Tuesday, April 15, 2025
Google search engine

Homeರಾಜ್ಯಸುದ್ದಿಜಾಲವ್ಯಸನ ಮುಕ್ತರಾಗುವುದರಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯ : ಸುತ್ತೂರು ಶ್ರೀ

ವ್ಯಸನ ಮುಕ್ತರಾಗುವುದರಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯ : ಸುತ್ತೂರು ಶ್ರೀ

ಯಳಂದೂರು: ಒಬ್ಬ ವ್ಯಕ್ತಿ ಕುಡಿತಕ್ಕೆ ದಾಸನಾದರೆ ಅವನ ಆರೋಗ್ಯ ಹದಗಿಡುವುದರ ಜೊತೆಗೆ ಅವನ ಘನತೆಗೆ ಕುಂದುಂಟಾಗಿ ಸಮಾಜದ ಸ್ವಾಸ್ಥ ಕೂಡ ಹಾಳಾಗುತ್ತದೆ ಹೀಗಾಗಿ ವ್ಯಸನಿಗಳು ವ್ಯಸನಮುಕ್ತರಾಗುವುದರಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಸುತ್ತೂರು ಶ್ರೀಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಸಲಹೆ ನೀಡಿದರು.

ಅವರು ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠ ಹಾಗೂ ಅನೇಕ ಸ್ಥಳೀಯ ಸಂಘ ಸಂಸ್ಥೆಗಳ ಜೊತೆಗೂಡಿ ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಕಳೆದ ಒಂದು ವಾರದಿಂದ ಏರ್ಪಡಿಸಲಾಗಿದ್ದ ಉಚಿತ ಕುಡಿತ ಬಿಡಿಸುವ ಶಿಬಿರ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿ ಮದ್ಯಪಾನ ದೂಮಪಾನಗಳಂತಹ ವ್ಯಸನಗಳಿಂದ ಜನರು ಮುಕ್ತರಾಗಬೇಕಿದೆ. ನಾವು ವ್ಯಸನಕ್ಕೆ ದಾಸರಾದರೆ ಅದರಿಂದ ಹೊರಬುರುವುದು ಬಲು ಕಠಿಣ. ಕುಡಿತವು ಸಾರ್ವಕಾಲಿಕ ಸಮಸ್ಯೆಯಾಗಿದೆ. ಇದರಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತದೆ. ವ್ಯಕ್ತಿಯ ಘನತೆ ಹಾಗೂ ಆರೋಗ್ಯಕ್ಕೆ ಕುಂದುಂಟಾಗುತ್ತದೆ. ಸಮಾಜ ಹಾಗೂ ಸಮುದಾಯಗಳ ಸ್ವಾಸ್ಥ್ಯವೂ ಹದಗೆಡುತ್ತದೆ. ಇದರಿಂದ ಇದರ ಜಾಡ್ಯಕ್ಕೆ ಒಳಗಾದವರು ಇದರಿಂದ ಮುಕ್ತರಾಗುವ ಪಣ ತೊಡಬೇಕು.

ಆಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಬೇಕೆಂದ ಅವರು ಇದಕ್ಕಾಗಿ ಜೆಎಸ್‌ಎಸ್ ಸಂಸ್ಥೆಯು ಕಾರ್ಯಪ್ರವೃತ್ತವಾಗಿದ್ದು, ಇಂತಹ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಇದರ ಮಾಹಿತಿ ಇರುವವರು ಮುಂದಿನ ದಿನಗಳಲ್ಲಿ ಇಂತಹ ಮದ್ಯವ್ಯಸನಿಗಳನ್ನು ಗುರುತಿಸಿ, ಅಂತಹವರನ್ನು ಇಂತಹ ಶಿಬಿರಗಳಿಗೆ ದಾಖಲು ಮಾಡಿ, ಅವರನ್ನು ಬದಲಾಯಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ೧೦ ದಿನಗಳ ಕಾಲ ನಡೆದ ಶಿಬಿರದಲ್ಲಿ ಸುಮಾರು ೩೦ ಮಂದಿ ಪಾಲ್ಘೋಂಡು ಇದೀಗ ವ್ಯಸನಮುಕ್ತರಾಗಿದ್ದಾರೆ. ಮುಂದಿನ ದಿನಗಳಲ್ಲಿಯೂ ಸಹ ಪುನಃ ಇಂತಹ ಚಟಗಳಿಗೆ ಬಲಿಯಾಗದೇ ಸಾರ್ಥಕ ಜೀವನ ನಡೆಸಬೇಕೆಂದು ಕರೆ ನೀಡಿದರು.

ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ ಆರ್ ಕೃಷ್ಣಮೂರ್ತಿ ಮಾತನಾಡಿ ಜಿಲ್ಲೆಯ ಬಹುತೇಕ ಭಾಗಗಳಿಂದ ಶಿಬಿರದಲ್ಲಿ ಪಾಲ್ಘೋಂಡಿದ್ದು, ಇವರಿಗೆ ಪ್ರತಿನಿತ್ಯ, ಧ್ಯಾನ, ಯೋಗ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ, ಮನೋಲ್ಲಾಸ ಚಟುವಟಿಕೆಗಳು, ಆರೋಗ್ಯ ತಪಾಸಣೆ, ವಿಚಾರ ವಿನಿಮಯ, ಸಮೂಹ ಚರ್ಚೆ, ಆಟೋಟ, ನಾಟಕಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಮಧ್ಯಪಾನದಿಂದಾಗುವ ಸಮಸ್ಯೆಗಳ ಕುರಿತು ತಿಳಿಹೇಳಲಾಗಿದೆ. ಸಾಮಾಜಿಕ ಪಿಡುಗಾಗಿರುವ ಕುಡಿತದಿಂದ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿ, ಹೆಂಡತಿ, ಮಕ್ಕಳನ್ನೆದೇ ಕುಟುಂಬದಲ್ಲಿ ತೊಂದರೆಗಳುಂಟಾಗುತ್ತದೆ. ಬದುಕಿಗೆ ತೊಡಕೆನಿಸಿರುವ ಕುಡಿತದ ಅಭ್ಯಾಸವನ್ನು ಬಿಟ್ಟು ಇದೀಗ ವ್ಯಸನಮುಕ್ತರಾಗಿ ಹೊಸ ಬದುಕು ನಡೆಸಲು ಹೊರಟಿರುವ ಶಿಬಿರಾರ್ಥಿಗಳು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಜೀವನ ನಡೆಸಬೇಕೆಂದು ಸಲಹೆ ನೀಡಿದರು.

ಶಿಬಿರಾರ್ಥಿ ಮಾರ್ಟಳ್ಳಿಯ ಸೆಲ್ವನಾಥನ್ ಮಾತನಾಡಿ ತಾವು ಕುಡಿತ ಚಟಕ್ಕೆ ಬಲಿಯಾಗಿ ಕೆಲಸ ಹಾಗೂ ಕುಟುಂಬವನ್ನು ಕಳೆದುಕೊಳ್ಳಬೇಕಾಯಿತು. ಇದರಿಂದ ಘಾಸಿಯಾದ ನಾನು ಕುಡಿತ ಬಿಡಬೇಕೆಂಬ ಪಣ ತೊಟ್ಟು ಈಗ ಶಿಬಿರಕ್ಕೆ ದಾಖಲಾಗಿ ಇಂದು ಕುಡಿತದ ಚಟದಿಂದ ಮುಕ್ತನಾಗಿದ್ದೇನೆ. ಮುಂದಿನ ದಿನಗಳಲ್ಲಿ ಮಾದರಿ ಜೀವನ ನಡೆಸಲಿದ್ದೇನೆ ಎಂದರು. ಮತ್ತೋರ್ವ ಶಿಬಿರಾರ್ಥಿ ಬೀರೂರು ಯತೀಶ್ ಮಾತನಾಡಿ ಕುಡಿತದ ವ್ಯಸನದಿಂದ ಆಚೆ ಬರಲು ತಾವು ಶಿಬಿರಕ್ಕೆ ದಾಖಲಾಗಿದ್ದು, ಇದೀಗ ೧೦ ದಿನಗಳ ಶಿಬಿರದಲ್ಲಿ ಪಾಲ್ಘೋಂಡು ಸಂಪೂರ್ಣ ವ್ಯಸನಮುಕ್ತನಾಗಿದ್ದೇನೆ. ಯೋಗ ಧ್ಯಾನ ಹಾಗೂ ಪ್ರವಚನಗಳ ಮೂಲಕ ಮಧ್ಯವ್ಯಸನದ ಕುರಿತು ನಮಗೆ ಅರಿವು ಮೂಡಿಸಿದ್ದು, ಮುಂದಿನ ದಿನಗಳಲ್ಲಿಯೂ ಸಹ ತಾವು ವ್ಯಸನಮುಕ್ತ ಜೀವನ ನಡೆಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಇನ್ನೂ ಹಲವು ಶಿಬಿರಾರ್ಥಿಗಳು ಹಾಗೂ ಅವರ ಪೋಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಅಗರ ಮಠದ ಶ್ರೀ ಸಿದ್ದಮಲ್ಲಸ್ವಾಮಿ, ಕಾರಾಪುರ ಮಠದ ಬಸವರಾಜಸ್ವಾಮಿ, ಗೌಡಹಳ್ಳಿ ಮಠದ ಮರಿತೋಂಟದಾರ್ಯಸ್ವಾಮಿ, ಕೆಸ್ತೂರು ಮಠದ ತೋಂಟದಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಡಿ ಜಿ ರಾಜೇಶ್, ವಿ ಮಲ್ಲಿಕಾರ್ಜುನಸ್ವಾಮಿ, ಎಂ ವೀರಭದ್ರಸ್ವಾಮಿ, ಹೆಚ್ ಜಿ ಸಂತೋಷ್, ಡಾ ಎಂ ಪಿ ಸೋಮಶೇಖರ್, ಶಿಬಿರಾಧಿಕಾರಿ ಮನೋಹರ್, ಡಾ ನಾಗೇಂದ್ರ, ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular