Saturday, April 19, 2025
Google search engine

Homeಅಪರಾಧಬಿಟ್ ಕಾಯಿನ್ ನಲ್ಲಿ ಹಣ ಹೂಡುವ ಮುನ್ನ ಎಚ್ಚರ

ಬಿಟ್ ಕಾಯಿನ್ ನಲ್ಲಿ ಹಣ ಹೂಡುವ ಮುನ್ನ ಎಚ್ಚರ

ಬಿಟ್ ಕಾಯಿನ್​ನಲ್ಲಿ ಸುಲಭ ಹಣ ಸಂಪಾದಿಸಲು ಹೋಗಿ ಲಕ್ಷ ಲಕ್ಷ ಹಣ ಕಳೆದುಕೊಂಡ ಮೈಸೂರು ನಿವಾಸಿಗಳು

ಮೈಸೂರು: ಬಿಟ್ ಕಾಯಿನ್ಮೂಲಕ ಲಕ್ಷ ಲಕ್ಷ ಹಣ ಸಂಪಾದಿಸಲು ಹೋಗಿ ಪಂಗನಾಮ ಹಾಕಿಸಿಕೊಂಡಿದ್ದಾರೆ. ಮಧ್ಯವರ್ತಿಯ ಮಾತಿಗೆ ಮರುಳಾಗಿ ಮೈಸೂರು ನಿವಾಸಿಗಳು ಬರೋಬ್ಬರಿ 87 ಲಕ್ಷ ರೂ. ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಮೈಸೂರಿನ ಮೇಟಗಳ್ಳಿ ನಿವಾಸಿ ವಿಜಯಲಕ್ಷ್ಮಿ 52 ಲಕ್ಷ ರೂ. ಹಾಗೂ ಮೊಹಮ್ಮದ್ ಜಾವೇದ್ 35 ಲಕ್ಷ ರೂ. ಹಣ ಕಳೆದಕೊಂಡವರು. ಮಹಮ್ಮದ್ ಜಾವೇದ್ ಬಳಿ 35 ಲಕ್ಷ ರೂ. ಹಣವನ್ನ‌ ಖದೀಮರು 15 ಅಕೌಂಟ್​ಗಳಿಗೆ ಹಾಕಿಸಿಕೊಂಡಿದ್ದರೆ, ವಿಜಯಲಕ್ಷ್ಮೀಯವರಿ0ದ 52 ಲಕ್ಷ ರೂ. ಹಣವನ್ನ 36 ಅಕೌಂಟ್ಸ್ ಗೆ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ.

ಟೆಲಿಗ್ರಾಂನಲ್ಲಿ ಇನ್ವೈಟೇಷನ್ ಕಳುಹಿಸಿ ಗ್ರೂಪ್ ರಚಿಸುವ ಖದೀಮರು, ಕ್ರಿಪ್ಟೋ ಕರೆನ್ಸಿಯಲ್ಲಿ ಇನ್ವೆಸ್ಟ್ ಮಾಡಿ ಲಕ್ಷ ಲಕ್ಷ ಲಾಭಗಳಿಸಿ ಎಂದು ಸುಳ್ಳು ಭರವಸೆ ನೀಡುತ್ತಾರೆ. ಗ್ರೂಪ್ ರಚಿಸಿ ಲಕ್ಷ ಲಕ್ಷ ಲಾಭ ಗಳಿಸಿರುವ ನಕಲಿ ಸ್ಕ್ರೀನ್ ಶಾಟ್ ಕಳುಹಿಸಿ ಜನರಿಗೆ ನಂಬಿಕೆ ಬರುವಂತೆ ಮಾಡಿ ಟೋಪಿ ಹಾಕುತ್ತಾರೆ.

ಒಂದು ಬಾರಿಯೂ ಮೊಬೈಲ್ ಮೂಲಕ ಮಾತನಾಡದೆ ಎಲ್ಲವನ್ನು ಟೆಲಿಗ್ರಾಂನಲ್ಲೇ ಚಾಟ್ ಮಾಡುತ್ತಾರೆ. ವಂಚಕರು. ಎಲ್ಲಿಯೂ ಸಂದೇಹ ಬರದಂತೆ ಗ್ರಾಹಕರನ್ನ ವಂಚನೆ ಮಾಡಿರುವ ನಕಲಿ ಟ್ರೇಡರ್ಸ್, ಜಮ್ಮು ಕಾಶ್ಮೀರದ ಶ್ರೀನಗರದಿಂದ ಕೇರಳದವರೆಗೆ ನೆಟ್ ವರ್ಕ್ ಹೊಂದಿದ್ದು, ಹಣ ವರ್ಗಾವಣೆಯಾದ ಕ್ಷಣಾರ್ಧದಲ್ಲಿ ಹಣ ಡ್ರಾ ಮಾಡಿಕೊಂಡು ಯಾಮಾರಿಸುತ್ತಾರೆ.

ಶ್ರೀನಗರ‌ದಲ್ಲಿ 2 ಅಕೌಂಟ್, ಕೇರಳ, ಬೆಂಗಳೂರು, ಮಧ್ಯಪ್ರದೇಶ್, ಜಾರ್ಖಂಡ್, ಉತ್ತರಪ್ರದೇಶ ಸೇರಿದಂತೆ ವಿವಿಧ ಭಾಗದಲ್ಲಿ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದ್ದು, ಬಿಟ್ ಕಾಯಿನ್ ಟ್ರೇಡರ್ಸ್ ಕಾಂಟ್ಯಾಕ್ಟ್ ಕಂಡು ಮೈಸೂರು ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.

ಒಂದೇ ತಿಂಗಳಿನಲ್ಲಿ ಎರಡು ಪ್ರಕರಣಗಳು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಬಿಟ್ ಕಾಯಿನ್ ನಲ್ಲಿ ಹಣ ಹೂಡುವ ಮುನ್ನ ಎಚ್ಚರಿಕೆ ವಹಿಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಕರೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular