ರಾಯಚೂರು: 6 ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎಂಬ ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಯಚೂರು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿರುಗೇಟು ಶಾಸಕ ಬಸನಗೌಡ ಯತ್ನಾಳ ಹಗಲುಕನಸು ಕಾಣುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಸಿಂಧನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ಬಗ್ಗೆ ಸಿ.ಟಿ.ರವಿ ಆರೋಪ ವಿಚಾರ ಕುರಿತು ಮಾತನಾಡಿ, ಪಾಪ ಸಿ.ಟಿ.ರವಿಯವರಿಗೆ ಸಂಘದೋಷ ಅದು. ಶೇ.40 ರಷ್ಟು ಲಂಚ ತೆಗೆದುಕೊಂಡು ಹೀಗೆ ಆಗಿದೆ. ಕಾಮಲೆ ಆದವರಿಗೆ ಎಲ್ಲವೂ ಹಳದಿ ಅನ್ನಿಸುತ್ತೆ ಅಲ್ವಾ? ಅದೇ ರೀತಿ ಅವರಿಗೆ ಕಾಮಲೆ ಆಗಿದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ಕಾಂಗ್ರೆಸ್ ಸರ್ಕಾರ ಲೂಟಿ ಬಗ್ಗೆ ಎಚ್ ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ಅಸಂಬಂದ್ಧ ಹೇಳಿಕೆ ನೀಡುತ್ತಾರೆ. ಕುಮಾರಸ್ವಾಮಿ ಅವರ ಸರ್ಕಾರದ ಆಡಳಿತ ಬಗ್ಗೆ ನಾನು ಏನು ಹೇಳಬೇಕಾಗಿಲ್ಲ. ಜೆಡಿಎಸ್ ಸರ್ಕಾರವೂ ಅದು ಭ್ರಷ್ಟಾಚಾರ ಸರ್ಕಾರ. ಈ ಹಿಂದೆ ನಮ್ಮ ಜೊತೆಗೆ ಸಂಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ರು. ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ ಎಂಬ ಹತಾಶೆ ಅವರಿಗೆ ಇದೆ. ವಿಧಾನಸಭಾ ಚುನಾವಣೆಯಲ್ಲಿ ಬಹಳ ನಿರೀಕ್ಷೆ ಇತ್ತು. ಆ ನಿರೀಕ್ಷೆ ಈಡೇರಲಿಲ್ಲ ಎಂದ ಅವರು, ನಮ್ಮ ಈಗಿನ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ.