Sunday, April 20, 2025
Google search engine

Homeಸ್ಥಳೀಯಬಸವಣ್ಣನವರು ಒಂದು ವರ್ಗಕ್ಕೆ ಸೀಮಿತವಾಗಿರದೆ, ದೇಶ ಜಗತ್ತಿಗೆ ಭಕ್ತಿ ಭಾವನೆ ತುಂಬಿದ ಮಹಾಪುರುಷರು: ಅಮಿತ್ ಷಾ...

ಬಸವಣ್ಣನವರು ಒಂದು ವರ್ಗಕ್ಕೆ ಸೀಮಿತವಾಗಿರದೆ, ದೇಶ ಜಗತ್ತಿಗೆ ಭಕ್ತಿ ಭಾವನೆ ತುಂಬಿದ ಮಹಾಪುರುಷರು: ಅಮಿತ್ ಷಾ ಬಣ್ಣನೆ

ಸುತ್ತೂರು: ಬಸವಣ್ಣ ನವರು ಒಂದು ವರ್ಗಕ್ಕಲ್ಲ ದೇಶ ಜಗತ್ತಿಗೆ ಭಕ್ತಿ ಭಾವನೆ ತುಂಬಿದ ಮಹಾಪುರುಷರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು. ಸುತ್ತೂರಿನಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಅಮಿತ್ ಶಾ ಅವರು ಭಾಗವಹಿಸಿ ಮಾತನಾಡಿದರು.

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಹಲವು ರೀತಿಯ ಚಟುವಟಿಕೆಗಳು ನಡೆಯುವ ಮೂಲಕ ಸಮಾಜ ಸೇವೆ ಸಲ್ಲಿಸಲಾಗುತ್ತಿದೆ ಎಂದು ಅಮಿತ್ ಶಾ ಶ್ಲಾಘಿಸಿದರು.

ಸುತ್ತೂರು ಸಂಸ್ಥೆಯ ವತಿಯಿಂದ ಹಲವು ರೀತಿಯ ಸೇವೆಗಳ ನಡೆಯುತ್ತಿದೆ. ಸುತ್ತೂರು ಮಠದ ಲ್ಲಿ 350ಕ್ಕೂ ಹೆಚ್ಚು ಸಂಸ್ಥೆಗಳಿವೆ. 20,000 ಸಿಬ್ಬಂದಿ ಇದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ ಇವೆಲ್ಲವೂ ಉತ್ತಮವಾದ ಕಾರ್ಯ ಎಂದು ಹೇಳಿ ದ ಅಮಿತ್ ಶಾ ಅವರು, ಶ್ರೀಗಳು ದಿವ್ಯಾಂಗರಿಗಾಗಿ ಪಾಲಿಟೆಕ್ನಿಕ್ ಒಂದನ್ನು ತೆರೆದು ನಡೆಸುತ್ತಿರುವ ಸೇವೆ ಇದೊಂದು ಪುಣ್ಯದ ಕೆಲಸವಾಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ, ಕಾಶಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್, ಉಜ್ಜಯಿನಿಯಲ್ಲಿ ಮಹಾ ಕಾಳೇಶ್ವರ ಕಾರಿಡಾರ್ ಸೇರಿದಂತೆ ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸುವಂತಹ ಕಾರ್ಯದೊಂದಿಗೆ ಉತ್ತಮವಾದ ಕೊಡುಗೆಯನ್ನು ದೇಶಕ್ಕಾಗಿ ನೀಡುವ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಪುನರುತ್ಥಾನ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.

ಇಂದಿನ ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಸಂಸದ ಪ್ರತಾಪ್ ಸಿಂಹ, ವಿಪಕ್ಷ ನಾಯಕ, ಅಶೋಕ್, ಸಿಟಿ ರವಿ, ಪ್ರಭಾಕರ್ ಕೋರೆ ಸೇರಿದಂತೆ ಹಲವು ಮಂದಿ ಬಿಜೆಪಿ ಮುಖಂಡರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular