Friday, April 11, 2025
Google search engine

Homeರಾಜ್ಯಬೆಂಗಳೂರು: ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ-ಸಂಸ್ಥೆಗಳಿಗೆ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ-ಸಂಸ್ಥೆಗಳಿಗೆ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು(RWAs) ಮತ್ತು ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳಲ್ಲಿ 15ನೇ ಜನವರಿ 2025 ರೊಳಗೆ ಸಮುದಾಯ ಪ್ರಾಣಿಗಳ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಪಶು ಸಂಗೋಪನೆ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದರು.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960 ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳು-2023 ಮತ್ತು ಹೆಚ್ಚುವರಿ ಉಚ್ಚ ನ್ಯಾಯಾಲಯದ ಪ್ರಕಾರ RWAs/AOAs/ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಅನ್ವಯವಾಗುವಂತೆ ನಿಯಮ ಹೊರಡಿಸಲಾಗಿದೆ. ಸಂಘ ಸಂಸ್ಥೆಗಳು ಮಾಡಬೇಕಾದ ಮತ್ತು ಮಾಡಬಾರದಂತಹ ಒಳಗೊಂಡಿರುವ AWBI ಮಾರ್ಗಸೂಚಿಗಳ ಸರಳೀಕೃತ ಆವೃತ್ತಿಯನ್ನು ಬಿಬಿಎಂಪಿ ಹೊರಡಿಸಿದೆ. ಇದರಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಅಂಶಗಳು ಇವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಗಸೂಚಿಗಳ ಅಂಶಗಳ ಮಾಹಿತಿ

  • ಸಾಕು ಪ್ರಾಣಿಗಳ ನಿರ್ವಹಣೆ, ಸಮುದಾಯದ ನಾಯಿಗಳಿಗೆ ಆಹಾರ ನೀಡುವ ಸ್ಥಳಗಳ ನಿಯೋಜನೆ, ಪ್ರಾಣಿಗಳ ಕಾನೂನುಗಳು ಮತ್ತು ಪ್ರಾಣಿಗಳ ಹಕ್ಕುಗಳ ಬಗ್ಗೆ ಮತ್ತು ನಾಯಿ ಕಡಿತ ನಿರ್ವಹಣೆ ಬಗ್ಗೆ ನಿವಾಸಿಗಳಿಗೆ ಶಿಕ್ಷಣ ನೀಡುವುದು.
  • ಕೆಲವು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು- ಅಪಾರ್ಟ್ಮ್ಂಟ್ ಮಾಲೀಕರ ಸಂಘಗಳು, ಸಂಸ್ಥೆಗಳು ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಲು ಪೂರ್ವಭಾವಿ ಆಗಿದೆ. ಇನ್ನೂ ಅನೇಕ ಸಂಘಗಳು ಮತ್ತು ಸಂಸ್ಥೆಗಳು ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಬೇಕು. ಕಟ್ಟುನಿಟ್ಟಾದ ಸಾಕು ಪ್ರಾಣಿ ನಿಯಮಗಳು ಮತ್ತು ನಾಯಿ ಕಡಿತ ನಿರ್ವಹಣೆಗಾಗಿ ಇತ್ತೀಚಿನ ಹೈಕೋರ್ಟ್ ಆದೇಶವು ಈ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವ ಅಗತ್ಯವನ್ನು ಇಲ್ಲಿ ಮತ್ತೆ ತಿಳಿಸಿದೆ.
  • ಸಮುದಾಯದ ನಾಯಿಗಳು ಮತ್ತು ಬೆಕ್ಕುಗಳನ್ನು ಸ್ಥಳಾಂತರಿಸುವುದು, ಸಾಕು ಪ್ರಾಣಿಗಳನ್ನು ನಿಷೇಧಿಸುವುದು, ಸಮುದಾಯದ ಫೀಡರ್‌ಗಳಿಗೆ ಕಿರುಕುಳ ನೀಡುವ ಮೂಲಕ ಪ್ರಾಣಿಗಳ ಆಹಾರ ಮತ್ತು ನೀರನ್ನು ಕಸಿದುಕೊಳ್ಳಬಾರದು. ಸುಳ್ಳು ನಾಯಿ ಕಡಿತದ ಪ್ರಕರಣಗಳನ್ನು ದಾಖಲಿಸುವುದು, ಪ್ರಾಣಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತು ಮಾರ್ಗಸೂಚಿಗಳ ಹೊರತಾಗಿಯೂ ಪ್ರಾಣಿ ಕೌರ್ಯ ಸಬಂಧಿಸಿದ ವಿರಳ ಸಮಸ್ಯೆಗಳ ಮೇಲೆ ಬಿಬಿಎಂಪಿ ಹೆಚ್ಚು ಗಮನ ಹರಿಸಲಿದೆ.

ಜನವರಿ15 ರಿಂದ ಮಾರ್ಗಸೂಚಿ ಜಾರಿ

ಈ ಎಲ್ಲ ಅಂಶಗಳ ಆಧಾರದ ಮೇಲೆ, ಎಲ್ಲಾ ಸಂಸ್ಥೆಗಳು (ಸಾರ್ವಜನಿಕ/ಖಾಸಗಿ ಕಚೇರಿಗಳು /ಟೆಕ್ ಪಾಕ್‌ಗಳು/ಶಾಲೆಗಳು ಮತ್ತು ಕಾಲೇಜುಗಳು /ಉದ್ಯಾನವನಗಳು / ಶಾಪಿಂಗ್ ಮಾಲ್‌ಗಳು/ ವಸತಿ ಕಲ್ಯಾಣ ಸಂಘಗಳು ಮತ್ತು ಅಪಾರ್ಟ್ಮೆಂಟ್ ಮಾಲೀಕರ ಸಂಘಗಳು) ಜುಲೈ 2024 ದಿನಾಂಕದ ಪಾಲಿಕೆ ಸಮುದಾಯ ಪ್ರಾಣಿಗಳ ಮಾರ್ಗಸೂಚಿಗಳನ್ನು ಜನವರಿ15ರಿಂದ ಜಾರಿಗೆ ತರಲು ನಿರ್ದೇಶಿಸಲಾಗಿದೆ.

ಜನವರಿ 15, 2025ರ ನಂತರ, ಬಿಬಿಎಂಪಿ ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ತಂಡಗಳ ಅನುಷ್ಠಾನದ ಸ್ಥಿತಿಯನ್ನು ಪರಿಶೀಲಿಸಲು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ವಿಫಲವಾದ ಸಂಘ ಸಂಸ್ಥೆಗಳ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ.

ಕಾನೂನು ಕ್ರಮಗಳನ್ನು ಪ್ರಾರಂಭಿಸುವ ಮೂಲಕ ಪ್ರಾಣಿಗಳ ಸ್ಥಳಾಂತರ ಮತ್ತು ಪ್ರಾಣಿ ಪಾಲಕರ ಕಿರುಕುಳದ ಘಟನೆಗಳನ್ನು ಗಂಭೀರವಾಗಿ ನಿರ್ವಹಿಸಲು ನಮ್ಮ ವಲಯದ ಸಹಾಯ ನಿರ್ದೇಶಕರುಗಳಿಗೆ ಈಗಾಗಲೇ ಸೂಚಿಸಿದ್ದಾರೆ.

ಪ್ರಾಣಿಗಳ ಕಾನೂನುಗಳ ಅನುಷ್ಠಾನ ಮತ್ತು ಅನುಸರಣೆಯನ್ನು ತಪ್ಪಿಸಲು ಯಾವುದೇ ಅಡ್ಡದಾರಿಯಲ್ಲಿ ಕುತಂತ್ರ ವಿಧಾನಗಳನ್ನು ತೆಗೆದುಕೊಳ್ಳದಂತೆ ನಾವು ನಾಗರೀಕರಲ್ಲಿ ಮನವಿ ಮಾಡುತ್ತೇವೆ. ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ನಿಸರ್ಗದಲ್ಲಿರುವ ಪ್ರತಿಯೊಂದು ಪ್ರಭೇದಕ್ಕೂ ವಿಶಿಷ್ಟವಾದ ಪಾತ್ರವಿದೆ ಎಂದು ಬಿಬಿಎಂಪಿ ಸೋಮವಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

RELATED ARTICLES
- Advertisment -
Google search engine

Most Popular