ಬೆಳಗಾವಿ: ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ಶುಕ್ರವಾರ ನಸುಕಿನ ಜಾವ ನಗರದಲ್ಲಿ ಸಂಚರಿಸಿ ಕಂಗ್ರಾಳಿಯಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಅದೃಷ್ಟವಶಾತ್ ಯಾವುದೇ ಜೀವ ಮತ್ತು ಆಸ್ತಿ ಹಾನಿ ಸಂಭವಿಸಿಲ್ಲ.
ಸುಮಾರು ಮೂರು ಗಂಟೆಗಳ ಕಾಲ ನಗರದಲ್ಲಿ ಸುತ್ತಮುತ್ತ ಸಂಚರಿಸಿದ ಆನೆ ಉಚಗಾವಿ ಕಡೆ ಸಾಗಿದೆ.