Wednesday, April 16, 2025
Google search engine

Homeಅಪರಾಧಕಾನೂನುಫಲಿತಾಂಶಕ್ಕೂ ಮುನ್ನ, ಸಿಪಿ ಯೋಗೇಶ್ವರ್ ವಿರುದ್ಧ ದೂರು ದಾಖಲಿಸಿದ ಪುತ್ರ

ಫಲಿತಾಂಶಕ್ಕೂ ಮುನ್ನ, ಸಿಪಿ ಯೋಗೇಶ್ವರ್ ವಿರುದ್ಧ ದೂರು ದಾಖಲಿಸಿದ ಪುತ್ರ

ಬೆಂಗಳೂರು : ಈಗಾಗಲೇ ನವೆಂಬರ್ 13 ರಂದು ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆದಿದ್ದು, 23 ರಂದು ಫಲಿತಾಂಶ ಹೊರಬೀಳಲಿದೆ. ಇದರ ಮಧ್ಯ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ ಪಿ ಯೋಗೇಶ್ವರ್ ಅವರ ವಿರುದ್ಧ ಸಹಿ ನಕಲು ಮಾಡಿದ್ದರ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.

ಸಿಪಿ ಯೋಗೇಶ್ವರ್ ಅವರ ಮೊದಲನೇ ಪತ್ನಿಯ ಪುತ್ರ ಶ್ರವಣ್ ಅವರ ಸಹಿ ನಕಲು ಮಾಡಿದ ಆರೋಪದಡಿ ಸಿಪಿ ಯೋಗೇಶ್ವರ್ ವಿರುದ್ಧ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ. ಪ್ರಕರಣದ ವಿಚಾರಣೆ ನಾಳೆ ನಡೆಯಲಿದೆ. ದೂರು ನೀಡಲು ಕಾರಣ ಏನೆಂದರೆ ಬೆಂಗಳೂರಿನಲ್ಲಿ ಸಿಪಿ ಯೋಗೇಶ್ವರ್ ಮೊದಲನೇ ಪತ್ನಿ ಹಾಗೂ ಪುತ್ರ ಶ್ರವಣ್ ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದರು. ಈ ಮನೆಯನ್ನು ಸಿಪಿ ಯೋಗೇಶ್ವರ್ ಅವರ ಮೊದಲನೇ ಪತ್ನಿ ಹಾಗೂ ಪುತ್ರ ಶ್ರವಣ್, ನಿಶಾಗೆ ಉಡುಗರೆಯಾಗಿ ನೀಡಿದ್ದಾರೆ.

ಆದರೆ ಸಿಪಿ ಯೋಗೇಶ್ವರ್ ಅವರು ಪುತ್ರ ಶ್ರವಣ್ ಅವರ ಸಹಿ ನಕಲು ಮಾಡಿ ಇದರಲ್ಲಿ ನನಗೂ ಭಾಗ ಬೇಕು ಎಂದು ಅರ್ಜಿ ಹಾಕಿದ್ದಾರೆ. ಅಲ್ಲದೆ ನಾನು ನನ್ನ ಅಕ್ಕನಿಗೆ ಮನೆ ಗಿಫ್ಟ್ ನೀಡಿಲ್ಲ. ಮನೆಯಲ್ಲಿ ನನಗೂ ಭಾಗ ಬೇಕು ಅಂತ ಶ್ರವಣ್​ ಅವರ ಹೆಸರಿನಲ್ಲಿ ಸಿಪಿ ಯೋಗೇಶ್ವರ ಕೋರ್ಟ್​​ನಲ್ಲಿ ಅರ್ಜಿ ಹಾಕಿದ್ದಾರೆ. ಈ ಅರ್ಜಿಯಲ್ಲಿ ಶ್ರವಣ್​ ಅವರ ಸಹಿಯನ್ನು ಸಿಪಿ ಯೋಗೇಶ್ವರ್​ ಮಾಡಿದ್ದಾರೆ. ಹೀಗೆ, ಸಿಪಿ ಯೋಗೇಶ್ವರ್​ ಪುತ್ರ ಶ್ರವಣ ಅವರ ಸಹಿ ನಕಲು ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular