Tuesday, March 17, 2026
Google search engine

Homeಸ್ಥಳೀಯಬಮೂಲ್ ಮಾರಾಟ ಇಳಿಕೆ : ಆತಂಕ ವ್ಯಕ್ತಪಡಿಸಿದ ಮಾರ್ಕೆಟಿಂಗ್ ಹೆಡ್ ಮನೋಹರ್

ಬಮೂಲ್ ಮಾರಾಟ ಇಳಿಕೆ : ಆತಂಕ ವ್ಯಕ್ತಪಡಿಸಿದ ಮಾರ್ಕೆಟಿಂಗ್ ಹೆಡ್ ಮನೋಹರ್

ಬೆಂಗಳೂರು : ಹಾಲಿನ ಉತ್ಪನ್ನಗಳಿಗೆ ಆನ್‌ಲೈನ್‌ ಸಂಸ್ಥೆಗಳಿಂದ ಬೇಕಾಬಿಟ್ಟಿ ದರ ನಿಗದಿಯಿಂದ ಕೆಎಂಎಫ್‌ಗೆ ನಷ್ಟವಾಗುತ್ತಿದೆ ಎಂದು ಬಮೂಲ್ ಮಾರ್ಕೆಟಿಂಗ್ ಹೆಡ್ ಮನೋಹರ್ ಅವರು ತಿಳಿಸಿದ್ದಾರೆ.

ಆನ್‌ಲೈನ್‌ ಮಾರಾಟ ಸಂಸ್ಥೆಗಳು ಎಲ್ಲಾ ಕಡೆ ಒಂದು ರೂಪಾಯಿಗೆ ಹಾಲು ಮತ್ತು ಹಾಲಿನ ಉತ್ಪನ್ನ ಮಾರಾಟ ಮಾಡುತ್ತಿವೆ. ಇದರಿಂದ ಕಳೆದ 10 ದಿನಗಳಿಂದ ಬಮೂಲ್ ಹಾಲಿನ ಉತ್ಪನ್ನಗಳ ಮಾರಾಟ ಇಳಿಕೆಯಾಗಿದೆ. ಇದು ಮುಂದುವರಿದರೆ ರೈತರು ಮತ್ತು ಸಹಕಾರಿ ಸಂಘಗಳು ಭಾರೀ ನಷ್ಟ ಆಗಲಿದೆ ಎಂದು ಅವರು ಆತಂಕ ಹೊರಹಾಕಿದ್ದಾರೆ.

ಆನ್‌ಲೈನ್‌ ಸಂಸ್ಥೆಗಳ ಈ ನಿರ್ಧಾರದಿಂದ ಸಾವಿರಾರು ಸಂಖ್ಯೆಯ ನೇರ ಗ್ರಾಹಕರು ನಮ್ಮಿಂದ ಕೈ ತಪ್ಪಿ, ಅವರ ಕಡೆ ಮುಖ ಮಾಡಿದ್ದಾರೆ. ಇದರಿಂದ ಮುಂದೆ ಹಂತ ಹಂತವಾಗಿ ಸಹಕಾರಿ ಸಂಘಗಳು ಮುಳುಗುವ ಆತಂಕ ಎದುರಾಗಿದೆ. ಈ ಬಗ್ಗೆ ಕೇಂದ್ರಕ್ಕೂ ಪತ್ರ ಬರೆಯಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಆನ್‌ಲೈನ್‌ ಮಾರಾಟ ಸಂಸ್ಥೆಗಳು ಬೇಕಾ ಬಿಟ್ಟಿ ದರಕ್ಕೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ರೈತರ ಜೊತೆಗೂಡಿ ದೊಡ್ಡ ಮಟ್ಟದ ಹೋರಾಟ ಮಾಡಲು ಚಿಂತನೆ ಮಾಡಲಾಗಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular