Thursday, April 17, 2025
Google search engine

Homeರಾಜ್ಯಸುದ್ದಿಜಾಲಶೋಷಿತ ಸಮುದಾಯಗಳಿಗೆ ಬಸವಾದಿ ಶರಣ ಮಾಚಿದೇವರ ಕೊಡುಗೆ ಅಪಾರ

ಶೋಷಿತ ಸಮುದಾಯಗಳಿಗೆ ಬಸವಾದಿ ಶರಣ ಮಾಚಿದೇವರ ಕೊಡುಗೆ ಅಪಾರ

ವರದಿ :ಎಡತೊರೆ ಮಹೇಶ್

ಹೆಚ್.ಡಿ.ಕೋಟೆ : ಶೋಷಿತ ಸಮುದಾಯಗಳಿಗೆ ಬಸವಾದಿ ಶರಣ ಮಾಚಿದೇವರ ಕೊಡುಗೆಗಳು ಅಪಾರ ಎಂದು ಶಿಕ್ಷಕ ಆನಂದ್ ತಿಳಿಸಿದರು.ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ರಾಷ್ಟಿಯ ಹಬ್ಬಗಳ ಆಚರಣಾ ಸಮಿತಿಯಿಂದ ಏರ್ಪಡಿಸಿದ್ದ ೭ನೇ ವರ್ಷದ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು.

ಮುಖ್ಯ ಭಾಷಣಕಾರರಾಗಿ ಶಿಕ್ಷಕ ಆನಂದ್ ಮಾತಾನಾಡಿ ಮಡಿವಾಳ ಮಾಚಿದೇವರು ಮಾನವ ಧರ್ಮದ ಸ್ಥಾಪಕ ಬಸವಣ್ಣ ಅವರ ಅನುಯಾಯಿಯಾಗಿ ಅವರ ಜೀವಿತಾವಧಿಯಲ್ಲಿ ಕೆಲವು ನೀತಿ ನಿಯಮಗಳನ್ನ ಹಾಕಿಕೊಂಡು ನಾನು ಶರಣನಲ್ಲದವರನ್ನು ಬಿಟ್ಟು ಬೇರೆಯವರ ಬಟ್ಟೆಗಳನ್ನು ತೊಳೆಯುವುದಿಲ್ಲ ಎಂದು ಶರಣ ಸಂಸ್ಕೃತಿಗೆ ಹೊಸ ನಾಂದಿ ಹಾಕುವ ಮೂಲಕ ಮೋಸ. ಕಳ್ಳತನ. ವ್ಯಭಿಚಾರ. ಕೊಲೆ. ಸುಲಿಗೆ ಮತ್ತು ಸಮಾಜದಲ್ಲಿ ಶಾಂತಿಗೆ ಮಾರಕವಾಗಿರುವಂತಹ ಯಾವ ವ್ಯಕ್ತಿಯ ಬಟ್ಟೆಗಳನ್ನು ತೊಳೆದು ಕೊಡುವುದಿಲ್ಲ ಎಂದು ತಿರ್ಮಾನ ಮಾಡಿದ್ದ ಒಬ್ಬ ಶ್ರೇಷ್ಠ ಕಾಯಕ ಜೀವಿಯಾಗಿದ್ದರು ಎಂದು ಶರಣ ಮಾಚಿದೇವರ ಜೀವನ ಕ್ರಮ ಮತ್ತು ಬದುಕಿನ ರೀತಿ ಹಾಗೂ ಶೋಷಿತ ಸಮುದಾಯಗಳಿಗೆ ಅವರ ಕೊಡುಗೆಗಳ ಬಗ್ಗೆ ತಿಳಿಸಿಕೊಟ್ಟರು.

ತಹಶೀಲ್ದಾರ್ ಶ್ರೀನಿವಾಸ್ ಮಾತನಾಡಿ ೧೨ನೇ ಶತಮಾನದಲ್ಲಿ ದುರ್ಬಲರ, ಶೋಷಿತರ, ಅವಕಾಶ ವಂಚಿತರು, ಅಸ್ಪೃಶ್ಯತೆಯಿಂದ ಬಳಲುತ್ತಿದ್ದ ಜನರಿಗೆ ಸಮಾನತೆಯನ್ನು ತಂದುಕೊಟ್ಟವರು ಬಸವಾದಿ ಶರಣರಲ್ಲಿ ಮಡಿವಾಳ ಮಾಚಿದೇವರು ಎಂದು ತಿಳಿಸಿದರು.

ಬಸವಣ್ಣನವರ ಅನುಭವ ಮಂಟಪದಲ್ಲಿ ಶ್ರೀ ಮಡಿವಾಳ ಮಾಚಿದೇವರು ಶರಣರಾಗಿ ತಮ್ಮ ಕಾಯಕದಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡಿದವರು. ಅಂದಿನ ಕಾಲಘಟ್ಟದಲ್ಲಿ ವಚನ ಸಾಹಿತ್ಯಗಳನ್ನು ಸಂರಕ್ಷಣೆ ಮಾಡಿದವರಲ್ಲಿ ಮಡಿವಾಳ ಮಾಚಿದೇವರು ಒಬ್ಬರು.ಹಾಗಾಗಿ ಪ್ರತಿಯೊಬ್ಬರು ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಮಡಿವಾಳ ಸಮಾಜ ಮಾಜಿ ಅಧ್ಯಕ್ಷ ಕೆಂಪಣ್ಣ ಮಾತನಾಡಿ ಮಡಿವಾಳ ಸಮಾಜದಲ್ಲಿ ಸಂಘಟಿತರಾಗದ ಕಾರಣ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ರಂಗದಲ್ಲಿ ಹಿಂದುಳಿದಿದೆ ಹಾಗಾಗಿ ಮುಂದಿನ ದಿನಗಳಲ್ಲಿ ನಾವೆಲ್ಲರೂ ಸಂಘಟಿತರಾಗಿ ಹೋರಾಟಗಳ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹೆಚ್.ಡಿ.ಕೋಟೆ ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ನಡೆದ ೭ನೇ ವರ್ಷದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜದ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಆದಿವಾಸಿ ಮುಖಂಡರಾದ ಮೊತ್ತ ಸೋಮಣ್ಣ ಹಾಗೂ ಮುಖ್ಯ ಭಾಷಣಕಾರರಾದ ಶಿಕ್ಷಕ ಆನಂದ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜದ ತಾಲ್ಲೂಕು ಅಧ್ಯಕ್ಷ ಮಹೇಶ್, ತಿಮ್ಮಶೆಟ್ಟಿ, ರಂಗಸ್ವಾಮಿ, ಆಟೋ ರಮೇಶ್, ಯಜಮಾನರಾದ ಬಸವರಾಜು, ಗ್ರಾ.ಪಂ. ಉಪಾಧ್ಯಕ್ಷ ಚಂದ್ರು, ಮಹದೇವಣ್ಣ, ಕಾಳಶೆಟ್ಟಿ, ಸೋಮಶೆಟ್ಟಿ, ಮಹದೇವಶೆಟ್ಟಿ, ಕೆಂಪಶೆಟ್ಟಿ, ಅರುಣ್, ಆನಂದ್ ಮೂರ್ತಿ,ಶೇಖರ್, ರಾಜಣ್ಣ, ಮರಿಶೆಟ್ಟಿ, ಹಾಗೂ ಮಹಿಳಾ ಸಂಘದ ಸದಸ್ಯರು ಇದ್ದರು.

ಹೆಚ್.ಡಿ.ಕೋಟೆ ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ನಡೆದ ೭ನೇ ವರ್ಷದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜದ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಆದಿವಾಸಿ ಮುಖಂಡರಾದ ಮೊತ್ತ ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು.

RELATED ARTICLES
- Advertisment -
Google search engine

Most Popular