Saturday, April 12, 2025
Google search engine

Homeರಾಜ್ಯಸುದ್ದಿಜಾಲಬಸವಣ್ಣ ಒಂದು ಜಾತಿಗೆ, ಒಂದು ಪ್ರದೇಶಕ್ಕೆ ಸೀಮಿತರಲ್ಲ ಅವರು ಇಡೀ ವಿಶ್ವಕ್ಕೆ ಗುರು- ಜೀವಧಾರ ಗಿರೀಶ್

ಬಸವಣ್ಣ ಒಂದು ಜಾತಿಗೆ, ಒಂದು ಪ್ರದೇಶಕ್ಕೆ ಸೀಮಿತರಲ್ಲ ಅವರು ಇಡೀ ವಿಶ್ವಕ್ಕೆ ಗುರು- ಜೀವಧಾರ ಗಿರೀಶ್

ಮೈಸೂರು: ಮೈಸೂರು ದಸರಾ ವಸ್ತುಪ್ರದರ್ಶನದ ಕರ್ನಾಟಕ ಸಂಭ್ರಮ -50 ಸಾಂಸ್ಕೃತಿಕ ವೇದಿಕೆಯಲ್ಲಿ ಕರ್ನಾಟಕ‌ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ರವರ ವಚನಗಾಯನ ಹಾಗೂ ನೃತ್ಯರೂಪಕ ಕಾರ್ಯಕ್ರಮವನ್ನ ಜೀವಧಾರ ರಕ್ತನಿಧಿ ಕೇಂದ್ರದ ಗಿರೀಶ್ ರವರು ಉದ್ಘಾಟಿಸಿದರು.

ಇದೇ ಸಂಧರ್ಭದಲ್ಲಿ ವಿಶ್ವಗುರು ಬಸವಣ್ಣ ಪ್ರಶಸ್ತಿಗೆ ಭಾಜನರಾದ , ಮಹದೇವಪ್ರಸಾದ್, ಕಂಡೇಶ್, ಮಲ್ಲಿಗೆ ವೀರೇಶ್, ಸರ್ವಮಂಗಳ, ಪುಷ್ಪಲತಾ ರವರನ್ನ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಸಮಾಜದ ಬದಲಾವಣೆಗಾಗಿ ಅಸಮಾನತೆ ಹೋಗಬೇಕು. ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಬಸವಣ್ಣ ರವರ ಸಂಕಲ್ಪವಾಗಿತ್ತು.

ಬಸವಣ್ಣರವರು ಆಡು ಮಾತಿನಲ್ಲೇ ಜನರಿಗೆ ಅರ್ಥವಾಗುವ ರೀತಿಯಲ್ಲಿ ವಚನ ಸಾಹಿತ್ಯ ರಚಿಸಿ ಕನ್ನಡಭಾಷೆಯ ಬೆಳವಣಿಗೆಗೆ ಶ್ರಮಿಸಿ ವಿಶ್ವಗುರುವಾದರು, ಸಮಾಜದಲ್ಲಿ ಇರುವ ಅಂಕುಡೊಂಕು ತಾರತಮ್ಯಗಳನ್ನ ಸರಿಪಡಿಸಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದ ಬಸವಣ್ಣರವರು 12ನೇ ಶತಮಾನದಲ್ಲೆ ಅನುಭವ ಮಂಟಪ ಸ್ಥಾಪನೆ ಮಾಡಿ ಜನಪರ ಆಡಳಿತ ನಿರ್ದೇಶಿಸಿದ್ದರು. ಬಿಜ್ಜಳ ರಾಜ ಆಸ್ಥಾನದಲ್ಲಿ ಮಂತ್ರಿಯಾಗಿ, ಕವಿಯಾಗಿ, ತತ್ವಜ್ಞಾನಿಯಾಗಿ, ಸಮಾಜ ಸುಧಾರಕರಾಗಿ ಕನ್ನಡ ಭಾಷಾ ಸಾಹಿತ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಹಾಗಾಗಿಬಸವಣ್ಣ ರವರು ಒಂದು ಜಾತಿಗೆ ಒಂದು ಪ್ರದೇಶಕ್ಕೆ ಸೀಮಿತರಲ್ಲ ಅವರು ಇಡೀ ವಿಶ್ವಕ್ಕೆ ಗುರುವಾಗಿದ್ದಾರೆ ಎಂದರು.

ಇದೇ ಸಂಧರ್ಭದಲ್ಲಿ ಕರ್ನಾಟಕ ಸಂಭ್ರಮ ವ್ಯವಸ್ಥಾಪಕ ಕೃಷ್ಣ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕರ್ನಾಟಕ ಸುಗಮಸಂಗೀತ ಪರಿಷತ್ ಅಧ್ಯಕ್ಷ ಡಾ. ನಾಗರಾಜ ವಿ ಭೈರಿ, ನಿರೂಪಕ ಅಜಯ್ ಶಾಸ್ತ್ರಿ, ಬೆಟ್ಟೆಗೌಡ, ಗಾಯಕ ಅಮ್ಮರಾಮಚಂದ್ರ, ಮಹಲಿಂಗು, ಸಿರಿಬಾಲು, ಸದಾಶಿವ, ಇನ್ನಿತರರು ಇದ್ದರು.

RELATED ARTICLES
- Advertisment -
Google search engine

Most Popular