ಮಂಡ್ಯ: ಜಿಲ್ಲೆಯ ಉಸ್ತುವಾರಿ ಸಚಿವ ತಾಳ್ಮೆ ಕಳೆದುಕೊಂಡಿದ್ದಾರೆ. ಕುಮಾರಸ್ವಾಮಿ ಬಗ್ಗೆ ಮಾತನಾಡಬೇಕಾದ್ರೆ ಎಚ್ಚರಿಕೆ ಇರಲಿ ಎಂದು ಸಚಿವ ಚಲುವರಾಯಸ್ವಾಮಿ ಅವರಿಗೆ ಮಾಜಿ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಧಿಕಾರ ಇರುವ ಸರ್ಕಾರಕ್ಕೆ ತುಂಬಾ ತಾಳ್ಮೆ ಇರಬೇಕು. ಉಸ್ತುವಾರಿ ಹಾಗೂ ಕೃಷಿ ಸಚಿವರು ಯಾಕೆ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ.? ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಟೀಕೆ ಟಿಪ್ಪಣಿಗಳನ್ನ ಸ್ವೀಕರಿಸುವವರು ನಿಜವಾದ ನಾಯಕ. ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ. ನಿಮ್ಮ ನಡವಳಿಕೆ ಸರಿಯಾಗಿಲ್ಲ. ವಿರೋಧ ಪಕ್ಷದ ಟೀಕೆಗಳನ್ನ ಸ್ವೀಕರಿಸಿ ಮಾರ್ಗದರ್ಶನ ಅಂತ ತಿಳಿದುಕೊಳ್ಳಿ. ಅಧಿಕಾರದಲ್ಲಿರುವವರು ಯಾವತ್ತು ತಾಳ್ಮೆ ಕಳೆದುಕೊಳ್ಳಬಾರದು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಬ್ಬು ಅರೆಯುವಿಕೆ ಬಗ್ಗೆ ಯೋಚನೆ ಮಾಡಿ ಎಂದರು.
ಪಾಂಡವಪುರದ ಕಾರ್ಯಕ್ರಮ ಪೂರ್ವನಿಗದಿತ ಕಾರ್ಯಕ್ರಮ. ಯಾಕೆ ಕುಮಾರಸ್ವಾಮಿ ಬಗ್ಗೆ ಇಷ್ಟೊಂದು ಮಾತನಾಡ್ತಿರಿ? ಎಂದು ಪ್ರಶ್ನಿಸಿದರು.
ಮಳೆ ಪ್ರವಾಸ ಬಂದು ಸಮುದ್ರಕ್ಕೆ ಸೇರುತ್ತಿದೆ. ತಮಿಳುನಾಡಿಗೆ ನೀರು ಹೋಗ್ತಿದೆ, ಮೇಕೆದಾಟು ಕಟ್ಟಿಸಿ ನೀರು ಉಳಿಸಿ. ಸಮುದ್ರಕ್ಕೆ ಅನಗತ್ಯವಾಗಿ ನೀರು ಹರಿದು ಹೋಗ್ತಿದೆ. ತಮಿಳುನಾಡಿನ ರೀತಿ ಆಟಕ್ಕೆ ಬಿಟ್ಟು ಹೋರಾಟ ಮಾಡಿ. ಎಲ್ಲಾ ನಾಯಕರು ಸೇರಿ ಮೇಕೆದಾಟು ಸಮಸ್ಯೆ ಬಗೆಹರಿಸಿ. ಎರಡೂ ರಾಜ್ಯದ ಸಿಎಂ ಮಾತನಾಡಿ ಮೇಕೆದಾಟು ಕಟ್ಟಿಸಿ. ವ್ಯರ್ಥವಾಗುವ ನೀರನ್ನ ಉಳಿಸಿಕೊಳ್ಳಿ ಎಂದು ತಿಳಿಸಿದರು.
ಚಲುವರಾಯಸ್ವಾಮಿ ಅವರೇ ಜವಾಬ್ದಾರಿಯುತವಾಗಿ ಕೆಲಸ ಮಾಡಿ. ಕುಮಾರಸ್ವಾಮಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಬೇಡಿ. ಅವರ ನೇತೃತ್ವದಲ್ಲಿ ನೀವು ಮುಂದೆ ಬಂದಿದ್ದಿರಿ. ಅವರ ಬಗ್ಗೆ ಮಾತನಾಡಬೇಕಾದರೆ ಸ್ವಲ್ಪ ಗೌರವ ಇರಲಿ. ಜಿಲ್ಲೆಯ ಯಾವುದೇ ರಾಜಕೀಯ ಪಕ್ಷದ ಮುಖಂಡರು ತಾಳ್ಮೆಯಿಂದ ಕೆಲಸ ಮಾಡಿ. ಕಾವೇರಿ ಸಮಸ್ಯೆ ಪರಿಹಾರಕ್ಕೆ ಗಮನ ಕೊಡಿ. ಟೀಕೆ ಮಾಡುವುದು ಸರಿಯಲ್ಲ. ಇದನ್ನ ಎಲ್ಲರು ನಿಲ್ಲಿಸಿ ಎಂದು ಹೇಳಿದರು.