Friday, April 11, 2025
Google search engine

Homeಸಿನಿಮಾದಸರಾ ಚಲನಚಿತ್ರೋತ್ಸವಕ್ಕೆ ‘ಬಾಲ್ಯ’ ಸಿನಿಮಾ ಆಯ್ಕೆ

ದಸರಾ ಚಲನಚಿತ್ರೋತ್ಸವಕ್ಕೆ ‘ಬಾಲ್ಯ’ ಸಿನಿಮಾ ಆಯ್ಕೆ

ದೇವನಹಳ್ಳಿ: ಮಕ್ಕಳ ಬಾಲ್ಯ ಜೀವನದಲ್ಲಿ ಎದುರಾಗುವ ಸಾಕಷ್ಟು ವಿಚಾರಧಾರೆ ಒಳಗೊಂಡ ಚಿತ್ರಕತೆಗೊಳಗೊಂಡಿರುವ ‘ಬಾಲ್ಯ’ ಚಲನಚಿತ್ರ ಈ ಬಾರಿ ಮೈಸೂರಿನಲ್ಲಿ ನಡೆಯುವ ದಸರಾ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಈಗಾಗಲೇ ರಾಜ್ಯದಾದ್ಯಂತ ಮಕ್ಕಳ ಹಾಸ್ಟೆಲ್‌, ಸರ್ಕಾರಿ ಶಾಲೆಗಳಲ್ಲಿ ಸಮಾಜ ಕುರಿತು ಮಕ್ಕಳಲ್ಲಿ ಉತ್ತಮ ಅಭಿಪ್ರಾಯ ಹುಟ್ಟಿಹಾಕಲು ಈ ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ. ಮೈಸೂರು ದಸರಾದಲ್ಲಿ ಈ ಬಾರಿ ಪ್ರದರ್ಶನಗೊಳ್ಳಲಿದೆ.

ಈ ಸಿನಿಮಾವನ್ನು ದೇವನಹಳ್ಳಿಯಲ್ಲಿ ಸಾಮಾಜಿಕ ಸಂದೇಶವುಳ್ಳ ಸಿನಿಮಾಗಳ ಮೂಲಕ ಅರಿವು, ಜಾಗೃತಿ ಮೂಡಿಸುತ್ತಿರುವ ಎನ್‌.ಸತ್ಯನಾರಾಯಣಾಚಾರ್‌ ನಿರ್ಮಾಣ ಮಾಡಿದ್ದಾರೆ.

‘ಮಕ್ಕಳ ಬಾಲ್ಯದ ಜೀವನ ಮತ್ತೊಮ್ಮೆ ಮರುಕಳಿಸುವುದಿಲ್ಲ. ಒತ್ತಡದ ಬದುಕಿನಲ್ಲಿ ಅವರ ಶೈಕ್ಷಣಿಕ ಪಾಠ ಸೇರಿದಂತೆ ಸಮಾಜದಲ್ಲಿ ಒಗ್ಗಿಕೊಳ್ಳುವುದಕ್ಕೆ ಕಷ್ಟಪಡುತ್ತಿದ್ದಾರೆ. ಅವರದ್ದೇ ಪ್ರಪಂಚದಲ್ಲಿ ಅವರನ್ನು ಸ್ವತಂತ್ರರಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕು ಎನ್ನುವ ಕತೆ ಸಿನಿಮಾ ಹೊಂದಿದೆ’ ಎಂದರು.

ಸಾಮಾಜಿಕ ಪಿಡುಗಳಾದ ಜಾತಿ, ವರ್ಣಭೇದ ಕಟ್ಟುಪಾಡು ಮೆಟ್ಟಿ ನಿಲ್ಲಲು ಕ್ರೀಡೆ ಪ್ರಾಮುಖ್ಯತೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು.

RELATED ARTICLES
- Advertisment -
Google search engine

Most Popular