ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಜೂನ್ 14ರ ಶುಕ್ರವಾರ ಬಂಡಿ ಹಬ್ಬ ಮತ್ತು ಜಾತ್ರಾ ಮಹೋತ್ಸವ ಜೂನ್ 21 ರಂದು ಮಡೆ ಹಬ್ಬವನ್ನು ಏರ್ಪಡಿಸಲಾಗಿದ್ದು ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. 14 ರ ಶುಕ್ರವಾ ಬೆಳೆಗ್ಗೆ 6ಗಂಟೆಗೆ ಗ್ರಾಮದ ಹೊರವಲಯದಲ್ಲಿ ಇರುವ ಆದಿ ಶಕ್ತಿ ಮುತ್ತುತಾಳಮ್ಮ ದೇವಸ್ಥಾನದಲ್ಲಿ ಹೋಮ ಮತ್ತು ವಿಶೇಷ ಪೂಜಾಕಾರ್ಯ ನಡೆಯಿಯಲಿದ್ದು ರಾತ್ರಿ 7 ಗಂಟೆಗೆ ಗ್ರಾಮದಿಂದ ರಥವನ್ನು ಕುಪ್ಪೆ ಗ್ರಾಮದವರಿಗೆ ಎಳೆದ ನಂತರ ದೇವಾಲಯದ ಬಳಿ ಕೊಂಡೊತ್ಸವನ್ನು ಅಯೋಜಿಸಲಾಗಿದೆ.
21 ರ ಶುಕ್ರವಾರ ಮಡೆ ಹಬ್ಬ ನಡೆಯಲಿದ್ದು ಕಲಾ ಮತ್ತು ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆಯೊಂದಿಗೆ ಮಲ್ಲಮ್ಮನ ಕೊಣದ ಹತ್ತಿರ ಕನ್ನಂಬಾಡಮ್ಮನ ಕಳಸ ಸ್ಥಾಪನೆಯಾಗಿ ರಾತ್ರಿ 7 ನಂತರ ಮಹಿಳೆಯರು ತೊಬ್ಬಿಟ್ಟಿನ ಆರತಿಯೊಂದಿಗೆ ಗ್ರಾಮಸ್ಥರು ಊರಿನ ಹೆಬ್ಬಾಗಿಲಿನವರಿಗೆ ಮೆರವಣಿಗೆ ಮಾಡಲಿದ್ದು 8 ದಿನಗಳ ಗ್ರಾಮದಲ್ಲಿ ಬಾರಿ ವಿಜೃಂಣೆಯಿಂದ ಹಬ್ಬ ಮತ್ತು ಜಾತ್ರಾ ಮಹೋತ್ಸ ನಡೆಯುವುದು ವಿಶೇಷವಾಗಿದೆ.
“ಯಾಕೆ ಈ ಹಬ್ಬದ ಆಚರಣೆ ” : ಗ್ರಾಮದಲ್ಲಿ ಯಾವುದೇ ಕೆಡಕುಗಳು ಆಗದಂತೆ ಗ್ರಾಮದಲ್ಲಿ ಯಾವುದೇ ಸಾಂಕ್ರಮಿಕ ರೋಗಗಳು ಹರಡದಂತೆ ಇರಲು ಕಾಲಕಾಲಕ್ಕೆ ಮಳೆ-ಬೆಳೆ ಅಗಲಿ ಎಂದು ಪೂರ್ವಿಕರ ಕಾಲದಿಂದ ಈ ಎರಡು ಆಚರಿಸಿಕೊಂಡು ಬರಲಾಗುತ್ತಿದೆ
” ಬರದ ಸಿದ್ದತೆ”: ಈ ಎರಡು ಹಬ್ಬದ ಕಾರ್ಯಕ್ರಮಗಳಿಗೆ ಹೊಸದಾಗಿ ರಥವನ್ನು ಕಟ್ಟಲಾಗಿದ್ದು ಗ್ರಾಮದಲ್ಲಿರುವ ಪುರಾತನ ಮಲ್ಲಮ್ಮನ ಕೊಳವನ್ನು ಸ್ವಚ್ಚಮಾಡಲಾಗಿದ್ದು ಹಬ್ಬ ನಡೆಯುವ ದಿನಗಳಂದು ದೇವಾಲಯಕ್ಕೆ ವಿಶೇಷ ಹೂವಿನ ಆಲಂಕಾರವನ್ನು ಮಾಡಲು ಸಿದ್ದತೆ ಮಾಡಲಾಗಿದೆ. ಸಾವಿರಾರು ಮಂದಿ ಭಾಗವಹಿಸುವುದು ಮತ್ತು 8 ದಿನಗಳ ಕಾಲ ಈ ಹಬ್ಬ ಬಾರಿ ವಿಜೃಂಭ್ರಣೆಯಿಂದ ನಡೆಯುವುದರಿಂದ ಈಗಾಗಲೇ ಕುಪ್ಪೆ ಗ್ರಾ.ಪಂ.ವತಿಯಿಂದ ಗ್ರಾಮದಲ್ಲಿ ಸ್ವಚ್ಚತೆ, ಬೀದಿ ದೀಪಗಳ ಅಳವಡಿಕೆಯನ್ನು ಮಾಡಿ ಹಬ್ಬಕ್ಕೆ ಸಹಕಾರ ನೀಡುತ್ತಿದ್ದು ಸಾಲಿಗ್ರಾಮ ಪೊಲೀಸರು ಬಿಗಿ ಭದ್ರತೆ ಒದಗಿಸಲಿದ್ದಾರೆ.