ವರದಿ: ಸ್ಟೀಫನ್ ಜೇಮ್ಸ್
ಬೈಲಹೊಂಗಲ: ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹಾಂತಯ್ಯ ಆರಾದ್ರಿಮಠ ಶಾಸ್ತ್ರಿಗಳ ಕೊಡುಗೆ ಅನನ್ಯವಾಗಿದೆ. ಅವರ ಸೇವೆಯು ಈ ಭಾಗದ ಜನರ ಮನಸ್ಸಿನಲ್ಲಿ ಅಚ್ಚಳಿಯದಂತಿದೆ ಎಂದು ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಅವರು ಶ್ಲಾಘಿಸಿದರು. ಪಟ್ಟಣದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ‘ದಸರಾ ಸಂಭ್ರಮ-2025’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನವರಾತ್ರಿ ಮತ್ತು ಶ್ರೀ ಮಾತಾ ಸಂಭ್ರಮದ ಮೂಲಕ ಮಹಾಂತಯ್ಯ ಆರಾದ್ರಿಮಠ ಶಾಸ್ತ್ರಿಗಳು ಉತ್ತರ ಕರ್ನಾಟಕದ ಪ್ರತಿಭಾವಂತರಿಗೆ ಉತ್ತಮ ವೇದಿಕೆ ಕಲ್ಪಿಸಿದ್ದಾರೆ. ಅಲ್ಲದೆ, ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರಿಗೆ ಬೈಲಹೊಂಗಲವನ್ನು ಪರಿಚಯಿಸಿದ ಕೀರ್ತಿ ಅವರಿಗೇ ಸಲ್ಲುತ್ತದೆ ಎಂದರು.
ಬೈಲಹೊಂಗಲ ದಸರಾ ಮೈಸೂರು ದಸರಾದಷ್ಟೇ ಖ್ಯಾತಿ’: ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ ಮಾತನಾಡಿ, ಮೈಸೂರು ದಸರಾದಷ್ಟೇ ಬೈಲಹೊಂಗಲದ ದಸರಾ ಸಂಭ್ರಮವೂ ಖ್ಯಾತಿ ಗಳಿಸಿದೆ. ಹಲವು ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಆರಾದ್ರಿ ಮಠ ಶಾಸ್ತ್ರಿಗಳು ಸಲ್ಲಿಸುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಪ್ರಮೋದ್ ಕುಮಾರ್ ವಕ್ಕುಂದಮಠ, ಕುಡಸೋಮಣ್ಣವರ, ಮುಖಂಡರಾದ ರಾಜು ಶ್ರೀಶೈಲ ಯಡಳ್ಳಿ, ಸೋಮನಾಥ ಸೊಪ್ಪಿಮಠ
ಹಾಗೂ ಮುಧೋಳದ ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಅರಳಿಕಟ್ಟಿ ದಂಪತಿಗಳು ಭಾಗವಹಿಸಿದ್ದರು.
ದುರ್ಗಾದೇವಿ ದೇವಸ್ಥಾನದ ಮಹಿಳಾ ಸಂಘದ ಸದಸ್ಯರು ಹೋಮ-ಹವನಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಪ್ರಶಾಂತ್ ಗುರೂಜಿ, ಬಸವರಾಜ್ ಶಾಸ್ತ್ರಿಗಳು, ವೀರೇಶ ನಂದಳ್ಳಿಮಠ ಶಾಸ್ತ್ರಿಗಳು, ಮಹಾಂತೇಶ ಶಾಸ್ತ್ರಿಗಳು, ವಿಶ್ವನಾಥ ಶಾಸ್ತ್ರಿಗಳು ಮತ್ತು ಶ್ರೀಕಾಂತ ಶಾಸ್ತ್ರಿಗಳಿಂದ ಪೂಜಾ ಕೈಂಕರ್ಯಗಳು ನೆರವೇರಿದವು