Saturday, January 31, 2026
Google search engine

Homeಸ್ಥಳೀಯಬನ್ನೂರು ಪುರಸಭೆ ಅಧಿಕಾರಿ ವಿರುದ್ಧ ಸಂಸದ ಸುನೀಲ್ ಬೋಸ್ ಗರಂ

ಬನ್ನೂರು ಪುರಸಭೆ ಅಧಿಕಾರಿ ವಿರುದ್ಧ ಸಂಸದ ಸುನೀಲ್ ಬೋಸ್ ಗರಂ

ಮೈಸೂರು : ಟಿ.ನರಸೀಪುರ ತಾಲೂಕಿನ ಬನ್ನೂರು ಪುರಸಭೆ ಮುಖ್ಯಾಧಿಕಾರಿಯನ್ನು ಸಂಸದ ಸುನೀಲ್​​ ಬೋಸ್​ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಶಾಸಕರ ಗಮನಕ್ಕೆ ತರದೆ ಲ್ಯಾಪ್​ಟಾಪ್​, ತಳ್ಳೋಗಾಡಿಯನ್ನು ಅಧಿಕಾರಿ ವಿತರಿಸಿರುವ ಕಾರಣ ಪುರಸಭೆ ಮುಖ್ಯಾಧಿಕಾರಿ ಹೇಮಂತ್​​ ವಿರುದ್ಧ ಸಂಸದ ಸುನೀಲ್ ಬೋಸ್ ಗರಂ ಆಗಿದ್ದಾರೆ.

ನೀನು ಪುರಸಭೆ ಮುಖ್ಯಾಧಿಕಾರಿನಾ? ಗುಮಾಸ್ತನ​ ರೀತಿ ಮಾತಾಡ್ತೀಯಾ,ನೀನೇನು ದನ ಮೇಯಿಸ್ತೀಯಾ, ಎಷ್ಟು ಸಲ ಹೇಳೋದು ನಿನಗೆ, ನಮ್ಮ ಅನುಮತಿ ಇಲ್ಲದೆ ಲ್ಯಾಪ್​ಟಾಪ್​, ತಳ್ಳೋಗಾಡಿ ಹೇಗೆ ಕೊಟ್ಟೆ? ಶಾಸಕರ ಗಮನಕ್ಕೆ ತರಬೇಕು ತಾನೇ? ಯಾಕೆ ವಿತರಣೆ ಮಾಡಿದ್ದೀಯಾ ಎಂದು ಏರು ಧ್ವನಿಯಲ್ಲೇ ಅಧಿಕಾರಿಯನ್ನು ಸಂಸದರು ತರಾಟೆಗೆ ತೆಗೆದುಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular