ಮೈಸೂರು : ಮನುಷ್ಯ ಕಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವ ಬದಲು ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮುನ್ನೆಚ್ಚರಿಕೆ ವಹಿಸಿದರೆ ಹೆಚ್ಚು ಕಾಲ ಆರೋಗ್ಯವಂತರಾಗಿರಬಹುದು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ|| ಸಿ.ಎನ್. ಮಂಜುನಾಥ್ ತಿಳಿಸಿದರು.
ಮೈಸೂರು ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಕಳೆದ ೧೫ ವರ್ಷದಿಂದ ಈಚೆಗೆ ೩೫ ವರ್ಷದಿಂದ ೪೫ ವರ್ಷದೊಳಗಿನವರಲ್ಲಿ ಹೃದಯಘಾತ ಸಂಭವಿಸುತ್ತಿರುವುದು ಆಂತಕಕಾರಿ ಬೆಳವಣಿಗೆಯಾಗಿದ್ದು, ಯಾರಾದರೂ ಗಣ್ಯವ್ಯಕ್ತಿಗಳು ಸತ್ತಾಗ ಚರ್ಚೆಗೆ ಬರುತ್ತದೆ. ಕಳೆದ ೬ ವರ್ಷದಲ್ಲಿ ಐದುವರೆಸಾವಿರ ಯುವಕರನ್ನು ಅಧ್ಯಯನ ಮಾಡಿದ್ದೇವೆ. ಅದರಲ್ಲಿ ಶೆ. ೮% ಮಹಿಳೆಯರಿಗೆ ಹೃದಯಘಾತವಾಗುತ್ತಿದೆ. ಹೆಂಗಸರಲ್ಲಿ ಹೆಚ್ಚಾಗಿ ಉದಾಸೀನ ಮನೋಭಾವದಿಂದ ಆಸ್ಪತ್ರೆಗೆ ತೆರಳಿ ಚಕಿತ್ಸೆ ಪಡೆಯದೆ ಸಾವನ್ನಪ್ಪುತ್ತಿದ್ದರೆ, ಕೆಲವರಿಗೆ ಅನುವಂಶಿಯತೆಯಿ0ದಲೂ ಹೃದಯಘಾತವಾಗುತ್ತದೆ. ಆದ್ದರಿಂದ ೩೫ ವರ್ಷ ಮೇಲ್ಪಟ್ಟವರು ಸಿ.ಟಿ. ಸ್ಕಾö್ಯನ್‌ನಲ್ಲಿ ಕ್ಯಾಲ್ಸಿಯಂ ಸ್ಕೋರ್, ಟಿ.ಎಂ.ಟಿ., ಇ.ಸಿ.ಜಿ., ಎಕೋ, ಟೆಸ್ಟ್ಗಳನ್ನು ಮಾಡಿಸಿಕೊಳ್ಳಬೇಕು. ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ೪೫ ರಿಂದ ೬೦ ನಿಮಿಷ ವಾಕಿಂಗ್ ಮಾಡಬೇಕು. ವೈದ್ಯರು ಕೊಟ್ಟಿರುವ ಮಾತ್ರೆಗಳನ್ನು ನಿಲ್ಲಿಸಬಾರದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ|| ಕೆ.ಎಸ್. ಸದಾನಂದ, ಡಾ|| ನರೇಂದ್ರ, ಡಾ|| ಶಂಕರ್‌ಶಿರಾ, ಡಾ|| ರಾಜೀತ್, ಡಾ|| ವೀಣಾ ನಂಜಪ್ಪ, ಡಾ|| ದಿನೇಶ್, ಡಾ|| ಶಿವರಾಂ, ಡಾ|| ಜಯಪ್ರಕಾಶ್, ಡಾ|| ಮಂಜುನಾಥ್, ಡಾ|| ಭಾರತಿ, ಡಾ|| ಕುಮಾರ್, ಡಾ|| ಶ್ರೀನಿಧಿ ಹೆಗ್ಗಡೆ, ಡಾ|| ರಶ್ಮಿ, ಡಾ|| ದೇವರಾಜ್, ಡಾ|| ಶಿಶಿರ್‌ಮಿರ್ಜಾ, ಡಾ|| ರಂಜಿತಾ, ಡಾ|| ಸೌಜನ್ಯ, ಆರ್.ಎಂ.ಓ. ಡಾ|| ಪಶುಪತಿ, ನರ್ಸಿಂಗ್ ಅಧೀಕ್ಷಕ ಹರೀಶ್‌ಕುಮಾರ್, ಇಂಜಿನಿಯರ್ ಪ್ರಸಾದ್, ಶಂಕರ್, ಸಯ್ಯದ್ ಹಾಜರಿದ್ದರು.