Friday, April 4, 2025
Google search engine

Homeಕಾಡು-ಮೇಡುಬಂಡೀಪುರ: ಮಳೆ ನಡುವೆಯೂ ಹಳ್ಳದಲ್ಲಿ ನಿಂತ ನೀರು ಕುಡಿದು ದಣಿವಾರಿಸಿಕೊಂಡ ಹುಲಿ

ಬಂಡೀಪುರ: ಮಳೆ ನಡುವೆಯೂ ಹಳ್ಳದಲ್ಲಿ ನಿಂತ ನೀರು ಕುಡಿದು ದಣಿವಾರಿಸಿಕೊಂಡ ಹುಲಿ

ಗುಂಡ್ಲುಪೇಟೆ: ತುಂತುರು ಮಳೆಯ ನಡುವೆಯೂ ಹುಲಿಯೊಂದು ಹಳ್ಳದಲ್ಲಿ ನಿಂತಿದ್ದ ನೀರು ಕುಡಿದು ದಣಿವಾರಿಸಿಕೊಂಡಿರುವ ಘಟನೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಕಾನನದಲ್ಲಿ ನಡೆದಿದೆ.

ತಾಲೂಕಿನ ಬಂಡೀಪುರ ಅಭಯಾರಣ್ಯಕ್ಕೆ ಕಳೆದ ಮೂರು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಕಾಡುಪ್ರಾಣಿಗಳ ಸಹ ಜೀವನ ಶೈಲಿಗೆ ಅಡಚಣೆಯಾಗಿದೆ. ಆದರೆ ವ್ಯಾಘ್ರವೊಂದು ಕಾಡಿನ ಮಧ್ಯೆದ ರಸ್ತೆಯ ಹಳ್ಳದಲ್ಲಿ ನಿಂತಿದ್ದ ಕೆಂಪು ಮಿಶ್ರಿತ ಮಳೆ ನೀರನ್ನು ಕುಡಿದಿದೆ. ಈ ದೃಶ್ಯವನ್ನು ಬಂಡೀಪುರದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ ಸೆರೆ ಹಿಡಿದಿದ್ದಾರೆ. ಜೊತೆಗೆ ಇದನ್ನು ಕಂಡು ಸಫಾರಿಗೆ ತೆರಳಿದ್ದವರು ಪ್ರವಾಸಿಗರು ಫುಳಕಿತಗೊಂಡಿದ್ದಾರೆ.

ವ್ಯಾಘ್ರ ಹಳ್ಳದಲ್ಲಿರುವ ನೀರು ಕುಡಿಯುತ್ತಿರುವ ದೃಶ್ಯ ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರು ತೆಗೆದಿರುವುದು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶಕುಮಾರ್ ಸ್ಪಷ್ಟಪಡಿಸಿದ್ದಾರೆ. ಇನ್ನೂ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.


RELATED ARTICLES
- Advertisment -
Google search engine

Most Popular