ಪಿರಿಯಾಪಟ್ಟಣ: ತಾಲೂಕಿನ ಬೆಕ್ಕರೆ ಗ್ರಾಮದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಜರುಗಿತು.
ಗ್ರಾಮದ ನಾಗೇಂದ್ರಚಾರ್ ಕುಟುಂಬದವರಿಂದ ನಡೆದ ವಿಶೇಷ ಪೂಜೆಯಲ್ಲಿ ಅರ್ಚಕರಾದ ಚಂದ್ರಶೇಖರ್ ಹಾಗು ನಂದೀಶ್ ನೇತೃತ್ವದಲ್ಲಿ ದೇವಾಲಯವನ್ನು ತಳಿರು ತೋರಣದಿಂದ ಸಿಂಗರಿಸಿ ದೇವರಿಗೆ ಹಲವು ಬಗೆಯ ಅಭಿಷೇಕ ಕುಂಕುಮಾರ್ಚನೆ ನಡೆದು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ ಬಳಿಕ ಮಹಾ ಮಂಗಳಾರತಿ ನೆರವೇರಿಸಿ ಪ್ರಸಾದ ವಿತರಿಸಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ವಿಶ್ವಕರ್ಮ ಸಮಾಜ ತಾಲೂಕು ಅಧ್ಯಕ್ಷ ಮಹೇಶ್ ಆಚಾರ್ಯ ಹಾಗೂ ಪದಾಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು ಬಳಿಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಮಹೇಶ್ ಆಚಾರ್ಯ ಅವರು ಮಾತನಾಡಿ ಅ.1 ರಂದು ಪಿರಿಯಾಪಟ್ಟಣ ನಗರದಲ್ಲಿ ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು ಸಮಾಜದ ಬಾಂಧವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.
ಈ ಸಂದರ್ಭ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ, ತಾಲೂಕು ವಿಶ್ವಕರ್ಮ ಸಮಾಜದ ಪ್ರಮುಖರಾದ ಹಿರಣ್ಣಯ್ಯ, ಗಣೇಶ್, ತಿರುನಿಲಕಂಠ, ಮಹೇಶ್, ದೇವಾಲಯ ಸಮಿತಿ ಅಧ್ಯಕ್ಷ ಸೋಮಶೇಖರ್, ಪದಾಧಿಕಾರಿಗಳಾದ ಭಾಸ್ಕರ್ ಆಚಾರ್, ಚಂದ್ರಶೇಖರ್, ರುಕ್ಮಂಗದಾಚಾರ್, ಮುಖಂಡರಾದ ನಂಜಪ್ಪ, ಬಿ.ಎಸ್ ನಂಜುಂಡಸ್ವಾಮಿ, ಮನೋಹರ್, ನಾಗಭೂಷಣಾರಾಧ್ಯ, ಗೋಪಾಲ್, ಲೋಕೇಶ್, ಸಣ್ಣಸ್ವಾಮಿ ಸೇರಿದಂತೆ ಗ್ರಾಮದ ಮಹಿಳೆಯರು ಹಾಗೂ ಸುತ್ತಮುತ್ತಲ ಗ್ರಾಮದ ಭಕ್ತರು ಇದ್ದರು.