Friday, April 11, 2025
Google search engine

Homeರಾಜ್ಯಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಹೆಸರು ಪ್ರಕಟಿಸಿದ ಬಿಬಿಎಂಪಿ

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಹೆಸರು ಪ್ರಕಟಿಸಿದ ಬಿಬಿಎಂಪಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂಟು ವಲಯಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಟಾಪ್ 50 ಸುಸ್ತಿದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸ್ಟಾರ್ ಹೋಟೆಲ್‌ಗಳು, ರಿಯಲ್ ಎಸ್ಟೇಟ್ ಸಂಸ್ಥೆಗಳು, ಟೆಕ್ ಪಾರ್ಕ್‌ಗಳು, ಐಟಿ ಕಂಪನಿಗಳು ಮತ್ತು ಶಾಪಿಂಗ್ ಮಾಲ್‌ಗಳು ಬಿಬಿಎಂಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿದೆ. 400 ತೆರಿಗೆ ಸುಸ್ತಿದಾರರಿಂದ ಒಟ್ಟು 130.79 ಕೋಟಿ ರೂ. ಹಣ ಬಿಬಿಎಂಪಿಗೆ ತೆರಿಗೆ ರೂಪದಲ್ಲಿ ಬರಬೇಕಿದೆ.

ವಲಯವಾರು ಪಟ್ಟಿ ಇಲ್ಲಿದೆ ವಿವರ…..

ಪಶ್ಚಿಮ ವಲಯ: ₹35.78 ಕೋಟಿ

ಬೊಮ್ಮನಹಳ್ಳಿ ವಲಯ: ₹31.80 ಕೋಟಿ

ದಾಸರಹಳ್ಳಿ ವಲಯ: ₹25.10 ಕೋಟಿ

ದಕ್ಷಿಣ ವಲಯ: ₹12.55 ಕೋಟಿ

ಮಹದೇವಪುರ ವಲಯ: ₹8.69 ಕೋಟಿ

ಪೂರ್ವ ವಲಯ: ₹8.54 ಕೋಟಿ

ರಾಜರಾಜೇಶ್ವರಿನಗರ ವಲಯ: ₹8.33 ಕೋಟಿ

ಯಲಹಂಕ ವಲಯ; ₹7.22 ಕೋಟಿ

ಸುಸ್ತಿದಾರರು

ಪಶ್ಚಿಮ ವಲಯ: ಅಭಿಷೇಕ್ ಡೆವಲಪರ್ಸ್ (₹33.88 ಕೋಟಿ), ಶ್ರೀನಿವಾಸ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (₹11.59 ಕೋಟಿ), ದಾಸರಹಳ್ಳಿ ವಲಯ: ಟಿ.ಎನ್. ವೆಂಕಟೇಶ್ ಮತ್ತು ವಿ.ಪುಷ್ಪಕುಮಾರಿ (₹11.51 ಕೋಟಿ), ಪೂರ್ವ ವಲಯ: GSTAAD ಹೋಟೆಲ್ಸ್ ಪ್ರೈ. ಲಿಮಿಟೆಡ್ (₹2.75 ಕೋಟಿ), ಮಹದೇವಪುರ ವಲಯ: ಬ್ರಿಗೇಡ್ ಫೌಂಡೇಶನ್ (₹1.46 ಕೋಟಿ), ರಾಜರಾಜೇಶ್ವರಿನಗರ ವಲಯ ಸೌಜನ್ಯ ಪಟೇಲ್ ಟ್ರಸ್ಟ್ (₹1.14 ಕೋಟಿ), ಜ್ಞಾನಸ್ವೀಕರ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಹೆಚ್.ಡಿ. ದಕ್ಷಿಣ ವಲಯ ಬಾಲಕೃಷ್ಣೇಗೌಡ (₹ 1.11 ಕೋಟಿ) ದಕ್ಷಿಣ ವಲಯದ ಮಾಗಡಿ ಮುಖ್ಯರಸ್ತೆಯಲ್ಲಿನ ಗಂಗಾಧರ್ ಟಿ (₹ 1.85 ಕೋಟಿ) ಹಾಗೂ ಯಹಹಂಕ ವಲಯ: ಮಾನ್ಯತಾ ಪ್ರಮೋಟರ್ಸ್ ಪ್ರೈ. ಲಿ. (₹ 1.89 ಕೋಟಿ) ಬಾಕಿ ಉಳಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular