Saturday, February 14, 2026
Google search engine

Homeಆರೋಗ್ಯಬೆಳಗಾವಿ: ಜಾತ್ರೆಯಲ್ಲಿ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ

ಬೆಳಗಾವಿ: ಜಾತ್ರೆಯಲ್ಲಿ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ

ಬೆಳಗಾವಿ: ಜಾತ್ರೆಯಲ್ಲಿ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ನಡೆದಿದೆ.

30 ಜನರಿಗೆ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಯಲ್ಲಿ, 10 ಜನರಿಗೆ ಕೆರೂರಿನ ಅಂಗವಾಡಿಯಲ್ಲಿ ಹಾಗೂ 10 ಜನರಿಗೆ ಯಕ್ಸಂಬಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಕೆರೂರು ಗ್ರಾಮದ ಬಾಳುಮಾಮಾ ಜಾತ್ರೆಯಲ್ಲಿ ಸಾವಿರಾರು ಜನ ನಿನ್ನೆ(ಮೇ.29) ಪ್ರಸಾದ ಸೇವಿಸಿದ್ದರು. ಸಂಜೆ ಊಟ ಮಾಡಿದ ಬಳಿಕ ವಾಂತಿ-ಭೇದಿ ಶುರುವಾಗಿದೆ. ಇದು ತಿಳಿಯದೇ ಮಧ್ಯಾಹ್ನ ಉಳಿದಿದ್ದ ಅಡುಗೆಯನ್ನು 200ಕ್ಕೂ ಹೆಚ್ಚು ಜನ ರಾತ್ರಿಯೂ ಸೇವಿಸಿದ್ದರು ಎನ್ನಲಾಗಿದೆ. ಇನ್ನು ಅಸ್ವಸ್ಥರಾದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ತಂಡ ಗ್ರಾಮದಲ್ಲೇ ಬಿಡುಬಿಟ್ಟಿದೆ.

RELATED ARTICLES
- Advertisment -
Google search engine

Most Popular