ಬಳ್ಳಾರಿ: ಮಧ್ಯರಾತ್ರಿಯಲ್ಲಿ ಕರಡಿಯೊಂದು ಕೂಡ್ಲಿಗಿ ಪಟ್ಟಣದ ಮುಖ್ಯರಸ್ಥೆಯಲ್ಲಿ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಭಯಭೀತರಾದ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಧ್ಯರಾತ್ರಿ ರಾಜಾರೋಷವಾಗಿ ಕರಾಡಿ ಅಡ್ಡಾಡ್ಡುತ್ತಿರುವ ದೃಶ್ಯವನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಕೂಡ್ಲಿಗಿಯ ಮುಖ್ಯರಸ್ತೆ ಜನ ವಸತಿ ಪ್ರದೇಶವಾಗಿದ್ದು, ರಸ್ತೆ ಬದಿಯಲ್ಲೆ, 24ಗಂಟೆಯ ಸಾರ್ವಜನಿಕ ಆಸ್ಪತ್ರೆಯಿದೆ. ಈ ಕಾರಣದಿಂದಾಗಿ ನಿವಾಸಿಗಳು ಆತಂಕಗೊಂಡಿದ್ದಾರೆ.
ಪಟ್ಟಣದ ಅವನತಿ ದೂರದಲ್ಲೆ ದಟ್ಯ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಕರಡಿಧಾಮವಿದ್ದು, ಆಹಾರ ಅರಸಿ ಪಟ್ಟಣದ ಕಡೆಗೆ ಕಾಡು ಪ್ರಾಣಿಗಳು ಲಗ್ಗೆ ಇಡುತ್ತಿವೆ. ಆದ್ದರಿಂದ ಅನಾಹುತ ನಡೆಯುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.