Monday, April 7, 2025
Google search engine

Homeಕಾಡು-ಮೇಡುಬಂಡಿಪುರ:ಮುಳ್ಳು ಹಂದಿ ತಿಂದಿದ್ದ ಹುಲಿ ಸಾವು

ಬಂಡಿಪುರ:ಮುಳ್ಳು ಹಂದಿ ತಿಂದಿದ್ದ ಹುಲಿ ಸಾವು

ಗುಂಡ್ಲುಪೇಟೆ: ಬಂಡಿಪುರ ಹುಲಿ ಯೋಜನೆ, ಗುಂಡ್ಲುಪೇಟೆ ಉಪ ವಿಭಾಗ, ಮದ್ದೂರು ವಲಯ ವ್ಯಾಪ್ತಿಯ ಮದ್ದೂರು ಗಸ್ತು , ಸೀಗನ ಬೆಟ್ಟ ಸರ್ಕಲ್ ರಸ್ತೆ ಬಳಿ ಸಿಬ್ಬಂದಿಗಳು ಗಸ್ತು ನಡೆಸುತ್ತಿದ್ದ ಸಮಯ ಹುಲಿಯೊಂದು ಮೃತಪಟ್ಟಿರೋದನ್ನು ಗಮನಿಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ ತಕ್ಷಣ ಬಂಡಿಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ನಿರ್ದೇಶಕರಾದ ಡಾ. ಬಿ. ರಮೇಶ್ ಕುಮಾರ್, ಭಾ .ಆ.ಸೇ ಗುಂಡ್ಲುಪೇಟೆ, ಉಪ ವಿಭಾಗದ ಸಹಾಯಕ ಅರಣ್ಯಾ ಸಂರಕ್ಷಣಾಧಿಕಾರಿ ಶ್ರೀ ಜಿ. ರವೀಂದ್ರ, ಮದ್ದೂರು ವಲಯದ ವಲಯ ಅರಣ್ಯಾಧಿಕಾರಿ ಶ್ರೀ ಬಿ,ಎಂ ಮಲ್ಲೇಶ್ ಇಲಾಖೆ ಪಶು ವೈದ್ಯಾಧಿಕಾರಿ ಡಾ. ಮಿರ್ಜಾ ವಾಸಿಂ ಹಾಗೂ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ನೋಡಲಾಗಿ ಮೃತ ಹುಲಿಯು 3-4 ವರ್ಷ ಪ್ರಾಯದ ಗಂಡು ಹುಲಿಯಾಗಿದ್ದು, ಕಾಡಿನೊಳಗೆ ಮತ್ತೊಂದು ಹುಲಿಯ ಜೊತೆ ಕಾದಾಟ ನಡೆಸುವಾಗ ದೇಹಕ್ಕೆ ಬಲವಾದ ಪೆಟ್ಟು ಬಿದ್ದಿರುವುದು ಕಂಡುಬಂದಿದ್ದು ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಹುಲಿಯ ಹೊಟ್ಟೆಯ ಒಳಭಾಗದಲ್ಲಿ ಮುಳ್ಳುಹಂದಿಯ ಮುಳ್ಳುಗಳು ಕಂಡುಬಂದಿದ್ದು, ಹೊಟ್ಟೆ ಒಳಭಾಗದಲ್ಲಿ ಮುಳ್ಳುಗಳು ಚುಚ್ಚಿ ರಕ್ತಸ್ರಾವವಾಗಿ ಹುಲಿಯು ಮೃತಪಟ್ಟಿರುತ್ತದೆ ಎಂದು ಇಲಾಖೆ ಪಶು ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ.

ಬಂಡಿಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ನಿರ್ದೇಶಕರಾದ ಡಾ. ಬಿ ರಮೇಶ್ ಕುಮಾರ್ ಅವರ ಮಾರ್ಗದರ್ಶನದಂತೆ ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಿಯಮಾನುಸಾರ ಸುಡಲಾಯಿತು.

ಈ ಸಮಯದಲ್ಲಿ ಡಾ. ರಮೇಶ್ ಕುಮಾರ್ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ನಿರ್ದೇಶಕರು, ಬಂಡಿಪುರ ಹುಲಿ ಯೋಜನೆ, ಶ್ರೀ ಜಿ ರವೀಂದ್ರ ಸಹಾಯಕ ಸಂರಕ್ಷಣಾಧಿಕಾರಿ, ಗುಂಡ್ಲುಪೇಟೆ ಉಪವಿಭಾಗ, ಶ್ರೀ ಬಿ. ಎಂ ಮಲ್ಲೇಶ್ ವಲಯ ಅರಣ್ಯಾಧಿಕಾರಿ, ಮದ್ದೂರು ವಲಯ, ಡಾ. ಮಿರ್ಜಾ ವಾಸಿಂ ಇಲಾಖೆ ಪಶುವೈದ್ಯಾಧಿಕಾರಿಗಳು, ಕು. ಕೃತಿಕ ಆಲನಹಳ್ಳಿ ,ಎನ್ ನ್‌ಟಿಸಿಎ ಪ್ರತಿನಿಧಿ ಶ್ರೀ ರಘುರಾಮ್ ಎನ್ಜಿಓ , ಶ್ರೀ ರವಿ ಸಂಗೂರ್ ,ಉಪ ವಲಯ ಅರಣ್ಯ ಅಧಿಕಾರಿ ಶ್ರೀಸಂಜಯ್ ಹಾಗೂ ಶ್ರೀ ನವೀನ್ ಗಸ್ತು ವನ ಪಾಲಕರು ಹಾಗೂ ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular