ಬಳ್ಳಾರಿ: ಸರ್ಕಾರಿ ಶಾಲೆಗಳಲ್ಲಿ, ಶಿಕ್ಷಣ ಉತ್ತಮ ಗುಣ ಮಟದಟದಲ್ಲಿದ್ದರು, ಅಲ್ಲಿನ ವಾತಾವರಣ, ಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬೀರುವುದು ಸಾಮಾನ್ಯ. ಹೀಗಾಗಿ,ಕೊರತೆಗಳಿರುವ ಶಾಲೆಗಳನ್ನ ಅಭಿವೃದ್ದಿ ಪಡಿಸುವ ಉದ್ದೇಶಕ್ಕೆ ಈ ಸಂಸ್ಥೆ ಮುಂದಾಗಿದ್ದು ವಿಜಯನಗರ ಜಿಲ್ಲೆಯ, ವೆಂಕಟಾಪುರ, ವೆಂಕಟಾಪುರ ಕ್ಯಾಂಪ್ ಮತ್ತು ಬುಕ್ಕಸಾಗರ ಗ್ರಾಮಗಳಲ್ಲಿನ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನ ಆಯ್ಕೆ ಮಾಡಿಕೊಂಡ ಏರ್ ವಾಟರ್ ಇಂಡಿಯಾ ಲಿಮಿಟೆಡ್ ಮುಖ್ಯಸ್ಥರಾದ ರೆಹಮಾನ್ ಮತ್ತು ಸ್ಥಳಿಯ, ಸ್ಥಿರ ಸಂಸ್ಥೆಯ ರೇಣುಕಾ ಅವರ ಜೊತೆಗೂಡಿ ಪ್ರತಿ ಶಾಲೆಗೂ, ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಉಟದ ತಟ್ಟೆ, ಲೋಟ ಸೇರಿದಂತೆ ಶೌಚಾಲಯಗಳನ್ನ ದುರಸ್ತಿಗೊಳಿಸಿ ಕಸ ವಿಲೆವಾರಿಗೆ ಕಸದ ಬಾಕ್ಸ್‌ಗಳನ್ನ ಉಚಿತವಾಗಿ ನೀಡುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಕೈ ಜೋಡಿಸಿದೆ.

ರಾಜ್ಯದಲ್ಲಿ ಅನೇಕ ಉದ್ಯಮಿಗಳು ಸಂಸ್ಥೆಗಳು, ಕಾರ್ಯನಿರ್ವಹಿಸುತ್ತಿದ್ದು ಅಭಿವೃದ್ದಿ ಕಾಣದ ಬಡ ಮಕ್ಕಳ ಸರ್ಕಾರಿ ಶಾಲೆಗಳನ್ನ ಉನ್ನತಿ ಕರಿಸಿ ಅಭಿವೃದ್ದಿಗೊಳಿಸಲು ಮುಂದಾದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆ ಶಿಕ್ಷಣ ಕೇತ್ರ ಬೆಳೆಯುವುದರಲ್ಲಿ ಯಾವುದೆ ಅನುಮಾನವಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಇನ್ನು ಈ ಸಂದರ್ಭದಲ್ಲಿ ಸಂಸ್ಥೆಯ ಕೈಲಾಶ, ಅಭಿರಾಜ್, ಚಿನ್ನರಾವ್, ಕಿರಣ್ ನಿಗ್ಗುಡಗಿ ಮತ್ತು ಸ್ಥಿರ ಸಂಸ್ಥೆಯ ಸಂಸ್ಥಾಪಕಿ ರೇಣುಕ, ಶಾಲೆಯ ಹೆಚ್ ಎಮ್ ಪಿ.ಜೆ ನಿರಂಜನ್, ಶಿಕ್ಷಕ ವೃಂದ ಸೇರಿದಂತೆ, ಶಾಲೆಯ ನೂರಾರು ಮಕ್ಕಳು ಉಪಸ್ಥಿತರಿದ್ದರು.