ಮೈಸೂರು: ದಿನದರ್ಶಿಕೆ ಅಥವಾ ಕ್ಯಾಲೆಂಡರ್ ಎಂಬುದು ನಮ್ಮಲ್ಲಿ ಅಕ್ಷರ ಸಂಸ್ಕೃತಿಗೂ ಮೊದಲೇ ಇದ್ದು ಅದು ಕಾಲಕ್ಕೆ ತಕ್ಕಂತೆ ಆಯಾಕಾಲಘಟ್ಟಗಳಲ್ಲಿ ತಂತ್ರಜ್ಞಾನದೊಡನೆ ಬೆಳೆದು ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಬಹು ವರ್ಣಮಯವಾಗಿ ವಿವಿಧ ರೂಪಗಳಲ್ಲಿ ಜನಾಕರ್ಷಣೀಯವಾಗಿದೆ ಎಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.
ನಗರದ ದೇವರಾಜ ಮೊಹಲ್ಲಾದಲ್ಲಿರುವ ದೇವರಾಜ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಕರ್ನಾಟಕ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹಿತರಕ್ಷಣಾ ಸಂಘ ಮತ್ತು ರಾಜ್ಯ ಪಿ.ಯು.ಒಕ್ಕೂಟ ಬೆಂಗಳೂರು ಏರ್ಪಡಿಸಿದ್ದ 2024ರ ನೂತನ ವರ್ಷದ “ದಿನ ದರ್ಶಿಕೆ” ಬಿಡುಗಡೆ ಸಮಾರಂಭದಲ್ಲಿ ದಿನದರ್ಶಿಕೆ ಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಓರ್ವ ವ್ಯಕ್ತಿ ಮಾಡಲಾಗದ್ದನ್ನು ಒಂದು ಸಂಘ ಮಾಡಬಲ್ಲದು ಹಾಗಾಗಿ ಸಂಘ ಶಕ್ತಿ ಅದರಲ್ಲೂ ವಿಶೇಷವಾಗಿ ಬೋಧಕರ ಶಕ್ತಿ ಬಹು ದೊಡ್ಡದೆಂದೂ, ಇಂಥಾ ಶಕ್ತಿಯಿಂದ ಸಮಾಜದ ಕ್ಷೇಮಾ ಭಿವೃದ್ಧಿ ಸಾಧ್ಯವೆಂದರು.
ಉಪನ್ಯಾಸಕರಿಗಿಂತಲೂ ಹೆಚ್ಹಾಗಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕಾಡ್ನೂರು ಶಿವೇಗೌಡರು ಪ್ರಾಚಾರ್ಯರಾಗಿದ್ದ ಕಾಲದಲ್ಲಿ ಅವರ ನೇತೃತ್ವದಲ್ಲಿ ಈ ಸಂಘ ಸ್ಥಾಪಿತವಾಗಿದ್ದು ತನ್ಮೂಲಕ ಅಂದಿನಿಂದಲೂ ಪಿಯುಸಿಯ ಲ್ಲಿ ಅನುತ್ತೀರ್ಣರಾದ ಕಾಲೇಜು ವಿದ್ಯಾರ್ಥಿಗಳಿಗೆ ವಿಷಯ ತಜ್ಞ ಉಪನ್ಯಾಸಕರಿಂದ ಉಚಿತವಾಗಿ ಕೋಚಿಂಗ್ ನೀಡಲಾಗುತ್ತಿದೆ. ಇದೊಂದು ಸಮಾನ ಮನಸ್ಕ ಸಮಾಜ ಮುಖಿ ತಂಡವಾಗಿದ್ದು ರಾಜ್ಯದ ಇತರೇ ಶೈಕ್ಷಣಿಕ ಸಂಘ ಸಂಸ್ಥೆಗಳಿಗೆ ಮತ್ತು ಬೋಧಕರಿಗೆ ಮಾದರಿಯಾಗಿದೆ. ಕ್ಯಾಲೆಂಡರ್ ಅಥವಾ ದಿನದರ್ಶಿಕೆ ಎಂಬುದು ಇಂದು ನಿನ್ನೆಯದಲ್ಲ. ಇದಕ್ಕೆ ಸುದೀರ್ಘವಾದ ಪ್ರಾಚೀನ ಇತಿಹಾಸವಿದೆ. ಭಾರತೀಯ ಸಂಸ್ಕೃತಿಯಲ್ಲಿ ಇದು ಹಾಸು ಹೊಕ್ಕಾಗಿದ್ದು ನಮ್ಮ ಪರಂಪರೆಯಲ್ಲಿ ಇದಕ್ಕೊಂದು ವಿಶಿಷ್ಟ ಸ್ಥಾನವಿದ್ದು ದಿನಗಣನೆ ಯ ದಿನದರ್ಶಿಕೆಯು ಕಾಲಜ್ಞಾನದ, ಕಾಲ ಪ್ರಜ್ಞೆಯ ಪ್ರತೀಕವಾಗಿದೆ. ಗೋಡೆಯಲ್ಲಿದ್ದುಕೊಂಡೇ ನಮ್ಮನ್ನು ಪ್ರತಿದಿನವೂ ಎಚ್ಚರಗೊಳಿಸುವ ಒಂದು ವಿಶಿಷ್ಟ ಸಾಧನ ದಿನದರ್ಶಿಕೆ. ಕಳೆದು ಹೋದ ನಂತರ ಮತ್ತೆ ಮರಳಿ ಬಾರದ ವಸ್ತುವೆಂದರೆ ಅದು ಕಾಲ. ಹಾಗಾಗಿ ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ಶಿಕ್ಷಕರು, ಉಪನ್ಯಾಸಕರು, ಬೋಧಕರು, ಪ್ರಾಧ್ಯಾಪಕರು ಕಾಲದ ಬೆಲೆಯನ್ನು ಬಲ್ಲವರಾಗಿರಬೇಕು. ಇಂತಹ ಅಮೂಲ್ಯವಾದ ಕಾಲದ ಬೆಲೆಯನ್ನು ಪ್ರತಿದಿನ ನೆನಪಿಸುವ ದಿನದರ್ಶಿಕೆಯನ್ನು ಬಹುಸುಂದರವಾಗಿ ಅಷ್ಟೇ ವಿಶಿಷ್ಟವಾಗಿ ಹೊರತಂದಿರುವ ಉಪನ್ಯಾಸಕರ ಸಂಘ ಹಾಗೂ ಪಿಯು ಒಕ್ಕೂಟದ ಕಾರ್ಯ ನಿಜಕ್ಕೂ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಮಾತನಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ. ಮರಿಸ್ವಾಮಿ ಅವರು, ಅಖಿಲ ಕರ್ನಾಟಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಸಂಘ ಮತ್ತು ಪಿಯು ಒಕ್ಕೂಟ ಸಂಘಟನೆ ಗಳೆರಡೂ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದು ಅಭಿನಂದನಾರ್ಹ ವೆಂದು ಫೇಲಾದ ವಿದ್ಯಾರ್ಥಿಗಳಿಗೆ ತಿಳಿಹೇಳಿ ಪ್ರತಿ ವರ್ಷ ಉಚಿತವಾಗಿ ಕೋಚಿಂಗ್ ನೀಡುತ್ತಿರುವ ಉಪನ್ಯಾಸಕರನ್ನು ಅಭಿನಂದಿಸಿದರು. ವಿಶ್ರಾಂತ ಪ್ರಾಚಾರ್ಯ ಹಾಗೂ ಸಾಹಿತಿ ಕಾಡ್ನೂರು ಶಿವೇಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಒಳ್ಳೆಯ ಕೆಲಸಕ್ಕೆ ಪ್ರತಿಯೊಬ್ಬರೂ ಸಹಕರಿಸ ಬೇಕೆಂದ ಅವರು ಅಂತಹ ಸಹಕಾರ ನಮ್ಮ ಸಂಘದಲ್ಲಿದೆ ಎಂದು ಹೆಮ್ಮೆಯಿಂದ ಹೇಳಿದರು. ಪ್ರಾಂಶುಪಾಲರಾದ ಡಾ. ಎಂ.ಜಿ.ರಮಾನಂದರು ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯರಾದ ಎನ್. ವಿಜೇಂದ್ರಕುಮಾರ್, ಪಿ.ಎಸ್.ಜಾನ್, ಟಿ.ಎಸ್.ಸುದೀಪ್, ಬಾಲಸುಬ್ರಮಣ್ಯ, ನಾಗೇಗೌಡ, ಜನಾರ್ಧನ,ಉಪನ್ಯಾಸಕರ ಹಿತ ರಕ್ಷಣಾ ಸಂಘದ ಜಿಲ್ಲಾಧ್ಯಕ್ಷ ರಾದ ಕೋಟೆ ಜೆ.ವೆಂಕಟೇಶ್, ಗೌರವಾಧ್ಯಕ್ಷರಾದ ಪಣಿರಾಜ್, ಕಾರ್ಯಾಧ್ಯಕ್ಷರಾದ ಕುಮಾರ್, ಉಪನ್ಯಾಸಕರಾದ ಕಾಳಿ ಪ್ರಸಾದ್,ಬಾಲರಾಜ್, ದಕ್ಷಿಣಾಮೂರ್ತಿ, ಜಗದೀಶ್, ಸೂರ್ಯ ಕುಮಾರ್, ನಾಗೇಶ್, ಆನಂದ್ ಕುಮಾರ್, ಶ್ಯಾಮಲ, ಉಷಾಗೋಂದಳಿ, ಸುನೀತಾ, ಬಿ.ಸಬಿತಾ, ಶ್ರೀಮತಿ , ಡಾ.ಸರಳಾ , ರಾಧಮ್ಮ , ಪ್ರಭಾವತಿ, ಪುಷ್ಪಲತಾ, ಮೋನಿಕಾ , ಜ್ಯೋತಿ, ಗಂಗಮ್ಮ, ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಫೋಟೋ ರಾಜಗೋಪಾಲ್ ಇನ್ನಿತರರು ಭಾಗವಹಿಸಿದ್ದರು.
ಅಕ್ಷರ ಸಂಸ್ಕೃತಿಗೂ ಮುನ್ನ ನಮ್ಮಲ್ಲಿ ‘ದಿನದರ್ಶಿಕೆ’ ಪರಿಕಲ್ಪನೆ ಇತ್ತು: ಸಾಹಿತಿ ಬನ್ನೂರು ರಾಜು
RELATED ARTICLES