ವರದಿ: ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಶೇರುದಾರ ಸದಸ್ಯರು ಸಂಘದ ವತಿಯಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಬಾರಸೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಕೆ ಮಲ್ಲರಾಜೇ ಅರಸ್ ತಿಳಿಸಿದರು.
ಬಾರಸೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಸದಸ್ಯರು ಗುಣಮಟ್ಟದ ಉತ್ತಮ ಹಾಲು ಪೂರೈಕೆ ಮಾಡಿರುವುದರಿಂದ ಸಂಘ 6 ಲಕ್ಷ ನಿವ್ವಳ ಲಾಭ ಗಳಿಸಿದೆ ಮುಂದೆ ಇದೇ ರೀತಿ ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಈ ಗ್ರಾಮಕ್ಕೆ ಬಿ.ಎಂ.ಸಿ ಕೇಂದ್ರ ತರಲು ಸಹಾಯಕವಾಗುತ್ತದೆ ಎಂದರು.
ಮೈಮುಲ್ ನ ಸಹಾಯಕ ವ್ಯವಸ್ಥಾಪಕ ಡಾ.ಸತೀಶ್ ಮಾತನಾಡಿ ರೈತರಿಂದ ಗುಣಮಟ್ಟದ ಹಾಲನ್ನು ಖರೀದಿಸಿ ಅದಕ್ಕೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ಮತ್ತು ಪ್ರೋತ್ಸಾಹ ಧನವನ್ನು ನಮ್ಮ ಒಕ್ಕೂಟದಿಂದ ನೀಡಲಾಗುತ್ತದೆ ಅಲ್ಲದೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಪಶು ಆಹಾರವನ್ನು ಒಕ್ಕೂಟದ ವತಿಯಿಂದ ನೀಡಲಾಗುತ್ತದೆ, ಪಶುಗಳಿಗೆ ಅಗತ್ಯವಿರುವ ಔಷಧ ಮತ್ತು ವೈದ್ಯಕೀಯ ಸೇವೆಗಳನ್ನು ಕೂಡ ಒದಗಿಸಲಾಗುತ್ತದೆ, ಒಕ್ಕೂಟದಿಂದ ನೀಡುವ ಮಾರ್ಗದರ್ಶನದಲ್ಲಿ ಹಸು ಮತ್ತು ಕರುಗಳನ್ನು ಬೆಳೆಸಿದರೆ ರೈತರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಇದನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ವಿಸ್ತರಣಾಧಿಕಾರಿ ಶ್ರೀಕಾಂತ್ ಅವರು ಸಂಘದಲ್ಲಿನ ಅಂದಾಜು ಆಯವ್ಯಯ ಪಟ್ಟಿ ಹಾಗೂ ಜಮ ಖರ್ಚು ಲಾಭ ನಷ್ಟದ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಸಂಘಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡಿದ ಮೂವರು ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು, ಅತಿ ಹೆಚ್ಚು ಅಂಕ ಗಳಿಸಿದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಸುರೇಶ್, ನಿರ್ದೇಶಕರಾದ ಚಿಕ್ಕದೇವರಾಜೇ ಅರಸ್, ದೇವರಾಜೇಅರಸ್, ಗೋಪಾಲರಾಜೇಅರಸ್, ಜಯಚಂದ್ರರಾಜೇ ಅರಸ್, ಮುಕುಂದರಾಜೇಅರಸ್, ಚಂದ್ರಯ್ಯ, ಚಂದ್ರಕಾಂತಮ್ಮಣಿ, ಸೋಮಪ್ರಭಾ, ಸರ್ಕಾರಿ ನಾಮನಿರ್ದೇಶಿತ ನಿರ್ದೇಶಕ ಚಂದ್ರಶೇಖರರಾಜೇ ಅರಸ್, ಯಜಮಾನರಾದ ಪುಟ್ಟರಾಜು, ಸಿಇಒ ಆನಂದ್ ರಾಜೇ ಅರಸ್, ಸಿಬ್ಬಂದಿ ಆದರ್ಶ್ ಮತ್ತು ಸದಸ್ಯರು ಇದ್ದರು.