Friday, April 18, 2025
Google search engine

Homeರಾಜ್ಯದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಮಾಂಸ ಮಾಫಿಯಾ: ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿಕ್ಕೆ ಒತ್ತಾಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಮಾಂಸ ಮಾಫಿಯಾ: ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿಕ್ಕೆ ಒತ್ತಾಯ

ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಹತ್ಯೆ ನಡೆಸುವ ದೊಡ್ಡ ಗೋಮಾಂಸ ಮಾಫಿಯಾ ಕಾರ್ಯಾಚರಿಸುತ್ತಿದೆ. ಅದನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣ ವೇದಿಕ ಒತ್ತಾಯಿಸಿದೆ.

ಮಂಗಳೂರಿನಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಮುಖಂಡ ಭಾಸ್ಕರ್ ರಾವ್ ಬಾಳ ಅವರು, ಜುಲೈ 7 ರಂದು ಕೃಷ್ಣಾಪುರದ ಎಂಟನೇ ಬ್ಲಾಕ್ ನಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿಖಾನ ಬಗ್ಗೆ, ಬಜರಂಗದಳ ಕಾರ್ಯಕರ್ತರು ಕೊಟ್ಟ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದಾಗ ಮನೆಯೊಳಗೆ ಗೋವಧೆ ನಡೆಯುತ್ತಿದ್ದುದು ಕಂಡುಬಂದಿತ್ತು. ಈ ವೇಳೆ ನೂರಾರು ಕೆ.ಜಿ ಗೋಮಾಂಸ ಹಾಗೂ 19 ಗೋವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಆದರೆ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸದೇ ಇದಿದ್ದು, ಅಕ್ರಮ ಕಸಾಯಿಖಾನೆ ನಡೆಸುವವರಿಗೆ ಹೆದರಿಕೆ ಇಲ್ಲದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಗೋ ಹತ್ಯೆ ಅಕ್ರಮ ಗೋಸಾಗಾಟದ ಬಗ್ಗೆ, ಸಂಘಟಿತವಾಗಿ ಕಾರ್ಯಾಚರಿಸುತ್ತಿರುವ ಗೋಮಾಂಸ ಮಾಫಿಯವನ್ನು ಮಟ್ಟ ಹಾಕಿ ಈ ಕೆಳಗಿನ ಕ್ರಮ ಕೈಗೊಳ್ಳಲು ನಮ್ಮ ಬೇಡಿಕೆ ಜಿಲ್ಲಾಡಳಿತಕ್ಕೆ ತಿಳಿಸುತ್ತಾ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

RELATED ARTICLES
- Advertisment -
Google search engine

Most Popular