Friday, April 18, 2025
Google search engine

Homeರಾಜ್ಯಸುದ್ದಿಜಾಲನಾಗಮಂಗಲ ಗಲಾಟೆಯಲ್ಲಿ ಬಾಂಗ್ಲಾ ವಲಸಿಗರ ಕೈವಾಡ: ಸುರೇಶ್ ಗೌಡ ಆರೋಪ

ನಾಗಮಂಗಲ ಗಲಾಟೆಯಲ್ಲಿ ಬಾಂಗ್ಲಾ ವಲಸಿಗರ ಕೈವಾಡ: ಸುರೇಶ್ ಗೌಡ ಆರೋಪ

ಮಂಡ್ಯ : ನಾಗಮಂಗಲ ಗಲಭೆಯ ಹಿಂದೆ ಬಾಂಗ್ಲಾದೇಶದ ಅಕ್ರಮ ವಲಸಿಗರ ಕೈವಾಡವಿದೆ ಎಂದು ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲ ಗಲಭೆ ಹಿಂದೆ ಬಾಂಗ್ಲಾದೇಶದ ವಲಸಿಗರ ಕೈವಾಡವಿದೆ. ನಾಗಮಂಗಲದಲ್ಲಿ ಬಾಂಗ್ಲಾ ವಲಸಿಗರು ಅಕ್ರಮವಾಗಿ ನೆಲೆಸಿದ್ದಾರೆ. ನಮ್ಮವರು ಯಾರೂ ಗಲಭೆಯಲ್ಲಿ ಭಾಗಿಯಾಗಿಲ್ಲ. ಪ್ರಕರಣವನ್ನು ಎನ್ ಐಎ ಗೆ ನೀಡಿದೆ ಸತ್ಯಾಂಶ ಹೊರಗೆ ಬರಲಿದೆ ಎಂದು ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.

ನಾಗಮಂಗಲದಲ್ಲಿ ಗಣೆಶೋತ್ಸವ ಮೆರವಣಿಗೆ ವೇಳೆ ನಡೆದ ಗಲಭೆಯಲ್ಲಿ ಕಿಡಿಗೇಡಿಗಳ ಕೃತ್ಯ ಇದೀಗ ಬಯಲಾಗಿದ್ದು, ಕಿಡಿಗೇಡಿಗಳು ಸೆಪ್ಟೆಂಬರ್ ೧೧ ರ ರಾತ್ರಿ ೧೦.೪೭ ಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES
- Advertisment -
Google search engine

Most Popular