Wednesday, June 17, 2026
Google search engine

Homeಅಪರಾಧಬಾರ್ ಅಂಡ್ ರೆಸ್ಟೋರೆಂಟ್ ಅಗ್ನಿ ಅವಘಡ : ಕರ್ತವ್ಯ ಲೋಪ ಎಸಗಿದ ಅಬಕಾರಿ ಅಧಿಕಾರಿಗಳ ಅಮಾನತು

ಬಾರ್ ಅಂಡ್ ರೆಸ್ಟೋರೆಂಟ್ ಅಗ್ನಿ ಅವಘಡ : ಕರ್ತವ್ಯ ಲೋಪ ಎಸಗಿದ ಅಬಕಾರಿ ಅಧಿಕಾರಿಗಳ ಅಮಾನತು

ಮೈಸೂರು: ಮೈಸೂರು ನಗರದ ದಟ್ಟಗಳ್ಳಿ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಆದ ಅಗ್ನಿ ಅವಘಡದ ಸಂಬಂಧ ಕರ್ತವ್ಯ ಲೋಪವೆಸಗಿದ ಅಬಕಾರಿ ಅಧಿಕಾರಿಗಳನ್ನು  ಅಮಾನತು ಮಾಡಿ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಸದರಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕಟ್ಟಡದ ರೂಪ್ ಟಾಪ್ ನಲ್ಲಿ ಅನುಮತಿ ಪಡೆಯದೆ ಒಣ ಹುಲ್ಲು ಮತ್ತು ಗರಿಗಳಿಂದ ನಿರ್ಮಿಸಿ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದು, ಈ ಸಂಬಂಧ ಪರಿಶೀಲಿಸದೆ ಕರ್ತವ್ಯ ಲೋಪವೆಸಗಲಾಗಿದೆ ಎಂದು ಅಬಕಾರಿ ಆಯುಕ್ತರು ಅಮಾನತು ಮಾಡಿದ್ದಾರೆ.

ಮೈಸೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರು ಹಾಗೂ ಮೈಸೂರು ವಲಯ-3 ರ ಅಬಕಾರಿ ನಿರೀಕ್ಷಕರು, ಅಬಕಾರಿ ಉಪನಿರೀಕ್ಷಕರು-1, ಅಬಕಾರಿ ಉಪನಿರೀಕ್ಷಕರು-2,  ಹಾಗೂ ಒಬ್ಬ ಅಬಕಾರಿ ಪೇದೆ (ಬೀಟ್ ಕಾನ್ಸಟೇಬಲ್) ಸೇರಿದಂತೆ ಒಟ್ಟು 5 ಜನರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಪಡಿಸಿ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

RELATED ARTICLES
- Advertisment -
Google search engine

Most Popular