ಮಂಗಳೂರು( ದಕ್ಷಿಣ ಕನ್ನಡ): ಬೆಂಗಳೂರಿನಲ್ಲಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ, ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಯಾವ ಉದ್ದೇಶಕ್ಕಾಗಿ ಯಾರು ಮಾಡಿದ್ದರು ಎನ್ನುವ ತನಿಖೆ ನಡೆಯುತ್ತಿದೆ.
ಅದರ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಮಾಡುವುದಕ್ಕೆ ಹೋಗುವುದಿಲ್ಲ. ಇದಕ್ಕೆ ಯಾರಾದರೂ ಬೆಂಬಲ ನೀಡಲು ಸಾಧ್ಯವಿದೆಯಾ ಎಂದು ಪ್ರಶ್ನಿಸಿದ್ದಾರೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಇಂತಹ ಘಟನೆಯಾದಾಗ ಎಲ್ಲರೂ ಒಂದಾಗಿ ಎದುರಿಸಬೇಕು ಎಂದ ಅವರು, ಬೇರೆ ರೀತಿಯಲ್ಲಿ ಪ್ರಚೋದನೆ ಮಾಡುವ ಅವಶ್ಯಕತೆ ಇಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರ ಹಿಂದೆ ಮುಂದೆ ನೋಡೋದಿಲ್ಲ. ಹಿಂದಿನ ಸರಕಾರ ಇದ್ದಾಗಲೂ ಕೂಡ ಅನೇಕ ಘಟನೆ ನಡೆದಿದೆ. ಮೋದಿ ಸರ್ಕಾರ ಇದ್ದಾಗ ಪುಲ್ವಾಮಾ ಘಟನೆ ನಡೆದಿಲ್ವಾ.? 40 ಜನ ಯೋಧರು 150 ಕೆಜಿ ಆರ್ಡಿಎಕ್ಸ್ ತೆಗೆದುಕೊಂಡು ಹೋಗಿದ್ದರು.ಆರ್ಮಿ ಇದ್ದ ಭದ್ರತಾ ಪ್ರದೇಶದಲ್ಲಿ ಆರ್‌ಡಿಎಕ್ಸ್ ಹೇಗೆ ಹೋಯಿತು. ಆಗ ಯಾವ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ಆಡಳಿತದಲ್ಲಿತ್ತು ಎಂದು ಪ್ರಶ್ನಿಸಿದರು.