ಮೈಸೂರು: ನಮ್ಮ ಘನ ಸರ್ಕಾರ ಘೋಷಿಸಿರುವಂತೆ ಜಗತ್ತು ಕಂಡ ಮಹಾ ಮಾನವತಾವಾದಿ ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕರಷ್ಟೇ ಅಲ್ಲ, ಮನುಷ್ಯರನ್ನು ಅಕ್ಷರಶಃ ಮನುಷ್ಯರನ್ನಾಗಿಸಿ ಸಮ ಸಮಾಜ ನಿರ್ಮಿಸಲು ತಮ್ಮ ಬದುಕನ್ನೇ ಸಮರ್ಪಿಸಿ ಕೊಂಡು ಶ್ರಮಿಸಿದ ವಿಶ್ವದ ಮೊದಲ ಮಾನವಕುಲೋದ್ಧಾರಕರೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನವು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಬಸವಜಯಂತಿ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಶ್ರೀಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದ ಶ್ರೇಷ್ಠ ಸಮಾಜ ಸುಧಾರಕ ಜಗಜ್ಯೋತಿ ಬಸವಣ್ಣನವರನ್ನು ಎಲ್ಲರೂ ಸ್ಮರಿಸುತ್ತರಾದರೂ ಅವರ ತತ್ವಾದರ್ಶಗಳನ್ನು ಪಾಲಿಸಲು ಬಹುಪಾಲು ಯಾರೂ ಮನಸ್ಸು ಮಾಡುವುದಿಲ್ಲವೆಂದರು.
ಜನಭಾಷೆ ವಚನಕ್ರಾಂತಿಯ ಹರಿಕಾರರಾಗಿ, ಆಕಾರದಲ್ಲಿ ಮನುಷ್ಯರಾಗಿದ್ದರೆ ಸಾಲದು ಅಂತರಾಳದಲ್ಲಿ ಮನುಷ್ಯತ್ವ ಇರಬೇಕೆಂದು ಇಡೀ ಮಾನವ ಕುಲದ ಮೇಲೆ ಮನುಷ್ಯತ್ವದ ಬೆಳಕು ಚೆಲ್ಲಿದ ಜಗದೋದ್ಧಾರ ಅಣ್ಣ ಬಸವಣ್ಣನವರು ಈ ನಾಡಿನಲ್ಲಿ ಜನಿಸದೇ ಹೋಗಿದ್ದಲ್ಲಿ ಎಲ್ಲರೂ ಜಾತಿ, ಮತ, ಧರ್ಮ, ವರ್ಗಗಳ ತಾರತಮ್ಯದ ಕೂಪದಲ್ಲಿ, ಮೌಢ್ಯತೆಯ ಅನಿಷ್ಠ ಪದ್ಧತಿಗಳ ನಡುವೆ ಬದಕಬೇಕಾದ ಧಾರುಣ ಪರಿಸ್ಥಿತಿಯಲ್ಲೇ ಇನ್ನೂ ಇರ ಬೇಕಾಗಿತ್ತು. ೧೨ ನೇ ಶತಮಾನದಲ್ಲಿ ಬಸವಾದಿಶರಣ ರೊಡನೆ ಬಸವಣ್ಣ ಹಚ್ಚಿದ ವಚನ ಸಾಹಿತ್ಯ ದೀಪದಿಂದ ಬಹು ದೊಡ್ಡ ಕ್ರಾಂತಿಯೇ ನಡೆದು ಮುನುಷ್ಯತ್ವದ ಬೀಜ ಮೊಳೆತು ಇಡೀ ವಿಶ್ವವು ವಿಶ್ವ ಗುರು ಬಸವಣ್ಣನ ಚಿಂತನೆಯ ಆಶಯದಂತೆ ಪರಿವರ್ತನೆಯ ಸನ್ಮಾರ್ಗದಲ್ಲಿ ಚಲಿಸಿತು.ಹೀಗೆ ಕಾಲಕಾಲಕ್ಕೆ ಆಯಾ ಕಾಲ ಘಟ್ಟಗಳಲ್ಲಿ ಇಂತಹ ಮಹನೀಯರು, ಮಹಾತ್ಮರು ಬಂದು ಮಾನವತ್ವ ಸಾರಿದರೂ ಅದನ್ನು ಅನುಸರಿಸಲು ನಾವು ನಿರ್ಲಕ್ಷಿಸುತ್ತಿದ್ದೇವೆಂದು ಬೇಸರಿಸಿದರು.
ಜಾತಿ ನಿರ್ಮೂಲನೆಗೆ ಬಸವಣ್ಣನಂತಹ ಮಹಾತ್ಮರು ಕ್ರಾಂತಿ ಮಾಡಿದರು. ವಿಪರ್ಯಾಸವೆಂದರೆ ಈಗ ಇಂತಹ ಮಹನೀಯರ ಜಯಂತಿಯನ್ನು ಸರ್ಕಾರದ ಅಣತಿಯಂತೆ ಆಚರಣೆ ಮಾಡುವ ರಾಜ್ಯ ಮತ್ತು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಗಳು ವಿವಿಧ ಸಮುದಾಯದ ಮಹನೀಯರ ಜಯಂತಿ ಮಾಡುವಾಗ ಪೂರ್ವಭಾವಿ ಸಭೆ ಮಾಡಲು ಮತ್ತು ಉಪನ್ಯಾಸ ನೀಡಲು ಆಯಾಯ ಸಮುದಾಯವರನ್ನೇ ಆಹ್ವಾನಿಸುತ್ತಾರೆ. ಒಂದು ರೀತಿ ಇದು ಜಯಂತಿಯ ಹೆಸರಿನಲ್ಲಿ ಮಹಾತ್ಮರಿಗೆ ಮಾಡುವ ಅಪಮಾನವಾಗಿದೆ. ಹಾಗಾಗಿ ಇದು ಸರಿಯಾದ ಮಾರ್ಗವಲ್ಲ. ಯಾವ ಮಹನೀಯರ ಜಯಂತಿಯನ್ನು ಆಚರಿಸಿದರೂ ಎಲ್ಲಾ ಜಾತಿ, ಜನಾಂಗ , ಧರ್ಮದವರು ಒಳಗೊಂಡಂತೆ ಸರ್ವರನ್ನೂ ಸಂಬಂಧಿಸಿದವರು ಕರೆದು ಮಹನೀಯರ ಜಯಂತಿಯನ್ನು ಆಚರಿಸುವುದು ಸೂಕ್ತ. ಏಕೆಂದರೆ ಯಾವುದೇ ಮಹನೀಯರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ ಎಂಬುದರ ಅರಿವು ಮತ್ತು ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕೆಂದು ತಿಳಿಸಿದರು.
ನಂತರ ಅಖಿಲ ಕರ್ನಾಟಕ ವೀರಶೈವ-ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಕೋಶಾಧ್ಯಕ್ಷ ವರುಣಾ ಮಹೇಶ್ ಮಾತನಾಡಿ, ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ೧೨ನೇ ಶತಮಾನದಲ್ಲಿಯೇ ಬಸವಣ್ಣನವರು ಸಾರಿದ್ದು, ಅದರಂತೆ ನಾವು ಬದುಕಬೇಕಿದೆ. ಕಳೆದ ಬಾರಿ ದಾವಣಗೆರೆಯಲ್ಲಿ ನಡೆದ ವೀರಶೈವ-ಲಿಂಗಾಯತರ ಸಮಾವೇಶದಲ್ಲಿಯೂ ಇದೇ ಸಂದೇಶವನ್ನು ಸಾರಲಾಗಿದೆ. ವೀರಶೈವ-ಲಿಂಗಾಯತ ಸಾವಿರಾರು ಒಳಪಂಗಡಗಳಿದ್ದು ಇವೆಲ್ಲವೂ ಒಟ್ಟಾಗಬೇಕೆಂಬ ದೃಷ್ಟಿಯಿಂದ ಈ ಕರೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಗೀತಾ ಕುಮಾರ್, ಸುಗುಣಾ ಪ್ರಭುದೇವ್, ಎನ್.ಅನಂತ, ಕಲ್ಮಳ್ಳಿ ನಟರಾಜು, ಟಿ.ಸುರೇಶ್ ಗೋಲ್ಡ್, ಪಾರ್ಥಸಾರಥಿ, ದೊರೆಸ್ವಾಮಿ ಹಾಗೂ ಟಿ.ಎಂ.ಕಿಶೋರ್ ಅವರಿಗೆ ಬಸವ ಭೂಷಣ ಪ್ರಶಸ್ತಿಯನ್ನು ಗಣ್ಯರು ಪ್ರದಾನ ಮಾಡಿ ಅಭಿನಂದಿಸಿದರು. ಈ ವೇಳೆ ಬಂಡಳ್ಳಿ ದೊಡ್ಡಮಠದ ಮಠಾಧ್ಯಕ್ಷರಾದ ಡಾ. ಫಲಹಾರ ಪ್ರಭುದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ, ಸಾಹಿತಿ ಡಾ.ಕೆ. ಲೀಲಾ ಪ್ರಕಾಶ್, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ.ಪ್ರದೀಪ್ ಕುಮಾರ್, ಕನ್ನಡ ಚಳವಳಿ