Friday, April 4, 2025
Google search engine

Homeವಿದೇಶಬೀಜಿಂಗ್ :‘ದೊಕ್ಸುರಿ’ ಪ್ರಬಲ ಚಂಡಮಾರುತ: "ರೆಡ್‌ ಅಲರ್ಟ್‌" ಘೋಷಣೆ

ಬೀಜಿಂಗ್ :‘ದೊಕ್ಸುರಿ’ ಪ್ರಬಲ ಚಂಡಮಾರುತ: “ರೆಡ್‌ ಅಲರ್ಟ್‌” ಘೋಷಣೆ

ಬೀಜಿಂಗ್: ‘ದೊಕ್ಸುರಿ’ ಚಂಡಮಾರುತದ ಪರಿಣಾಮ ಭಾರಿ ಮಳೆ ಸುರಿಯುತ್ತಿರುವ ಕಾರಣ ರಾಜಧಾನಿ ಸೇರಿದಂತೆ ಉತ್ತರ ಚೀನಾದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಫುಜಿಯಾನ್ ಪ್ರಾಂತ್ಯಕ್ಕೆ ಪ್ರಬಲ ಚಂಡಮಾರುತ ಶುಕ್ರವಾರ ಅಪ್ಪಳಿಸಿದ್ದು, ಗಂಟೆಗೆ 175 ಕಿ.ಮೀ ವೇಗದಲ್ಲಿ ಗಾಳಿ ಬೀಸಿತ್ತು. ಬಳಿಕ ಉತ್ತರದ ಕಡೆಗೆ ದಿಕ್ಕು ಬದಲಿಸಿದೆ ಎಂದು ಚೀನಾದ ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಧಾರಾಕಾರ ಮಳೆಯ ಪರಿಣಾಮ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ಬೀಜಿಂಗ್‌ ಮತ್ತು ಸಮೀಪದ ಪ್ರಾಂತ್ಯಗಳಲ್ಲಿ ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ ಎಂದೂ ವಿವರಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಉದ್ಯಾನಗಳನ್ನು ಮುಚ್ಚಲಾಗಿದೆ. ಸರೋವರ ಮತ್ತು ನದಿ ದಡದ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ನೆರೆ‌ಯ ಹೆಬೈ ಪ್ರಾಂತ್ಯದಲ್ಲೂ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಅಗತ್ಯವಿದ್ದರೆ ಮಾತ್ರ ಮನೆಗಳಿಂದ ಹೊರಬರಬೇಕು’ ಎಂದು ಫುಜಿಯಾನ್ ಪ್ರಾಂತ್ಯದ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular