ಬಳ್ಳಾರಿ: ನಗರದ ಮಾತೃ ಮಹಿಳಾ ಮಂಡಳಿ 77 ನೇ ಸ್ವತಂತ್ರೋತ್ಸವ ದಿನಾಚರಣೆಯನ್ನು, ಪಟೇಲ್ ನಗರದ ಸರ್ಕಾರಿ ಶಾಲಾ ಮಕ್ಕಳಿಗೆ ಸ್ವಾತಂತ್ರ ದಿನಾಚರಣೆ ವಿಷಯವಾಗಿ ಪ್ರಬಂಧ ಸ್ಪರ್ಧೆ ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದೆ.
ಒಂದಲ್ಲ ಒಂದು ಸಾಮಾಜಿಕ ಕಾರ್ಯಗಳ ಮೂಲಕ ಮುಂಚೂಣಿಯಲ್ಲಿರುವ ಶ್ರಿ ಮಾತೃ ಮಹಿಳಾ ಮಂಡಳಿ, ಶಾಲಾ ಮಕ್ಕಳಲ್ಲಿ, ಭಾರತದ ಇತಿಹಾಸ ಜ್ಞಾನವನ್ನ ವೃದ್ಧಿಸಲು ಹಾಗೂ ಸ್ವಾತಂತ್ರ್ಯ ಹೋರಾಟಗಳನ್ನು ಮನವರಿಕೆ ಮಾಡುವ ಉದ್ದೇಶದಿಂದ ಮಂಡಳಿಯ ಅಧ್ಯಕ್ಷ್ಯರಾದ, ಪುಷ್ಪಾ ಚಂದ್ರಶೇಖರ್,ಇಂದು 6 ಮತ್ತು 7 ನೇ ತರಗತಿ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ನಡೆಸಿದರು.
ಆಯ್ಕೆಯಾದ ಉತ್ತಮ ಬರಹಗಳಿಗೆ, ಗೌರವಾಧ್ಯಕ್ಷ್ಯ ಟಿ.ಚಂದ್ರಶೇಖರ್ ಪ್ರಥಮ, ದ್ವಿತೀಯ, ಹಾಗೂ ತೃತಿಯ ಬಹುಮಾನ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ, ಹಾಗೂ ಶಾಲೆಯ ಪ್ರಾಂಶುಪಾಲರು ವಿಜಯಲಕ್ಷ್ಮಿ, ಮಧುಸೂದನ್ ಮತ್ತು ಶಾಲೆಯ ಶಿಕ್ಷಕವೃಂದ ಉಪಸ್ಥಿತರಿದ್ದರು.