಗಳನ್ನ ಕಲ್ಪಿಸಲಾಗಿದೆ, ಸಾರ್ವಜನಿಕರು ಪ್ಲಾಸ್ಟಿಕ್ ತರದೇ ಬಟ್ಟೆ ಬ್ಯಾಗ್ ಮನೆಯಿಂದಲೇ ತರಲು ಮುಂದಾಗಬೇಕು, ಚಾಮುಂಡಿ ಬೆಟ್ಟದಲ್ಲಿ ಸದಾ ಸ್ವಚ್ಛತೆಯನ್ನು ಕಾಪಾಡಬೇಕಾಗಿ ಮನವಿ ಮಾಡಿದರು ಪ್ರತಿವರ್ಷದಂತೆ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ರೇಖಾ ಶ್ರೀನಿವಾಸ್
ಮೈಸೂರು ಪ್ರಾಂತ್ಯದಲ್ಲಿ ಆಷಾಢ ಮಾಸವೆಂದರೇ ದೇವಿ ಆರಾಧನೆಗೆ ಪೂಜಾಕೈಂಕರ್ಯಕ್ಕೆ ಮಹಿಳೆಯರು ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ, ಚಾಮುಂಡಿ ಬೆಟ್ಟದಲ್ಲಿ ಪ್ರತಿನಿತ್ಯ ಸೇವೆಸಲ್ಲಿಸುವ ಮಹಿಳಾ ಭದ್ರತಾ ಸಿಬ್ಬಂದಿಗಳಿಗೆ ಸ್ವಚ್ಚತಾ ಸಿಬ್ಬಂದಿಗಳಿಗೆ ಬಾಗಿನ ಸಮರ್ಪಣೆ ಮಾಡುವ ಮೂಲಕ ಅವರಲ್ಲೂ ಸಹ ಹಬ್ಬಸಡಗರ ಮನೆಮಾಡಿದೆ, ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸಲು ಅವರಲ್ಲಿ ಮತ್ತಷ್ಟು ಆತ್ಮ ಸ್ಥೈರ್ಯ ಮನಃಶಕ್ತಿ ತುಂಬಿದೆ ಎಂದರು.
ಇದೇ ಸಂದರ್ಭದಲ್ಲಿ ಚಾಮುಂಡಿ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ, ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರಾದ ಡಾಕ್ಟರ್ ಆರ್.ಹೆಚ್ ಪವಿತ್ರ, ದೇವಸ್ಥಾನದ ಅರ್ಚಕರಾದ ಸೋಮಣ್ಣ, ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುತ್ತಣ್ಣ,ಲತಾ ಮೋಹನ್, ಸಮಾಜ ಸೇವಕರಾದ ಶಾಂತ, ಜಿ ರಾಘವೇಂದ್ರ, ಪವನ್ ಸಿದ್ದರಾಮು, ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಂಚಾಲಕ ಸಂತೋಷ್ ಕಿರಾಲು, ಬೈರತಿ ಲಿಂಗರಾಜು, ರವಿಚಂದ್ರ, ಹರೀಶ್ ನಾಯ್ಡು ಹಾಗೂ ಇನ್ನಿತರರು ಇದ್ದರು.