Friday, April 4, 2025
Google search engine

HomeUncategorizedರಾಷ್ಟ್ರೀಯಶ್ವೇತಭವನದಲ್ಲಿ ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷರಿಂದ ಔತಣಕೂಟ: ಬೈಡನ್ ದಂಪತಿಗೆ  ವಿಶೇಷ ಉಡುಗೊರೆ ನೀಡಿದ ಪ್ರಧಾನಿ...

ಶ್ವೇತಭವನದಲ್ಲಿ ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷರಿಂದ ಔತಣಕೂಟ: ಬೈಡನ್ ದಂಪತಿಗೆ  ವಿಶೇಷ ಉಡುಗೊರೆ ನೀಡಿದ ಪ್ರಧಾನಿ ಮೋದಿ

ವಾಷಿಂಗ್ಟನ್ ಡಿಸಿ: ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಮುಗಿಸಿ ಕಳೆದ ರಾತ್ರಿ ನೇರವಾಗಿ ವಾಷಿಂಗ್ಟನ್ ಡಿಸಿಯಲ್ಲಿರುವ ಆಡಳಿತ ಶಕ್ತಿಕೇಂದ್ರ ಶ್ವೇತಭವನಕ್ಕೆ ಹೋದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿ ಅಮೆರಿಕದ ಪ್ರಥಮ ಮಹಿಳೆ ಎಂದು ಕರೆಯಲ್ಪಡುವ ಜಿಲ್ ಬೈಡನ್ ಸ್ವಾಗತಿಸಿದರು.

ಪ್ರಧಾನಿ ಮೋದಿಯವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಜಿಲ್ ಬೈಡನ್ ಸಾಂಪ್ರದಾಯಿಕ ಸ್ವಾಗತ ಕೋರಿದರು.

ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಶ್ರೀಗಂಧದ ಪೆಟ್ಟಿಗೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ 10 ವಸ್ತುಗಳನ್ನು ಬೈಡನ್ ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ.

ರಾಜಸ್ಥಾನದ ಜೈಪುರದ ಕುಶಲಕರ್ಮಿಯೊಬ್ಬರು ಮೈಸೂರಿನಿಂದ ತಂದ ಶ್ರೀಗಂಧ ಮರದ ಕಟ್ಟಿಗೆಯಿಂದ ತಯಾರಿಸಿದ ಶ್ರೀಗಂಧದ ಪೆಟ್ಟಿಗೆಯನ್ನು ಜೋ ಬೈಡನ್ ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಪೇಪಿಯರ್ ಮಾಚೆ: ಹಸಿರು ಡೈಮಂಡ್​ ಅನ್ನು ಇರಿಸಿಲಾಗಿರುವ ಪೆಟ್ಟಿಗೆಯಾಗಿದೆ. ಕಾರ್ ಎ ಕಲಮ್ದಾನಿ ಎಂದು ಕರೆಯಲಾಗುತ್ತದೆ, ಕಾಶ್ಮೀರದ ಸೊಗಸಾದ ಪೇಪಿಯರ್ ಮಾಚೆ ಕಾಗದದ ತಿರುಳು ಹಾಗೂ ನಕ್ಖಾಶಿಯ ಸಕ್ತ್ಸಾಜಿಯರ್ ತಯಾರಿಕೆಯನ್ನು ಒಳಗೊಂಡಿದೆ.

ಗಣೇಶನ ವಿಗ್ರಹ ಉಡುಗೊರೆ: ಬೈಡನ್ ದಂಪತಿಗೆ ನೀಡಲಾಗಿರುವ ಗಂಧದ ಪೆಟ್ಟಿಗೆಯಲ್ಲಿ ಬೆಳ್ಳಿಯಿಂದ ತಯಾರಿಸಲ್ಪಟ್ಟ ಗಣೇಶನ ವಿಗ್ರಹವನ್ನು ಇರಿಸಿಲಾಗಿದೆ. ಅದರಲ್ಲಿ ದೀಪವೂ ಕೂಡ ಇದೆ.

ಬೆಳ್ಳಿಯ ತೆಂಗಿನ ಕಾಯಿ ಉಡುಗೊರೆ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ನೀಡಲಾದ ಪೆಟ್ಟಿಗೆಯು 10 ವಸ್ತುಗಳನ್ನು ಒಳಗೊಂಡಿದೆ. ಪಶ್ಚಿಮ ಬಂಗಾಳದ ಕುಶಲಕರ್ಮಿ ತಯಾರಿಸಿದ ಬೆಳ್ಳಿಯ ತೆಂಗಿನಕಾಯಿಯನ್ನು ಕೂಡ ನೀಡಲಾಗಿದೆ.

ಭೂದಾನಕ್ಕಾಗಿ ಭೂಮಿಯ ಬದಲು ಶ್ರೀಗಂಧದ ತುಂಡನ್ನು ಕೊಡಲಾಗಿದೆ. ತಮಿಳುನಾಡಿನಿಂದ ತಂದಿರುವ ಬಿಳಿ ಎಳ್ಳನ್ನು ಈ ಪೆಟ್ಟಿಗೆಯಲ್ಲಿ ಇರಿಸಲಾಗಿದೆ. ರಾಜಸ್ಥಾನದಲ್ಲಿ ಸಿದ್ಧಪಡಿಸಲಾದ 24ಕೆ ಶುದ್ಧ ಹಾಗೂ ಹಾಲ್ಮಾರ್ಕ್​ ಇರುವ ಚಿನ್ನದ ನಾಣ್ಯವನ್ನು ಹಿರಣ್ಯದಾನ ರೂಪದಲ್ಲಿ ನೀಡಲಾಗಿದೆ. ಪೆಟ್ಟಿಗೆಯು ಶೇ.99.5ರಷ್ಟು ಶುದ್ಧ ಮತ್ತು ಹಾಲ್​ಮಾರ್ಕ್​ ಬೆಳ್ಳಿಯ ನಾಣ್ಯವನ್ನು ಹೊಂದಿದೆ.

ವಜ್ರದ ಉಡುಗೊರೆ: ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್​ಗೆ ಮೋದಿ ಅವರು 7.5 ಕ್ಯಾರೆಟ್ ಹಸಿರು ವಜ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಜ್ರವು ರಾಸಾಯನಿಕ ಹಾಗೂ ಆಪ್ಟಿಕಲ್ ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆ.

RELATED ARTICLES
- Advertisment -
Google search engine

Most Popular