Sunday, April 20, 2025
Google search engine

Homeರಾಜ್ಯಸಿದ್ದರಾಮಯ್ಯ ಕುಟುಂಬ ಹಾಳಾಗಲು ಬೈರತಿ ಸುರೇಶ್ ಕಾರಣ: ಶೋಭಾ ಕರಂದ್ಲಾಜೆ ಆರೋಪ

ಸಿದ್ದರಾಮಯ್ಯ ಕುಟುಂಬ ಹಾಳಾಗಲು ಬೈರತಿ ಸುರೇಶ್ ಕಾರಣ: ಶೋಭಾ ಕರಂದ್ಲಾಜೆ ಆರೋಪ

ದೆಹಲಿ: ಸಿದ್ದರಾಮಯ್ಯ ಕುಟುಂಬ ಹಾಳಾಗಲು ಬೈರತಿ ಸುರೇಶ್ ಕಾರಣ. ನನ್ನ ಮೇಲೆ ಅಪವಾದ ಹೊರಿಸಲು ಬಹಳ ಹುಡುಕಿದ್ದೀರಿ, ಏನು ಸಿಕ್ಕಿಲ್ಲ. ಅದಕ್ಕಾಗಿ ಇಂತಹ ಚೀಪ್ ರಾಜಕಾರಣ ಮಾಡುತ್ತಿದ್ದೀರಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪತ್ನಿ ಸಾವಿನ ಹಿಂದೆ ಶೋಭಾ ಕರಂದ್ಲಾಜೆ ಕೈವಾಡವಿದೆ ಎಂಬ ಸಚಿವ ಬೈರತಿ ಸುರೇಶ್ ಹೇಳಿಕೆಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೌರವರನ್ನು ಮುಗಿಸಲು ಶಕುನಿ ಸೇರಿಕೊಂಡಿದ್ದ. ಹಾಗೆಯೇ ಸಿದ್ದರಾಮಯ್ಯ ಅವರನ್ನು ಮುಗಿಸಲು ಬೈರತಿ ಸುರೇಶ್ ಸೇರಿಕೊಂಡಿದ್ದಾರೆ. ಕಾಂಗ್ರೆಸ್ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೈರತಿ ಸುರೇಶ್ ಆರೋಪ ಮಾಡಿದ್ದಾರೆ. ಇದಕ್ಕೆ ಒಂದು ಉದಾಹರಣೆ ಕೊಡಬಲ್ಲೆ. ದರೋಡೆಕೋರರು, ಭಯೋತ್ಪಾದಕರನ್ನು ಪೊಲೀಸರು ಹಿಡಿಯುತ್ತಾರೆ. ದರೋಡೆಕೋರರು ತಪ್ಪಿಸಿಕೊಳ್ಳಲು ವಾಪಸ್ ದಾಳಿ ಮಾಡುತ್ತಾರೆ. ಅದೇ ರೀತಿಯಲ್ಲಿ ಈಗ ಆಗಿದೆ. ಮುಡಾದಲ್ಲಿ ಫೈಲ್ ತಂದು ಸುಟ್ಟು ಹಾಕಿದರು ಎಂದು ನಾನು ಹೇಳಿದೆ. ಅದಕ್ಕೆ ಪ್ರತಿಯಾಗಿ ಈ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಯಾಕೆ ಇಂಥವರನ್ನು ಜೊತೆಗೆ ಇಟ್ಟುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕಾರಣಿಯಾಗಿ ಕ್ಷುಲ್ಲಕ ರಾಜಕಾರಣ ಮಾಡಬಾರದು. ರಾಕೇಶ್ ಸಿದ್ದರಾಮಯ್ಯ ಸಾವಿಗೆ ಬೈರತಿ ಸುರೇಶ್ ಕಾರಣ ಎಂದು ಜನ ಮಾತನಾಡುತ್ತಿದ್ದಾರೆ. ಇದನ್ನು ನಾನು ಹೇಳಬೇಕಾ ರಾಜಕೀಯವನ್ನು ರಾಜಕೀಯವಾಗಿ ಎದುರಿಸಿದೆ. ಓಡಿ ಹೋಗುವ, ಹೊಂದಾಣಿಕೆ ರಾಜಕಾರಣಿ ನಾನಲ್ಲ. ಹೆಬ್ಬಾಳದಿಂದ ನಿಮ್ಮನ್ನು ಓಡಿಸುತ್ತೇವೆ. ಬೆಂಗಳೂರು ಮುಳುಗುತ್ತಿದೆ, ಅದನ್ನು ಸರಿ ಮಾಡಿದ್ದೀರಾ ಶೋಭಾ ಕರಂದ್ಲಾಜೆ ಓಡಿ ಹೋಗಲ್ಲ. ನಾಲಿಗೆ, ಬಾಯಿ ಬಿಗಿ ಹಿಡಿದು ಮಾತನಾಡಿ. ಅಭಿವೃದ್ಧಿ ಮಾಡುವುದು ಬಿಟ್ಟು ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

RELATED ARTICLES
- Advertisment -
Google search engine

Most Popular