Sunday, April 20, 2025
Google search engine

HomeUncategorizedರಾಷ್ಟ್ರೀಯಬೆಂಗಳೂರು- ಎರ್ನಾಕುಲಂ ವಂದೇ ಭಾರತ್ ಎಕ್ಸ್​​​ ಪ್ರೆಸ್​​ ಬುಧವಾರದಿಂದ ಆರಂಭ; ಇಲ್ಲಿದೆ ವೇಳಾಪಟ್ಟಿ

ಬೆಂಗಳೂರು- ಎರ್ನಾಕುಲಂ ವಂದೇ ಭಾರತ್ ಎಕ್ಸ್​​​ ಪ್ರೆಸ್​​ ಬುಧವಾರದಿಂದ ಆರಂಭ; ಇಲ್ಲಿದೆ ವೇಳಾಪಟ್ಟಿ

ಬೆಂಗಳೂರು: ಭಾರತೀಯ ರೈಲ್ವೇಯು ಬೆಂಗಳೂರು ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಜುಲೈ 31 ರಂದು ಪ್ರಾರಂಭಿಸಲು ಸಜ್ಜಾಗಿದೆ.

ಈ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ ಪ್ರೆಸ್ ವಾರಕ್ಕೆ ಮೂರು ಬಾರಿ ಉಭಯ ನಗರಗಳ ಮಧ್ಯೆ ಸಂಚರಿಸಲಿದೆ. ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ನೀಡುವುದು ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ರೈಲು ಆರಂಭಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

8 ಕೋಚ್​​ಗಳ ವಿಶೇಷ ರೈಲು

ರೈಲ್ವೆ ಇಲಾಖೆ ಮೂಲಗಳ ಪ್ರಕಾರ, ಬೆಂಗಳೂರು ಎರ್ನಾಕುಲಂ ವಂದೇ ಭಾರತ್ ಎಕ್ಸ್‌ ಪ್ರೆಸ್ ಎಂಟು ಕೋಚ್‌ ಗಳನ್ನು ಹೊಂದಿರಲಿದೆ. ಇದು ಸೆಮಿ-ಹೈ-ಸ್ಪೀಡ್ ರೈಲು ಆಗಿರುತ್ತದೆ.

ರೈಲು ಹೊರಡುವ, ತಲುಪುವ ಸಮಯ ವಿವರ

ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ಎಕ್ಸ್​ಪ್ರೆಸ್ ವಿಶೇಷ ರೈಲು ಎರ್ನಾಕುಲಂ ಜಂಕ್ಷನ್‌ನಿಂದ ಮಧ್ಯಾಹ್ನ 12:50 ಕ್ಕೆ ಪ್ರಯಾಣವನ್ನು ಆರಂಭಿಸಿ ರಾತ್ರಿ 10 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ತಲುಪಲಿದೆ. ರೈಲು ಬೆಂಗಳೂರಿನಿಂದ ಬೆಳಗ್ಗೆ 5:30ಕ್ಕೆ ಹೊರಟು 2.20 ಕ್ಕೆ ಎರ್ನಾಕುಲಂ ತಲುಪಲಿದೆ.

ಯಾವಗ  ವಂದೇ ಭಾರತ್ ಸಂಚಾರ?

ವಂದೇ ಭಾರತ್ ಎಕ್ಸ್​ಪ್ರೆಸ್ ವಿಶೇಷ ರೈಲು ಸೇವೆ ಎರ್ನಾಕುಲಂನಿಂದ ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಪ್ರತಿ ವಾರ ಲಭ್ಯವಾಗಲಿದೆ. ಬೆಂಗಳೂರಿನಿಂದ ಪ್ರತಿ ವಾರ ಗುರುವಾರ, ಶನಿವಾರ ಮತ್ತು ಸೋಮವಾರ ಲಭ್ಯವಿರುತ್ತವೆ.

ಬೆಂಗಳೂರು ಎರ್ನಾಕುಲಂ ವಂದೇ ಭಾರತ್ ಎಕ್ಸ್‌ ಪ್ರೆಸ್ ತ್ರಿಶೂರ್, ತಿರುಪುರ್, ಪಾಲಕ್ಕಾಡ್, ಪೊಡನ್ನೂರ್, ಈರೋಡ್, ಬೆಂಗಳೂರು ಕಂಟೋನ್ಮೆಂಟ್ ಮತ್ತು ಸೇಲಂ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

RELATED ARTICLES
- Advertisment -
Google search engine

Most Popular